ಆತಿಶಿ ಆರೋಪ ಸಾಬೀತಾದರೆ ಕಣದಿಂದ ಹಿಂದಕ್ಕೆ: ಗೌತಮ್ ಗಂಭೀರ್ ಸವಾಲು
ಗೌತಮ್ ಗಂಭೀರ್ ತಮ್ಮ ವಿರುದ್ಧ ಅವಹೇಳನಕಾರಿ ಕರಪತ್ರ ಹಂಚಿಕೆ ಮಾಡುತ್ತಿದ್ದಾರೆ ಎಂಬ ಆಪ್ ಅಭ್ಯರ್ಥಿ ಆತಿಶಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟಿಗ, ಬಿಜೆಪಿ ಅಭ್ಯರ್ಥಿ ಆರೋಪ ಸಾಬೀತುಪಡಿಸುವಂತೆ

Published On :
ನವದೆಹಲಿ: ಗೌತಮ್ ಗಂಭೀರ್ ತಮ್ಮ ವಿರುದ್ಧ ಅವಹೇಳನಕಾರಿ ಕರಪತ್ರ ಹಂಚಿಕೆ ಮಾಡುತ್ತಿದ್ದಾರೆ ಎಂಬ ಆಪ್ ಅಭ್ಯರ್ಥಿ ಆತಿಶಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟಿಗ, ಬಿಜೆಪಿ ಅಭ್ಯರ್ಥಿ ಆರೋಪ ಸಾಬೀತುಪಡಿಸುವಂತೆ ಸವಾಲು ಹಾಕಿದ್ದಾರೆ.
ಅರವಿಂದ್ ಕೇಜ್ರಿವಾಲ್ ರೀತಿಯ ವ್ಯಕ್ತಿಯನ್ನು ದೆಹಲಿ ಮುಖ್ಯಮಂತ್ರಿಯನ್ನಾಗಿ ಪಡೆದಿರುವುದಕ್ಕೆ ನಾಚಿಕೆಯಾಗುತ್ತದೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. "ಆಪ್ ಅಭ್ಯರ್ಥಿ ವಿರುದ್ಧದ ಕರಪತ್ರಗಳನ್ನು ನಾನು ಪ್ರಕಟಿಸಿ, ಹಂಚುತ್ತಿರುವ ಆರೋಪ ಸಾಬೀತಾದರೆ ತಕ್ಷಣವೇ ಚುನಾವಣಾ ಕಣದಿಂದ ಹಿಂದೆ ಸರಿಯುತ್ತೇನೆ ಎಂದು ಕೇಜ್ರಿವಾಲ್ ಹಾಗೂ ಅಭ್ಯರ್ಥಿ ಆತಿಶಿಗೆ ಗಂಭೀರ್ ಸವಾಲು ಹಾಕಿದ್ದಾರೆ.
ನಿಮ್ಮದೇ ಪಕ್ಷದ ಮಹಿಳೆಯ ಗೌರವ, ಘನತೆಗಳಿಗೆ ಧಕ್ಕೆ ತರುತ್ತಿರುವ ನಿಮ್ಮ ನಡೆ ಅಸಹ್ಯ ಮೂಡಿಸುತ್ತದೆ, ಇದು ಚುನಾವಣೆ ಗೆಲ್ಲುವುದಕ್ಕಾಗಿ ಮಾಡಲಾಗುತ್ತಿದೆ, ನಿಮ್ಮ ಮನಸ್ಸನ್ನು ಸ್ವಚ್ಛಗೊಳಿಸುವುದಕ್ಕಾಗಿ ಪೊರಕೆಯ ಅವಶ್ಯಕತೆ ಇದೆ ಎಂದು ಗಂಭೀರ್ ಟ್ವಿಟರ್ ನಲ್ಲಿ ಕೇಜ್ರಿವಾಲ್ ಹಾಗೂ ಪಕ್ಷದವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಆತಿಶಿ ತಮ್ಮ ವಿರುದ್ಧ ಅವಹೇಳನಕಾರಿ ಕರಪತ್ರ ಹಂಚಿಕೆಯಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದಾರೆ.
ಮೇ.09 ರಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ಆತಿಶಿ, ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ತಮ್ಮ ವಿರುದ್ಧ ಅವಹೇಳನಕಾರಿ ಕರಪತ್ರ ಹಂಚುತ್ತಿದ್ದಾರೆ ಎಂದು ಆರೋಪಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಆಮ್ ಆದ್ಮಿ ಪಕ್ಷAAPGautam Gambhirಗೌತಮ್ ಗಂಭೀರ್Lok Sabha Elections 2019ಲೋಕಸಭಾ ಚುನಾವಣೆ 2019derogatory pamphletಅವಹೇಳನಕಾರಿ ಕರಪತ್ರAtishi
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


