ಫಿಫಾ ವಿಶ್ವಕಪ್: ಉರುಗ್ವೆ ಎದುರು ಮಣಿದ ರಷ್ಯಾ, 3-0 ಅಂತರದಿಂದ ಸೋಲುಂಡ ಅತಿಥೇಯರು
ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಸೋಮವಾರದ ಪಂದ್ಯದಲ್ಲಿ ಆತಿಥೇಯ ರಷ್ಯಾ ಮತ್ತು ಉರುಗ್ವೆ ಎದುರಾಗಿದ್ದು ಉರುಗ್ವೆ ರಷ್ಯಾವನ್ನು 3-0 ಅಂತರದಿಂದ ಮಣಿಸಿದೆ.

Published On :
ಸಮರಾ ಅರೆನಾ (ರಷ್ಯಾ): ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಸೋಮವಾರದ ಪಂದ್ಯದಲ್ಲಿ ಆತಿಥೇಯ ರಷ್ಯಾ ಮತ್ತು ಉರುಗ್ವೆ ಎದುರಾಗಿದ್ದು ಉರುಗ್ವೆ ರಷ್ಯಾವನ್ನು 3-0 ಅಂತರದಿಂದ ಮಣಿಸಿದೆ.
ತವರು ನೆಲದಲ್ಲಿಯೇ ಆಘಾತಕಾರಿ ಸೋಲು ಕಂಡ ರಷ್ಯಾ ತಂಡಕ್ಕೆ ಈ ಫಲಿತಾಂಶ ತೀವ್ರ ಹಿನ್ನೆಡೆಯಾಗಿದೆ.
ಪಂದ್ಯದ ಪ್ರಥಮಾರ್ಧದಲ್ಲಿ 2 , ದ್ವಿತೀಯಾರ್ಧದಲ್ಲಿ 1 ಗೋಲು ಗಳಿಸಿದ ಉರುಗ್ವೆ ರಷ್ಯಾದ ವಿರುದ್ಧ ವಿಜಯ ಸಾಧಿಸಿದೆ.
ಎ ಗುಂಪಿನ ಪಂದ್ಯದಲ್ಲಿ ಉರುಗ್ವೆ ನ ಲೂಯಿಸ್ ಸ್ವಾರೇಜ್ (10ನೇ ನಿಮಿಷ) ಡೆನಿಸ್ ಚೆರಿಶೆವ್ (23ನೇ ನಿಮಿಷ) ದಲ್ಲಿ ಗೋಲು ಗಳಿಸಿದ್ದರೆ ಕಡೆ ಕ್ಷಣದ ಪಂದ್ಯದ ವೇಳೆ ಇನ್ನೊಂದು ಗೋಲನ್ನು ಉರುಗ್ವೆ ನ ಎಡಿಸನ್ ಕವಾನಿ (90ನೇ ನಿಮಿಷ) ಬಾರಿಸಿ ತಂಡದ ಗೆಲುವಿಗೆ ಇನ್ನಷ್ಟು ಬಲ ತುಂಬಿದ್ದರು.
ರಷ್ಯಾ ಆಟಗಾರ ಇಗೊರ್ ಸ್ಮೊಲ್ನಿಕೋವ್ ವರ ವಿರುದ್ಧ ರೆಡ್ ಕಾರ್ಡ್ ಪ್ರದರ್ಶಿಸಿದ ಘಟನೆ ಸಹ ಇಂದು ನಡೆದಿದ್ದು ಅವರು ಪಂದ್ಯದಿಂದ ಹೊರನಡೆಯಬೇಕಾಯಿತು. ಫುಟ್ಬಾಲ್ ಪಂದ್ಯದ 36ನೇ ನಿಮಿಷದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು ರಷ್ಯಾ ಪರಾಭವಕ್ಕೆ ಇದು ಸಹ ಒಂದು ಕಾರಣ ಎನ್ನಬಹುದು.
ಇದೇ ವೇಳೆ ಪಂದ್ಯದ ಅಂತ್ಯಕ್ಕೆ ಮುನ್ನ ನಾಲ್ಕು ನಿಮಿಷದ ಹೆಚ್ಚುವರಿ ಕಾಲಾವಕಾಶ ನಿಡಲಾಗಿತ್ತು. ಆದರೆ ಈ ವೇಳೆ ಯಾವ ತಂಡದಿಂಡಲೂ ಗೋಲು ದಾಖಲಾಗಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


