ಕರ್ನಾಟಕ

ರೋಷನ್ ಬೇಗ್ ಗೆ ಸತ್ಯ, ಕೊನೆಗೂ ಅರ್ಥವಾಗಿದೆ: ಎಚ್. ವಿಶ್ವನಾಥ್

ರೋಷನ್ ಬೇಗ್ ಅವರಿಗೆ ಈಗ ಸತ್ಯದರಿವಾಗಿದೆ ಎಂದು ಈ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಗೆ ಹಿನ್ನೆಡೆಯಾದರೆ ಅದಕ್ಕೆ ಸಿದ್ದರಾಮಯ್ಯನವರೇ ಕಾರಣ ಎಂದಿರುವ ರೋಷನ್ ಬೇಗ್ ಬಗೆಗೆ ಜಾತ್ಯಾತೀತ ಜನತಾದಳ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಮೆಚ್ಚುಗೆ ಸೂಚಿಸಿದ್ದಾರೆ.

ರೋಷನ್ ಬೇಗ್ ಗೆ ಸತ್ಯ, ಕೊನೆಗೂ ಅರ್ಥವಾಗಿದೆ: ಎಚ್. ವಿಶ್ವನಾಥ್
ಎಚ್. ವಿಶ್ವನಾಥ್
Published On :
ಬೆಂಗಳೂರು: ರೋಷನ್ ಬೇಗ್ ಅವರಿಗೆ ಈಗ ಸತ್ಯದರಿವಾಗಿದೆ ಎಂದು  ಈ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಗೆ ಹಿನ್ನೆಡೆಯಾದರೆ ಅದಕ್ಕೆ ಸಿದ್ದರಾಮಯ್ಯನವರೇ ಕಾರಣ ಎಂದಿರುವ ರೋಷನ್ ಬೇಗ್ ಬಗೆಗೆ ಜಾತ್ಯಾತೀತ ಜನತಾದಳ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಮೆಚ್ಚುಗೆ ಸೂಚಿಸಿದ್ದಾರೆ.
"ಸಿದ್ದರಾಮಯ್ಯ ಅವರದ್ದು ಪ್ಲಾಪ್ ಶೋ ಎಂದು ನಾನು ಬಾಯಿ ಬಿಟ್ಟು ಹೇಳುವುದಿಲ್ಲ. ಆದರೆ ಅಂತಿಮ ಕಾಲದಲ್ಲಿ ರೋಷನ್ ಬೇಗ್ ಅವರಿಗೆ ಸತ್ಯದ ಅರಿವಾಗಿದೆ. ಬೇಗ್ ಅವರಿಗೆ ಕೃತಜ್ಞತೆಸಲ್ಲಿಸುವೆ. " ವಿಶ್ವನಾಥ್ ಹೇಳಿದ್ದಾರೆ.
ಕಡೆಗಾಲದಲ್ಲಾದರೂ ಸತ್ಯದ ಅರಿವಾಯಿತಲ್ಲ ಎಂದಿರುವ ವಿಶ್ವನಾಥ್ ರೋಷನ್ ಬೇಗ್ ಪರ ಬ್ಯಾಟ್ ಬೀಸಿದ್ದಾರೆ.
ಇದಕ್ಕೆ ಮುನ್ನ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದ ರೋಷನ್ ಬೇಗ್ ಈ ಚುನಾವಣೆಯಲ್ಲಿ ಸೋಲಾದರೆ ಅದಕ್ಕೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಹಾಗೂ ವೇಣುಗೋಪಾಲ್ ನೇರ ಹೊಣೆ ಎಂದು ಹೇಳಿದ್ದರು. ಅಲ್ಲದೆ ಎಕ್ಸಿಟ್ ಪೋಲ್ ನೋಡಿದರೆ ನನಗೆ ಬೇಸರವಾಗುತ್ತದೆ ಎಂದು ಬಹಿರಂಗವಾಗಿ ತಮ್ಮ ಪಕ್ಷದ ನಾಯಕರ ವಿರುದ್ಧವೇ ಅಸಮಧಾನ ವ್ಯಕ್ತಪಡಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.