ರೋಷನ್ ಬೇಗ್ ಬೆನ್ನಲ್ಲೇ ಕಾಂಗ್ರೆಸ್‌ಗೆ ಶಾಸಕ ಸುಧಾಕರ್ ಪಂಚ್!
ಮಾಜಿ ಸಚಿವ, ಕಾಂಗ್ರೆಸ್ ನಾಯಕ ರೋಷನ್ ಬೇಗ್ ಸಮ್ಮಿಶ್ರ ಸರ್ಕಾರದ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡಿ ಕೈ ಪಾಳಯದ ಇರುಸ ಮುರುಸಿಗೆ ಕಾರಣವಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಇನ್ನೋರ್ವ ....

Published On :
ಬೆಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ನಾಯಕ ರೋಷನ್ ಬೇಗ್ ಸಮ್ಮಿಶ್ರ ಸರ್ಕಾರದ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡಿ ಕೈ ಪಾಳಯದ ಇರುಸ ಮುರುಸಿಗೆ ಕಾರಣವಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಇನ್ನೋರ್ವ ಶಾಸಕ ಸಹ ಇವಿಎಂ ಗಳನ್ನು ಸಮರ್ಥಿಸಿಕೊಳ್ಳುವ ಮೂಲಕ ತಮ್ಮ ನಾಯಕರನ್ನು ಇನ್ನಷ್ಟು ಮುಜುಗರಕ್ಕೀಡುಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕ, ಶಾಸಕ ಡಾ. ಕೆ. ಸುಧಾಕರ್ ಇವಿಎಂ ಗಳನ್ನು ಸಮರ್ಥಿಸಿಕೊಂಡಿದ್ದು ಚುನಾವಣಾ ಆಯೋಗದ ಪರ ಬ್ಯಾಟ್ ಬೀಸಿದ್ದಾರೆ.
ಮಂಗಳವಾರ ಈ ಸಂಬಂಧ ಟ್ವೀಟ್ ಮಾಡಿದ್ದ ಸುಧಾಕರ್ "ವೈಯುಕ್ತಿಕವಾಗಿ ನನಗೆ ಗೊಂದಲವಾಗಿದೆ. ಎಕ್ಸಿಟ್ ಪೋಲ್ ಗಳ ಕುರಿತು ಮಾತನಾಡುವ ವೇಳೆ ಏಕೆ ಇವಿಎಂ ಕುಶಲತೆಗಳ ಸಮಸ್ಯೆ ಕುರಿತು ಹೇಳಲಾಗುತ್ತಿಒದೆ? ವಾಸ್ತವದಲ್ಲಿ ಎಕ್ಸಿಟ್ ಪೋಲ್ ಗಳು ಮತದಾನದ ಮುಕ್ತಾಯದ ವೇಳೆಯಲ್ಲಿನ ಮತದಾರರ ಭಾವನೆಯ ಸೂಚಕವಾಗಿದೆ"" ಎಂದಿದ್ದಾರೆ/
ಇದಾಗಿ ಪಿಟಿಐ ಜತೆಗೆ ಮಾತಣಾಡಿದ ಶಾಸಕ ಸುಧಾಕರ್ "ಎಕ್ಸಿಟ್ ಪೋಲ್ ಗಳಿಗೂ ಇವಿಎಂ ವಿರೂಪಗೊಳಿಸುವುಕೆಗೆ ಸಂಬಂಧವಿದೆ ಎಂದು ನಾನು ಭಾವಿಸಲಾರೆ" ಎಂದರು.
ಎಕ್ಸಿಟ್ ಪೋಲ್ ಬಗೆಗೆ ಮಾತ್ರ ನಾನು ಮಾತನಾಡುತ್ತೇನೆ. ಏಕೆಂದರೆ ಕೆಲವರಿಗೆ ಇದಕ್ಕೆ ಭಿನ್ನವಾದ ಆಲೋಚನೆಗಳಿದೆ.ಹಾಗೆಯೇ ಇವಿಎಂ ವಿರೂಪಗೊಳಿಸುವಂತಹದೇನನ್ನೂ ಎಕ್ಸಿಟ್ ಪೋಲ್ ನ ಸಮಯದಲ್ಲಿ ಮಾಡಲಾಗುವುದಿಲ್ಲ. ಏಕೆಂದರೆ ಮತದಾನದ ಮುಕ್ತಾಯದ ದಿನದಂದು ಈ ಮತಗಟ್ಟೆ ಸಮೀಕ್ಷೆಗಳು ನಡೆಯುತ್ತವೆ." ಎಂದು ಸುಧಾಕರ್ ಹೇಳಿದ್ದಾರೆ.
ಇದಕ್ಕೆ ಮುನ್ನ ಮಂಗಳವಾರ ರೋಷನ್ ಬೇಗ್ ಕಾಂಗ್ರೆಸ್ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕೆ.ಸಿ. ವೇಣುಗೋಪಾಲ್ ಅವರುಗಳ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದರು. ಇದೀಗ ಸಮ್ಮಿಶ್ರ ಸರ್ಕಾರದ ಇನ್ನೋರ್ವ ಶಾಸಕ ಸುಧಾಕರ್ ಸಹ ಪಕ್ಷದ ನಿಲುವಿಗೆ ವ್ಯತಿರಿಕ್ತವಾಗಿ ಮಾತನಾಡಿರುವುದು ಸರ್ಕಾರದ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


