ನೂತನ ಸಂಸದರಿಗೆ ಆರಂಭದಲ್ಲೇ ಶಾಕ್, ಖಾಸಗಿ ಹೊಟೆಲ್ ಬಿಲ್ ಪಾವತಿ ಮಾಡಲ್ಲ ಎಂದ ಲೋಕಸಭಾ ಕಾರ್ಯದರ್ಶಿ
ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಫಲಿತಾಂಶ ಪ್ರಕಟವಾಗಲಿದೆ. ಆದರೆ ಫಲಿತಾಂಶ ಪ್ರಕಟವಾಗುವ ಮುನ್ನವೇ ಹೊಸದಾಗಿ ಆಯ್ಕೆಯಾಗುವ ಸಂಸದರಿಗೆ ಲೋಕಸಭಾ ಕಾರ್ಯದರ್ಶಿಗಳು ಶಾಕ್ ನೀಡಿದ್ದಾರೆ.

Published On :
ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಫಲಿತಾಂಶ ಪ್ರಕಟವಾಗಲಿದೆ. ಆದರೆ ಫಲಿತಾಂಶ ಪ್ರಕಟವಾಗುವ ಮುನ್ನವೇ ಹೊಸದಾಗಿ ಆಯ್ಕೆಯಾಗುವ ಸಂಸದರಿಗೆ ಲೋಕಸಭಾ ಕಾರ್ಯದರ್ಶಿಗಳು ಶಾಕ್ ನೀಡಿದ್ದಾರೆ.
ಹೌದು.. ಹಾಲಿ ಚುನಾವಣೆಯಲ್ಲಿ ಲೋಕಸಭೆಗೆ ಆಯ್ಕೆಯಾಗುವ ನೂತನ ಸಂಸದರು ಖಾಸಗಿ ಹೊಟೆಲ್ ನಲ್ಲಿ ವಾಸ್ತವ್ಯ ಹೂಡಿದರೆ ಅಂತಹ ಸಂಸದರ ಹೊಟೆಲ್ ಬಿಲ್ ಅನ್ನು ತಾವು ಪಾವತಿ ಮಾಡುವುದಿಲ್ಲ. ನೂತನ ಸಂಸದರು ಕಡ್ಡಾಯವಾಗಿ ಆಯಾ ರಾಜ್ಯಗಳ ಭವನಗಳು, ವೆಸ್ಚರ್ನ್ ಕೋರ್ಟ್ ಮತ್ತು ಸಂಸದರಗಾಗಿಯೇ ಇರುವ ಹಾಸ್ಟೆಲ್ ಗಳಲ್ಲಿ ತಂಗಬೇಕು ಎಂದು ಹೇಳಿದೆ.
ಈ ಬಗ್ಗೆ ಲೋಕಸಭಾ ಕಾರ್ಯದರ್ಶಿಗಳಾದ ಸ್ನೇಹಲತಾ ಶ್ರೀವಾತ್ಸವ ಅವರು ಬುಧವಾರ ನೂತನ ಆದೇಶ ಹೊರಡಿಸಿದ್ದು, ಹೊಸದಾಗಿ ಆಯ್ಕೆಯಾಗುವ ಲೋಕಸಭಾ ಸದಸ್ಯರು ಖಾಸಗಿ ಹೊಟೆಲ್ ನಲ್ಲಿ ತಂಗುವಂತಿಲ್ಲ. ಒಂದು ವೇಳೆ ತಂಗಿದರೆ ಅಂತಹ ಹೊಟೆಲ್ ಗಳ ಬಿಲ್ ಗಳನ್ನು ಕಾರ್ಯಾಲಯ ಪಾವತಿ ಮಾಡುವುದಿಲ್ಲ, ಸಂಸದರು ಕಡ್ಡಾಯವಾಗಿ ಆಯಾ ರಾಜ್ಯಗಳ ಭವನಗಳು, ವೆಸ್ಚರ್ನ್ ಕೋರ್ಟ್ ಮತ್ತು ಸಂಸದರಗಾಗಿಯೇ ಇರುವ ಹಾಸ್ಟೆಲ್ ಗಳಲ್ಲಿ ತಂಗಬೇಕು ಎಂದು ಹೇಳಿದ್ದಾರೆ.
ನಾಳೆ ಚುನಾವಣಾ ಫಲಿತಾಂಶ ಘೋಷಣೆಯಾಗಲಿದ್ದು, ಫಲಿತಾಂಶ ಘೋಷಣೆ ಬೆನ್ನಲ್ಲೇ ಎಲ್ಲ ಸಂಸದರೂ ದೆಹಲಿಯತ್ತ ಮುಖ ಮಾಡುತ್ತಾರೆ. ಹೀಗಾಗಿ ನೂತನ ಸಂಸದರು ತಂಗಲು ಆಯಾ ರಾಜ್ಯಗಳ ಭವನಗಳಲ್ಲಿ ಮತ್ತು ಹಾಸ್ಟೆಲ್ ಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಇನ್ನು ಈ ಹಿಂದೆ ಖಾಸಗಿ ಹೊಟೆಲ್ ಗಳಲ್ಲಿ ತಂಗಿದ್ದ ಸಂಸದರು ಸರ್ಕಾರಕ್ಕೆ ದುಬಾರಿ ಬಿಲ್ ಗಳನ್ನು ನೀಡಿ ಸುದ್ದಿಗೆ ಗ್ರಾಸವಾಗಿದ್ದರು. ಈ ಹಿನ್ನಲೆಯಲ್ಲಿ ಲೋಕಸಭಾ ಕಾರ್ಯಾಲಯ ಈ ನೂತನ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew Delhiಲೋಕಸಭಾ ಚುನಾವಣೆ 2019Loksabha Election 2019Newly-Elected MPsLoksabha Secretariatನೂತನ ಸಂಸದರುಲೋಕಸಭಾ ಕಾರ್ಯಾಲಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


