ದೇಶ

ಲೋಕಸಭಾ ಚುನಾವಣೆ 2019: 6ನೇ ಹಂತದಲ್ಲಿ ಶೇ. 63. 3 ರಷ್ಟು ಮತದಾನ- ಚುನಾವಣಾ ಆಯೋಗ

ಏಳು ರಾಜ್ಯಗಳ 59 ಸ್ಥಾನಗಳಿಗೆ ನಡೆದ ಆರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಅಂದಾಜು ಶೇ. 63. 3 ರಷ್ಟು ದಾಖಲೆಯ ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಲೋಕಸಭಾ ಚುನಾವಣೆ 2019: 6ನೇ ಹಂತದಲ್ಲಿ ಶೇ.  63. 3 ರಷ್ಟು ಮತದಾನ- ಚುನಾವಣಾ ಆಯೋಗ
ಮತದಾರರು
Published On :

ನವದೆಹಲಿ: ಏಳು ರಾಜ್ಯಗಳ 59 ಸ್ಥಾನಗಳಿಗೆ ನಡೆದ ಆರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಅಂದಾಜು ಶೇ. 63. 3 ರಷ್ಟು ದಾಖಲೆಯ  ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮತದಾನ ನಡೆದ ಎಲ್ಲಾ ರಾಜ್ಯಗಳಿಂದ ಮಾಹಿತಿ  ಸಂಗ್ರಹಿಸಿದ ನಂತರ ಒಟ್ಟಾರೇ, ಶೇಕಡವಾರು ಮತದಾನದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉತ್ತರ ಪ್ರದೇಶದ 14, ಹರಿಯಾಣದ 10 ಹಾಗೂ ಬಿಹಾರ, ಮಧ್ಯ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ತಲಾ 8, ದೆಹಲಿಯ 7 ಹಾಗೂ ಜಾರ್ಖಂಡ್ ನಲ್ಲಿನ ನಾಲ್ಕು ಸ್ಥಾನಗಳಿಗೆ ಮತದಾನ ನಡೆಯಿತು.

ಪಶ್ಚಿಮ ಬಂಗಾಳದಲ್ಲಿ ಶೇ. 80.35,  ದೆಹಲಿ- 59. 74, ಹರಿಯಾಣ- 68. 17, ಉತ್ತರ ಪ್ರದೇಶ- 54. 72, ಬಿಹಾರ-59. 29, ಜಾರ್ಖಂಡ್ -64.50 ಹಾಗೂ ಮಧ್ಯ ಪ್ರದೇಶದಲ್ಲಿ ಶೇ, 64. 55 ರಷ್ಟು ಮತದಾನವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.