ಕರ್ನಾಟಕ

ಅನಂತ್ ಕುಮಾರ್ ಈಗಲೂ ನಮ್ಮ ಸಂಸದರು: ರಾಗಿಹಳ್ಳಿ ನಿವಾಸಿಗಳು

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬಳಿ ಇರುವ ಬೆಂಗಳೂರಿನಿಂದ 50 ಕಿಲೋ ಮೀಟರ್ ದೂರದಲ್ಲಿರುವ ರಾಗಿಹಳ್ಳಿ ನಿವಾಸಿಗಳಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ದಿವಂಗತ ಸಂಸದ ಹೆಚ್ ಎನ್ ಅನಂತ್ ಕುಮಾರ್ ಅವರೇ ಈಗಲೂ ಸಂಸದರು.

ಅನಂತ್ ಕುಮಾರ್ ಈಗಲೂ ನಮ್ಮ ಸಂಸದರು: ರಾಗಿಹಳ್ಳಿ ನಿವಾಸಿಗಳು
ಗ್ರಾಮಸ್ಥರು
Published On :

ರಾಗಿಹಳ್ಳಿ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬಳಿ ಇರುವ ಬೆಂಗಳೂರಿನಿಂದ 50 ಕಿಲೋ ಮೀಟರ್ ದೂರದಲ್ಲಿರುವ ರಾಗಿಹಳ್ಳಿ ನಿವಾಸಿಗಳಿಗೆ  ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ದಿವಂಗತ ಸಂಸದ ಹೆಚ್ ಎನ್ ಅನಂತ್ ಕುಮಾರ್ ಅವರೇ ಈಗಲೂ ಸಂಸದರು.  

ಈ ಹಳ್ಳಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬಂದರೂ ಇಲ್ಲಿನ ನಿವಾಸಿಗಳು ಮಾತ್ರ ಅನಂತ್ ಕುಮಾರ್ ರೇ  ರಾಷ್ಟ್ರಮಟ್ಟದ ನಮ್ಮ ಪ್ರತಿನಿಧಿ ಎಂಬ ಭಾವನೆಯಲ್ಲಿದ್ದಾರೆ. ಕಾರಣ,  2014ರಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಅನಂತ್ ಕುಮಾರ್  ಈ ಗ್ರಾಮವನ್ನು ದತ್ತುಪಡೆದುಕೊಂಡು ಅಭಿವೃದ್ಧಿಗೊಳಿಸಿದ್ದಾರೆ.

ರಾಗಿಹಳ್ಳಿಯಲ್ಲಿನ ಪ್ರತಿಯೊಂದು ಮನೆಗಳೂ ಶೌಚಾಲಯ, ಕಾಂಕ್ರೀಟ್ ರಸ್ತೆ ಹೊಂದಿದ್ದು, ಕುಡಿಯುವ ನೀರಿನ ಘಟಕವಿದೆ. ಸರ್ಕಾರಿ ಶಾಲೆ, ರಾಷ್ಟ್ರೀಕೃತ ಬ್ಯಾಂಕು, ಉತ್ತಮ ಮೂಲಸೌಕರ್ಯಗಳಿಂದ ಕೂಡಿದ ಪಂಚಾಯಿತಿ ಕಚೇರಿ, ಎಟಿಎಂ, ಡೈರಿ ಇದ್ದು, ಎಲ್ಲಿಯೂ ಕಸ ಕಂಡುಬರುವುದಿಲ್ಲ.

ಅನಂತ್ ಕುಮಾರ್ ಅವರ ಕಾರಣದಿಂದಾಗಿ ಈ ಹಳ್ಳಿ ಎಲ್ಲಾ ಸೌಕರ್ಯಗಳನ್ನು ಹೊಂದುವಂತಾಗಿದೆ. ಅವರ ಅಕಾಲಿಕ ನಿಧನ ನಮ್ಮಗೆಲ್ಲ ನೋವು ತಂದಿದೆ. ಆದರೆ, ಈಗಲೂ ಅವರೇ ನಮ್ಮ ಸಂಸದರು ಇಂದು ಗ್ರಾಮಸ್ಥ ಶಿವರುದ್ರ ಹೇಳುತ್ತಾರೆ.
ಅನಂತ್ ಕುಮಾರ್ ರಾಷ್ಟ್ರ ರಾಜಕಾರಣದಲ್ಲಿ ಬ್ಯುಸಿ ಇದ್ದಾಗ ಅವರ ಪತ್ನಿಯನ್ನು ಗ್ರಾಮಕ್ಕೆ ಕಳುಹಿಸಿ ಸಮಸ್ಯೆ ಪರಿಹರಿಸುತ್ತಿದ್ದರು ಎಂದು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ. ಅನಂತ್ ಕುಮಾರ್ ನಿಧನದ ಬಳಿಕವೂ ಏನಾದರೂ ಸಹಾಯ ಬೇಕಿದ್ದರೆ ಅವರ ಪತ್ನಿ ತೇಜಸ್ವಿನಿ ಅವರನ್ನು  ಪಂಚಾಯತ್ ಅಧಿಕಾರಿಗಳ ಮೂಲಕ ಸಂಪರ್ಕಿಸುತ್ತೇವೆ ಎಂದು ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.