ಕೇಂದ್ರದಲ್ಲಿ ಯಾರನ್ನೂ ಬೆಂಬಲಿಸಲು ಸಿದ್ಧ, ಆದರೆ ಷರತ್ತು ಅನ್ವಯ: ವೈಎಸ್ ಆರ್ ಪಿ; ಏನದು ಷರತ್ತು?
2019 ರ ಲೋಕಸಭಾ ಚುನಾವಣೆ ಫಲಿತಾಂಶ ಮೇ.23 ರಂದು ಪ್ರಕಟಗೊಳ್ಳಲಿದ್ದು, ಒಂದು ವೇಳೆ ಅತಂತ್ರ ಸಂಸತ್ ಎದುರಾದರೆ...

Published On :
ನವದೆಹಲಿ: 2019 ರ ಲೋಕಸಭಾ ಚುನಾವಣೆ ಫಲಿತಾಂಶ ಮೇ.23 ರಂದು ಪ್ರಕಟಗೊಳ್ಳಲಿದ್ದು, ಒಂದು ವೇಳೆ ಅತಂತ್ರ ಸಂಸತ್ ಎದುರಾದರೆ ಸರ್ಕಾರ ರಚನೆಯಲ್ಲಿ ಪ್ರಾದೇಶಿಕ ಪಕ್ಷಗಳ ನಾಯಕತ್ವ ಮಹತ್ವದ ಪಾತ್ರ ನಿರ್ವಹಿಸಲಿದೆ. ಈ ಪೈಕಿ ವೈಎಸ್ ಆರ್ ಕಾಂಗ್ರೆಸ್ ನ ಜಗನ್ ಮೋಹನ್ ರೆಡ್ಡಿ ಅವರೂ ಒಬ್ಬರು.
ಈ ನಡುವೆ ಅಂದಿಕೊಂಡಂತೆಯೇ ಕೇಂದ್ರದಲ್ಲಿ ಅತಂತ್ರ ಫಲಿತಾಂಶ ಬಂದರೆ ತಾವು ಯಾರನ್ನು ಬೇಕಾದರೂ ಬೆಂಬಲಿಸಲು ಸಿದ್ಧವಿರುವುದಾಗಿ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಹೇಳಿದೆ.
ಆದರೆ ಬೆಂಬಲ ನೀಡುವುದಕ್ಕೆ ವೈಎಸ್ ಆರ್ ಕಾಂಗ್ರೆಸ್ ಕೆಲವು ಷರತ್ತುಗಳನ್ನು ಮುಂದಿಟ್ಟಿದೆ. ಈ ವರೆಗೂ ಯಾವುದೇ ಮೈತ್ರಿಕೂಟದೊಂದಿಗೂ ಗುರುತಿಸಿಕೊಳ್ಳದ ವೈಎಸ್ ಆರ್ ಕಾಂಗ್ರೆಸ್, ಆಂಧ್ರಪ್ರದೇಶಕ್ಕೆ ಯಾರು ವಿಶೇಷ ಸ್ಥಾನ-ಮಾನ ನೀಡುತ್ತಾರೋ ಅವರಿಗೆ ಸರ್ಕಾರ ರಚನೆಗೆ ಬೆಂಬಲ ಘೋಷಿಸುವುದಾಗಿ ವೈಎಸ್ ಆರ್ ನ ಹಿರಿಯ ನಾಯಕ ಮೆಕಪತಿ ರಾಜಮೋಹನ್ ರೆಡ್ಡಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Andhra Pradeshallianceಮೈತ್ರಿಆಂಧ್ರಪ್ರದೇಶYSR Congressವೈಎಸ್ ಆರ್ ಕಾಂಗ್ರೆಸ್Lok Sabha elections 2019 resultsಲೋಕಸಭಾ ಚುನಾವಣೆ ಫಲಿತಾಂಶ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


