ಬಿಸಿಲಿಗೆ ಬೆದರಿದ ಉಪೇಂದ್ರ: 1 ನಿಮಿಷದಲ್ಲೇ ರೋಡ್ ಶೋ ಬಿಟ್ಟು ಕಾರಿನಲ್ಲಿ ತೆರಳಿದ ನಟ
ಕೋಟೆ ನಗರಿ ಚಿತ್ರದುರ್ಗದ ಉರಿ ಬಿಸಿಲಿಗೆ ಬೆದರಿದ ನಟ ಉಪೇಂದ್ರ ಅವರು ಒಂದು ನಿಮಿಷದಲ್ಲೇ ರೋಡ್ ಶೋ ಮುಗಿಸಿ ತೆರಳಿದ್ದಾರೆ....

Published On :
ಚಿತ್ರದುರ್ಗ: ಕೋಟೆ ನಗರಿ ಚಿತ್ರದುರ್ಗದ ಉರಿ ಬಿಸಿಲಿಗೆ ಬೆದರಿದ ನಟ ಉಪೇಂದ್ರ ಅವರು ಒಂದು ನಿಮಿಷದಲ್ಲೇ ರೋಡ್ ಶೋ ಮುಗಿಸಿ ತೆರಳಿದ್ದಾರೆ.
ಉಪೇಂದ್ರ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ನಡೆಸಬೇಕಿತ್ತು. ಪಟ್ಟಣದ ಶ್ರೀ ವೀರಭದ್ರಸ್ವಾಮಿ ದೇವಾಲಯದಿಂದ ರೋಡ್ ಶೋ ಬೆಳಗ್ಗೆ 9 ಗಂಟೆಗೆ ಅರಂಭವಾಗಬೇಕಿತ್ತು. ಆದರೆ ಅವರು ಅರ್ಧ ಗಂಟೆ ತಡವಾಗಿ ಆಗಮಿಸಿದ್ದರು. ಬಳಿಕ ದೇವಾಲಯಕ್ಕೆ ಭೇಟಿ ನೀಡಿದ ಅವರು ರೋಡ್ ಶೋ ಆರಂಭಿಸಿದ್ದರು.
ಉರಿ ಬಿಸಿಲನ ತಾಪ ತಾಳಲಾರದೇ ಕೇವಲ ಒಂದು ನಿಮಿಷದಲ್ಲಿ ಭಾಷಣ ಮುಗಿಸಿದ ಉಪೇಂದ್ರ ರೋಡ್ ಶೋ ಮೊಟಕುಗೊಳಿಸಿ ಕಾರು ಹತ್ತಿ ಸ್ಥಳದಿಂದ ತೆರಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


