ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018: ಅಂತಿಮ ಕ್ಷಣದಲ್ಲಿ ಸ್ವೀಡನ್ ನಿಂದ ಗೆಲುವು ಕಸಿದ ಜರ್ಮನಿಯ 'ಆಪದ್ಭಾಂಧವ ಕ್ರೂಸ್'

ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಲೀಗ್ ಹಂತದ ಎಫ್ ಗ್ರೂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಜರ್ಮನಿ ಬಲಿಷ್ಟ ಸ್ವೀಡನ್ ವಿರುದ್ಧ 2-1 ಅಂತರದ ರೋಚಕ ಜಯ ಸಾಧಿಸಿದೆ.

ಫೀಫಾ ವಿಶ್ವಕಪ್ 2018: ಅಂತಿಮ ಕ್ಷಣದಲ್ಲಿ ಸ್ವೀಡನ್ ನಿಂದ ಗೆಲುವು ಕಸಿದ ಜರ್ಮನಿಯ 'ಆಪದ್ಭಾಂಧವ ಕ್ರೂಸ್'
ಗೋಲ್ ಬಾರಿಸಿದ ತಂಡದ ಗೆಲುವಿಗೆ ಕಾರಣರಾದ ಟೋನಿ ಕ್ರೂಸ್
Published On :
ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಲೀಗ್ ಹಂತದ ಎಫ್ ಗ್ರೂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಜರ್ಮನಿ ಬಲಿಷ್ಟ ಸ್ವೀಡನ್ ವಿರುದ್ಧ 2-1 ಅಂತರದ ರೋಚಕ ಜಯ ಸಾಧಿಸಿದೆ.
ರಷ್ಯಾದ ಫಿಶ್ಟ್ ಸ್ಟೇಡಿಯಂನಲ್ಲಿ ನಡೆದ ಜರ್ಮನಿ-ಸ್ವೀಡನ್ ನಡುವಿನ ಫೀಫಾ ವಿಶ್ವಕಪ್ ಎಫ್ ಗ್ರೂಪಿನ ಪಂದ್ಯದಲ್ಲಿ ಅಂತಿಮ ಕ್ಷಣದವರೆಗೂ ಗೆಲುವು ಬಿಟ್ಟುಕೊಡದ ಸ್ವೀಡನ್ ನಿಂದ ಜರ್ಮನಿಯ ಟೋನಿ ಕ್ರೂಸ್ ಫ್ರೀ ಕಿಕ್ ಮೂಲಕ ಗೆಲುವು ಕಸಿದರು. ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಜರ್ಮನಿ ಪಂದ್ಯದ 3ನೇ ನಿಮಿಷದಲ್ಲೇ ಗೋಲ್ ಬಾರಿಸುವ ಅವಕಾಶ ಸಿಕ್ಕಿತ್ತು. ಆದರೆ ಈ ಪ್ರಯತ್ನವನ್ನು ಸ್ವೀಡನ್ ಗೋಲ್ ಕೀಪರ್ ತಪ್ಪಿಸಿದರು. ಬಳಿಕ 22ನೇ ನಿಮಿಷದಲ್ಲೂ ಜರ್ಮನಿ ಗೋಲ್ ಬಾರಿಸುವ ಅವಕಾಶದಿಂದ ವಂಚಿತವಾಯಿತು. ಮತ್ತದೇ ಗೋಲ್ ಕೀಪರ್  ರಾಬಿನ್ ಓಲ್ಸೆನ್ ಜರ್ಮನಿಯ ಖಾತೆ ತೆರೆಯುವ ಅವಕಾಶವನ್ನು ತಪ್ಪಿಸಿದರು.
ಬಳಿಕ ಪಂದ್ಯದ 32ನೇ ನಿಮಿಷದಲ್ಲೇ ಸ್ವೀಡನ್ ನ ಓಲಾ ಟೊವೊನೆನ್ ಅವರು ಗೋಲ್ ಬಾರಿಸಿ ಸ್ವೀಡನ್  ಮೇಲುಗೈ ಸಾಧಿಸುವಂತೆ ಮಾಡಿದರು. ಪಂದ್ಯದ ಪ್ರಥಮಾರ್ಧ ಅವಧಿ ಮುಕ್ತಾಯಕ್ಕೂ ಮುನ್ನ ಎರಡು ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯಿತು. ಈ ಸಂದರ್ಭ ಅಂದರೆ 45+2ನೇ ನಿಮಿಷದಲ್ಲಿ ಸ್ವೀಡನ್ ಎರಡನೇ ಗೋಲ್ ದಾಖಲಿಸುವುದರಲ್ಲಿತ್ತು. ಆದರೆ ಜರ್ಮನಿ ಗೋಲ್ ಕೀಪರ್ ಮ್ಯಾನುಯೆಲ್ ನ್ಯೂಯರ್ ಗೋಲ್ ತಪ್ಪಿಸಿ ತಂಡವನ್ನು ಪಾರು ಮಾಡಿದರು.
ಬಳಿಕ 48ನೇ ನಿಮಿಷದಲ್ಲಿ ಮಾರ್ಕೋ ರೀಸ್ ಅವರು ಗೋಲ್ ಸಿಡಿಸಿ ಜರ್ಮನಿ ಅಂಕವನ್ನು 1-1 ಸಮಗೊಳಿಸಿದರು. ಸಮಯ ಮುಕ್ತಾಯದ ಹೊತ್ತಿಗೆ ಎರಡೂ ತಂಡಗಳು 1-1ರಲ್ಲಿ ಸಮಬಲ ಸಾಧಿಸಿದ್ದರಿಂದ ಪಂದ್ಯವನ್ನು 5 ನಿಮಿಷಗಳ ವಿಸ್ತರಣೆ ಮಾಡಲಾಯಿತು. ಹೆಚ್ಚುವರಿ ಸಮಯದಲ್ಲಿ ಎರಡೂ ತಂಡಗಳು ಆಕ್ರಮಣಕಾರಿ ಆಟಕ್ಕೆ ಮುಂದಾಯಿತಾದರೂ ಅಂತಿಮ ಕ್ಷಣದಲ್ಲಿ ಸಿಕ್ಕ ಫ್ರೀಕಿಕ್ ಅವಕಾಶವನ್ನು ಜರ್ಮನಿ ಸದುಪಯೋಗ ಪಡಿಸಿಕೊಂಡಿತು.
ಜರ್ಮನಿ ಪರ ಆಪದ್ಭಾಂಧವ ಎಂದೇ ಖ್ಯಾತಿ ಗಳಿಸಿರುವ ಟೋನಿ ಕ್ರೂಸ್ ಅಂತಿಮ ಕ್ಷಣದಲ್ಲಿ ಫ್ರೀ ಕಿಕ್ ಮೂಲಕ ಗೋಲ್ ಬಾರಿಸಿ ತಂಡದ ಗೆಲುವಿಗೆ ಕಾರಣರಾದರು. ಅತ್ತ ಕ್ರೂಸ್ ಗೋಲ್ ಬಾರಿಸುತ್ತಿದ್ದಂತೆಯೇ ಇತ್ತ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಅಲ್ಲಿಯೇ ಕುಣಿದು ಕುಪ್ಪಳಿಸಿದರು. ಅಂತಿಮ ಕ್ಷಣದ ಹೋರಾಟಗದ ಹೊರತಾಗಿಯೂ ಸ್ವೀಡನ್ ಸೊಲೊಪ್ಪಿಕೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.