ಅಡುಗೆ

ಬೆಂಡೆಕಾಯಿ ರವಾ ಫ್ರೈ - Okra Rava Fry Recipe in Kannada

ರುಚಿಕರವಾದ ಬೆಂಡೆಕಾಯಿ ರವಾ ಫ್ರೈ ಮಾಡುವ ವಿಧಾನ...

ಬೆಂಡೆಕಾಯಿ ರವಾ ಫ್ರೈ - Okra Rava Fry Recipe in Kannada
ಬೆಂಡೆಕಾಯಿ ರವಾ ಫ್ರೈ
Published On :

ಬೇಕಾಗುವ ಪದಾರ್ಥಗಳು...

  • ಬೆಂಡೆಕಾಯಿ-20

  • ಖಾರದ ಪುಡಿ- 1 ಚಮಚ

  • ದನಿಯಾ ಪುಡಿ- 1 ಚಮಚ

  • ಇಂಗು- ಸ್ವಲ್ಪ

  • ರವೆ- 1/4 ಬಟ್ಟಲು

  • ಉಪ್ಪು-ರುಚಿಗೆ ತಕ್ಕಷ್ಟು

  • ಅರಿಶಿನ ಪುಡಿ- ಸ್ವಲ್ಪ

  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು

  • ಜೀರಿಗೆ ಪುಡಿ- ಅರ್ಧ ಚಮಚ

ಮಾಡುವ ವಿಧಾನ...

  • ಮೊದಲಿಗೆ ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಒಂದು ಬಟ್ಟೆಯಲ್ಲಿ ನೀರಿನಂಶವನ್ನೆಲ್ಲಾ ಒರೆಸಿಕೊಳ್ಳಿ.

  • ನಂತರ ಇದನ್ನು ಉದ್ದಕ್ಕೆ 4 ಭಾಗವಾಗಿ ಸೀಳಿಕೊಳ್ಳಿ. ನಂತರ ಇದನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಖಾರದಪುಡಿ, ದನಿಯಾ ಪುಡಿ, ಇಂಗು, ಉಪ್ಪು, ಅರಿಸಿನ ಪುಡಿ, ಜೀರಿಗೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು 15 ನಿಮಿಷಗಳ ಕಾಲ ಹಾಗೇ ಬಿಡಿ.

  • ಬೆಂಡೆಕಾಯಿ ನೀರು ಬಿಡುತ್ತದೆ. ನಂತರ ಒಂದು ತಟ್ಟೆಯಲ್ಲಿ ರವೆ ಇಟ್ಟುಕೊಳ್ಳಿ. ಒಂದು ಅಗಲವಾದ ಪಾತ್ರೆಗೆ ಎಣ್ಣೆ ಹಾಕಿ ಮಸಾಲೆ ಹಾಕಿಟ್ಟುಕೊಂಡ ಬೆಂಡೆಕಾಯಿಯನ್ನು ರವೆಯಲ್ಲಿ ಹೊರಳಿಸಿ ಎಣ್ಣೆ ಹಾಕಿ ಫ್ರೈ ಮಾಡಿಕೊಂಡರೆ ರುಚಿಕರವಾದ ಬೆಂಡೆಕಾಯಿ ರವಾ ಫ್ರೈ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.