ಸಿದ್ದರಾಮಯ್ಯ ಬಂದ್ರೂ ಏನೂ ಆಗಲ್ಲ, ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಲು ಸಾಧ್ಯವಿಲ್ಲ: ಎಚ್ ಡಿ ದೇವೇಗೌಡ
ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಲು ಕೆಲವರು ಪಕ್ಷಾತೀತವಾಗಿ ಒಂದಾಗಿದ್ದು, ಸಿದ್ದರಾಮಯ್ಯ ಬಂದ್ರೂ ಇಲ್ಲಿ ಬಂಡಾಯ ಶಮನವಾಗಿಲ್ಲ.. ನಿಖಿಲ್ ರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದ್ದಾರೆ.

Published On :
ಬೆಂಗಳೂರು: ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಲು ಕೆಲವರು ಪಕ್ಷಾತೀತವಾಗಿ ಒಂದಾಗಿದ್ದು, ಸಿದ್ದರಾಮಯ್ಯ ಬಂದ್ರೂ ಇಲ್ಲಿ ಬಂಡಾಯ ಶಮನವಾಗಿಲ್ಲ.. ನಿಖಿಲ್ ರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರು ಮೈತ್ರಿ ಅಭ್ಯರ್ಥಿಗೆ ಬೆಂಬಲಿಸದಿರುವ ಕುರಿತು ಮಾತನಾಡಿದ ದೇವೇಗೌಡ ಅವರು, 'ನಿಖಿಲ್ ಸೋಲಿಸುವ ಮೂಲಕ ಕುಮಾರಸ್ವಾಮಿಗೆ ಮುಖಭಂಗ ಮಾಡಲು ಮಂಡ್ಯದಲ್ಲಿ ಪಕ್ಷಾತೀತವಾಗಿ ಕೆಲವರು ಪಣ ತೊಟ್ಟಿದ್ದಾರೆ. ಮಂಡ್ಯದಲ್ಲಿ ಕೆಲ ಕಾಂಗ್ರೆಸ್ ನಾಯಕರು ಈಗಾಗಲೇ ಬಹಳ ದೂರ ಹೋಗಿದ್ದಾರೆ. ಸಿದ್ದರಾಮಯ್ಯ ಅವರೇ ಖುದ್ದು ಬಂದರೂ ಫಲಕಾರಿಯಾಗುವುದಿಲ್ಲ ಎನ್ನುವ ಹಂತಕ್ಕೆ ಸ್ಥಿತಿ ತಲುಪಿದೆ ಎಂದು ಹೇಳಿದ್ದಾರೆ.
ಅಂತೆಯೇ ತುಮಕೂರಿನ ಕುರಿತು ಕೆ.ಆರ್. ಪೇಟೆಯಲ್ಲಿ ಮಾತನಾಡಿದ ದೇವೇಗೌಡ ಅವರು, ನನ್ನ ಗೆಲುವಿಗೆ ಪರಮೇಶ್ವರ್ ಹಾಗೂ ನಿಖಿಲ್ ಗೆಲುವಿಗೆ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ. ಮಂಡ್ಯ ಮತ್ತು ತುಮಕೂರು ಕ್ಷೇತ್ರಗಳಲ್ಲಿ ಇರುವ ಭಿನ್ನಮತ ಶಮನಕ್ಕೆ ಇಬ್ಬರೂ ಮುಂದಾಗಿದ್ದಾರೆ. ಆದರೆ, ಸಿದ್ದರಾಮಯ್ಯ ಹೋದರೂ ಮಂಡ್ಯದಲ್ಲಿ ಯಾವುದೇ ಪ್ರಯೋಜನವಿಲ್ಲ. ಆ ರೀತಿಯ ಪರಿಸ್ಥಿತಿ ಮಂಡ್ಯದಲ್ಲಿ ಏರ್ಪಟ್ಟಿದೆ. ಅಲ್ಲಿ ಬಂಡಾಯ ಶಮನವಾಗುವ ಲಕ್ಷಣಗಳೇ ಇಲ್ಲ. ನಮ್ಮ ವಿರುದ್ಧ ಪಣತೊಟ್ಟವರ ಮನೆ ಬಾಗಿಲಿಗೆ ನಾವು ಹೋಗಲ್ಲ. ನನ್ನ ಜೊತೆ ಬಂಧು ಬಾಂಧವರಾದ ನೀವಿದ್ದೀರಿ. ನಿಮ್ಮನ್ನು ಬಿಟ್ಟು ನಾನು ಯಾರ ಬಳಿ ಹೋಗ್ಲಿ? ಯಾರ ಬಳಿ ಹೋಗುವುದು ಎಂದು ನಾನು ನಿಮ್ಮ ಹತ್ತಿರವೇ ಕೇಳುತ್ತೇನೆ. ಇದಕ್ಕಾಗಿ ನಮ್ಮ ಪಕ್ಷದ ಯುವಕರು ಪಣ ತೊಡಬೇಕು. ಅತ್ಯಂತ ಹೆಚ್ಚಿನ ಬಹುಮತದಿಂದ ನಿಖಿಲ್ ರನ್ನು ಗೆಲ್ಲಿಸಬೇಕು ಎಂದು ಹೇಳಿದರು.
ನಟರ ಆಕರ್ಷರಣೆ ಹೊರತಾಗಿಯೂ ಜನ ನಮ್ಮ ಕೈ ಬಿಡುವುದಿಲ್ಲ
ಇದೇ ವೇಳೆ ದರ್ಶನ್ ಮತ್ತು ಯಶ್ ಅವರ ಪ್ರಚಾರದ ಕುರಿತು ಮಾತನಾಡಿದ ದೇವೇಗೌಡ ಅವರು, 'ಸಿನಿಮಾ ನಟರಿಗೆ ಜನರನ್ನು ಆಕರ್ಷಣೆ ಮಾಡುವ ಶಕ್ತಿ ಇದೆ. ಹಾಗೆಂದು ಸಿನೆಮಾ ನಟರ ಅಬ್ಬರದಿಂದ ಜನ ನಮ್ಮ ಕೈ ಬಿಡುವುದಿಲ್ಲ ಎಂಬ ಭರವಸೆ ಇದೆ. ನಾನು ಪ್ರಧಾನಿಯಾಗಿದ್ದಾಗ ತುಂಬಾ ನೋವುಂಡಿದ್ದೇನೆ. ನಾನು ಕಳೆದ 22 ವರ್ಷದಿಂದ ಕಾಂಗ್ರೆಸ್ ಬಗ್ಗೆಯಾಗಲೀ, ಸೋನಿಯಾ, ರಾಹುಲ್ ವಿರುದ್ದವಾಗಲೀ ಮಾತನಾಡಿಲ್ಲ ಎಂದು ಹೇಳಿದರು. ಅಂತೆಯೇ ಯಾವುದೇ ಕಾರಣಕ್ಕೂ ಎದುರಾಳಿಗಳ ನಿಂದನೆ ಮಾಡಬೇಡಿ. ಅವತ್ತು ಕುಮಾರಣ್ಣ ಬಂದು ನಾನು ತಪ್ಪು ಮಾಡಿದೆ ಎಂದ. ಆಗ ನಾನು ತಪ್ಪು ಮಾಡಿದ್ರು ಪರವಾಗಿಲ್ಲ ಹೋಗಿ ಜನಕ್ಕೆ ಒಳ್ಳೆದು ಮಾಡು ಅಂದೆ. ಅಂದು ಪಕ್ಷದ ಉಳಿವಿಗಾಗಿ ಕುಮಾರಸ್ವಾಮಿ ಬೇರೆಯವರ ಜೊತೆ ಹೋಗಿ ಪಕ್ಷ ಉಳಿಸಿಕೊಂಡ ಎಂದು ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruHD Deve GowdaPoliticsರಾಜಕೀಯಎಚ್ ಡಿ ದೇವೇಗೌಡಲೋಕಸಭಾ ಚುನಾವಣೆ 2019Loksabha Election 2019ನಿಖಿಲ್ ಕುಮಾರಸ್ವಾಮಿNikhil Kumaraswamy
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


