ಅಯೋಧ್ಯೆ ವಿವಾದ: ತುರ್ತು ಸಭೆ ಕರೆದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ
ಅಯೋಧ್ಯೆ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ನೇಮಿತ ಸಂಧಾನ ಸಮಿತಿ ಸಂಧಾನ ಮಾತುಕತೆ ನಡೆಸಿರುವಂತೆಯೇ ಇತ್ತ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು(ಎಐಎಂಪಿಎಲ್‌ಬಿ) ತನ್ನ ಕಾರ್ಯಕಾರಿಣಿ ಸಮಿತಿಯ ತುರ್ತು ಸಭೆ ಕರೆದಿದೆ.

Published On :
ಲಖನೌ: ಅಯೋಧ್ಯೆ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ನೇಮಿತ ಸಂಧಾನ ಸಮಿತಿ ಸಂಧಾನ ಮಾತುಕತೆ ನಡೆಸಿರುವಂತೆಯೇ ಇತ್ತ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು(ಎಐಎಂಪಿಎಲ್‌ಬಿ) ತನ್ನ ಕಾರ್ಯಕಾರಿಣಿ ಸಮಿತಿಯ ತುರ್ತು ಸಭೆ ಕರೆದಿದೆ.
ಅಯೋದ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು(ಎಐಎಂಪಿಎಲ್‌ಬಿ) ತನ್ನ ಕಾರ್ಯಕಾರಿಣಿ ಸಮಿತಿಯ ತುರ್ತು ಸಭೆ ಕರೆದಿದೆ. ಸಮಿತಿಯಲ್ಲಿರುವ ಎಲ್ಲ 51 ಸದಸ್ಯರೂ ಇಂದು(ಭಾನುವಾರ) ನಡೆಯಲಿರುವ ಸಭೆಗೆ ಹಾಜರಾಗುವ ನಿರೀಕ್ಷೆಯಿದೆ. ಸುನ್ನೀ ವಕ್ಫ್ ಮಂಡಳಿ ಪ್ರತಿನಿಧಿಗಳೂ ಆಗಮಿಸಲಿದ್ದಾರೆ ಎನ್ನಲಾಗಿದೆ.
ರಾಜಕೀಯವಾಗಿ ಭಾರಿ ಮಹತ್ವ ಪಡೆದುಕೊಂಡಿರುವ ಈ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳುವಂತೆ ಸುಪ್ರಿಂಕೋರ್ಟ್ ಸಂಧಾನ ಸಮಿತಿಯನ್ನು ರಚಿಸಿತ್ತು. ಮಾರ್ಚ್ 13ರಂದು ನಡೆದ ಮೊದಲ ಸಭೆಯಲ್ಲಿ ಎಲ್ಲ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿ ಚರ್ಚೆ ನಡೆಸಿದ್ದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎಫ್.ಎಂ. ಇಬ್ರಾಹಿಂ ಖಲೀಫುಲ್ಲಾ ಸಭೆಯ ಯಾವುದೇ ವಿಚಾರವನ್ನು ವರದಿ ಮಾಡದಂತೆ ಮಾಧ್ಯಮಗಳಿಗೆ ಸೂಚಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಉತ್ತರಪ್ರದೇಶಲಖನೌLucknowUttarpradeshAIMPLBಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿAyodhya land Dispute caseಅಯೋಧ್ಯಾ ಭೂ ವಿವಾದ ಪ್ರಕರಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


