ಕರ್ನಾಟಕ

28 ವರ್ಷ ಸಂಸಾರ ಮಾಡಿದ್ದಾರೆ ಅಂದ ಮೇಲೆ ಸುಮಲತಾ ಕೂಡ ಗೌಡ್ತಿನೇ!

ಮದುವೆಯಾಗಿ 28 ವರ್ಷ ಸಂಸಾರ ಮಾಡಿದ ಮೇಲೆ ಗಂಡನ ಜಾತಿಯೇ ಹೆಂಡತಿಗೆ ಬರುತ್ತದೆ, ಹೀಗಾಗಿ ಸುಮಲತಾ ಕೂಡಡ ಗೌಡ್ತಿಯೆ ಎಂದು ಸಚಿವ ಎಂಟಿಬಿ ...

28 ವರ್ಷ ಸಂಸಾರ ಮಾಡಿದ್ದಾರೆ ಅಂದ ಮೇಲೆ ಸುಮಲತಾ ಕೂಡ ಗೌಡ್ತಿನೇ!
ಸುಮಲತಾ ಅಂಬರೀಷ್
Published On :
ಬೆಂಗಳೂರು: ಮದುವೆಯಾಗಿ 28 ವರ್ಷ ಸಂಸಾರ ಮಾಡಿದ ಮೇಲೆ ಗಂಡನ ಜಾತಿಯೇ ಹೆಂಡತಿಗೆ ಬರುತ್ತದೆ, ಹೀಗಾಗಿ ಸುಮಲತಾ ಕೂಡಡ ಗೌಡ್ತಿಯೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಕಾಂಗ್ರೆಸ್ ಸಚಿವ ಎಂಟಿಬಿ ನಾಗರಾಜ್ ಜೆಡಿಎಸ್ ಸಂಸದರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾತಿ ವೈಷಮ್ಯದ ಹೇಳಿಕೆ ನೀಡಿ ಭಾವನೆ ಕೆರಳಿಸಬಾರದು ಮಂಡ್ಯ ಸಂಸದ ಶಿವರಾಮೇಗೌಡರಿಗೆ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಮದುವೆಯಾಗಿ ಇಬ್ಬರು ವಿಲೀನವಾದ ಮೇಲೆ ಗಂಡು ಮಗುವಾಗಿದೆ. ಜನಗಳ ಭಾವನೆಗಳನ್ನು ಕೆರಳಿಸುವ ನಿಟ್ಟಿನಲ್ಲಿ ಕೆಲವರು ರಾಜಕೀಯವಾಗಿ ಬಣ್ಣಕಟ್ಟಲು ಜಾತಿ ಬಳಕೆ ಮಾಡ್ತಾರೆ. ಆದರೆ ಅದನ್ನು ಮಾಡದೆ ಜನರಲ್ಲಿ ಕೈ ಮುಗಿದು, ಸಾಧನೆಗಳನ್ನು ತಿಳಿಸಿ ಮತಯಾಚಿಸಬೇಕು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.