ಫೀಫಾ ವಿಶ್ವ ಕಪ್ 2018

ವಿಶ್ವಕಪ್ ಫುಟ್ಬಾಲ್: ಈಜಿಪ್ಟ್ ವಿರುದ್ಧ ಸೌದಿ ಅರೇಬಿಯಾಗೆ 2-1 ಅಂತರದ ಜಯ

ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಎ ಗುಂಪಿನ ಪಂದ್ಯದಲ್ಲಿ ಸೋಮವಾರ ಸೌದಿ ಅರೇಬಿಯಾ ಎದುರಾಳಿ ಈಜಿಫ್ಟ್ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿದೆ.

ವಿಶ್ವಕಪ್ ಫುಟ್ಬಾಲ್: ಈಜಿಪ್ಟ್ ವಿರುದ್ಧ ಸೌದಿ ಅರೇಬಿಯಾಗೆ  2-1 ಅಂತರದ ಜಯ
ವಿಶ್ವಕಪ್ ಫುಟ್ಬಾಲ್: ಈಜಿಪ್ಟ್ ವಿರುದ್ಧ ಸೌದಿ ಅರೇಬಿಯಾಗೆ 2-1 ಅಂತರದ ಜಯ
Published On :
ವೋಲ್ಗೊಗ್ರಾಡ್ ಅರೆನಾ(ರಷ್ಯಾ): ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಎ ಗುಂಪಿನ ಪಂದ್ಯದಲ್ಲಿ ಸೋಮವಾರ ಸೌದಿ ಅರೇಬಿಯಾ ಎದುರಾಳಿ ಈಜಿಫ್ಟ್ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿದೆ.
ಪಂದ್ಯದ ಪ್ರಾರಂಭದಲ್ಲಿ ಈಜಿಪ್ಟ್ ನ ಪ್ರಮುಖ ಆಟಗಾರ ಮೊಹಮದ್ ಸಲಾಹ್ (22ನೇ ನಿಮಿಷ) ಗೋಲು ಗಳಿಸಿ ತಂಡದ ವಿಜಯಕ್ಕೆ ಪ್ರಯತ್ನಿಸಿದ್ದರು. ಆದರೆ ದ್ವಿತೀಯಾರ್ಧದಲ್ಲಿ ಸೌದಿ ಅರೇಬಿಯಾ ತಂಡ ಎರಡು ಗೋಲುಗಳನ್ನು ಗಳಿಸಿಕೊಳ್ಳುವ ಮೂಲಕ ವಿಜಯವನ್ನು ದಕ್ಕಿಸಿಕೊಂಡಿದೆ.
ಸೌದಿ ಅರೇಬಿಯಾದ ಪರವಾಗಿ ಸಲ್ಮಾನ್ ಅಲ್ ಫರಾಜ್ (51ನೇ ನಿಮಿಷ), ಸೇಲಂ ಅಲ್ ದಾವ್ಸಾರಿ (90+5ನೇ ನಿಮಿಷ) ಗೋಲು ಗಳಿಸಿದ್ದರು.
ಪಂದ್ಯದ 50ನೇ ಹಾಗೂ 86ನೇ ನೇ ನಿಮಿಷಗಳಲ್ಲಿ ಈಜಿಪ್ಟ್ ನ ಇಬ್ಬರು ಆಟಗಾರರಾದ ಆಲಿ ಗ್ಯಾಬ್ ಮತ್ತು ಅಹ್ಮದ್ ಫಾತಿ ಅವರ ವಿರುದ್ಧ ಹಳದಿ ಕಾರ್ಡ್ ಪ್ರದರ್ಶಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.