ದೇಶ

ಚುನಾವಣಾ ಆಯೋಗದಿಂದ ಪ್ರಧಾನಿಗೆ ಮತ್ತೆ ಕ್ಲೀನ್ ಚಿಟ್!

ಪ್ರಧಾನಿ ನರೇಂದ್ರ ಮೋದಿಗೆ ಚುನಾವಣಾ ಆಯೋಗ ಮತ್ತೊಮ್ಮೆ ಕ್ಲೀನ್ ಚಿಟ್ ನೀಡಿದೆ. "ದೀಪಾವಳಿಗೆ ನ್ಯೂಕ್ಲಿಯರ್ ಬಟಕ್" ಹೇಳಿಕೆ ಪ್ರಕರಣದಲ್ಲಿ ಮೋದಿಗೆ ಕ್ಲೀನ್ ಚಿಟ್ ಲಭಿಸಿದೆ.

ಚುನಾವಣಾ ಆಯೋಗದಿಂದ ಪ್ರಧಾನಿಗೆ ಮತ್ತೆ ಕ್ಲೀನ್ ಚಿಟ್!
ಮತ್ತೆ ಚುನಾವಣಾ ಆಯೋಗದಿಂದ ಪ್ರಧಾನಿಗೆ ಕ್ಲೀನ್ ಚಿಟ್!
Published On :
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ಚುನಾವಣಾ ಆಯೋಗ ಮತ್ತೊಮ್ಮೆ ಕ್ಲೀನ್ ಚಿಟ್ ನೀಡಿದೆ.  "ದೀಪಾವಳಿಗೆ ನ್ಯೂಕ್ಲಿಯರ್ ಬಟಕ್" ಹೇಳಿಕೆ ಪ್ರಕರಣದಲ್ಲಿ ಮೋದಿಗೆ ಕ್ಲೀನ್ ಚಿಟ್ ಲಭಿಸಿದೆ. 
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಸ್ಥಾನದ ಬರ್ಮಾರ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನ ಪರಮಾಣು ಬೆದರಿಕೆ ಹಾಕುತ್ತಿತ್ತು. ಆದರೆ ಈಗ ಭಾರತ ಯಾವುದೇ ನ್ಯೂಕ್ಲಿಯರ್ ಬೆದರಿಕೆಗಳಿಗೆ ಹೆದರುವುದಿಲ್ಲ. ನಾವು ಯಾಕಾಗಿ ಅಣ್ವಸ್ತ್ರಗಳನ್ನು ಹೊಂದಿರುವುದು? ಅದನ್ನು ದೀಪಾವಳಿಗೆ ಇಟ್ಟೀದ್ದೇವಾ? ಎಂದು ಪ್ರಧಾನಿ ಗುಡುಗಿದ್ದರು. 
ಪ್ರಧಾನಿ ಮೋದಿ ಅವರ ಈ ಹೇಳಿಕೆ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿಬಂದಿತ್ತು. ಈಗ ಈ ಪ್ರಕರಣದಲ್ಲೂ ಮೋದಿಗೆ ಕ್ಲೀನ್ ಚಿಟ್ ಲಭಿಸಿದೆ. ಇದಕ್ಕೂ ಮುನ್ನ ರಾಹುಲ್ ಗಾಂಧಿ ಕೇರಳದ ವಯನಾಡಿನಲ್ಲಿ ಸ್ಪರ್ಧಿಸಿರುವುದಕ್ಕೆ ಅಲ್ಪಸಂಖ್ಯಾತರ ಮತಗಳು ಹೆಚ್ಚಿರುವುದು ಕಾರಣ ಎಂದು ಹೇಳಿದ್ದಕ್ಕಾಗಿಯೂ, ಅದಕ್ಕೂ ಮುನ್ನ ಲಾತೂರ್ ನಲ್ಲಿ ನಿಮ್ಮ ಮೊದಲ ಮತವನ್ನು ಸರ್ಜಿಕಲ್ ಸ್ಟ್ರೈಕ್, ಪುಲ್ವಾಮ ಹಿರೋಗಳಿಗೆ ಸಮರ್ಪಿಸಿ ಎಂದು ಯುವಜನತೆಗೆ ಕರೆ ನೀಡಿದ್ದಕ್ಕಾಗಿಯೂ  ಮೋದಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿಬಂದಿತ್ತು. ಈಗ ಈ ಮೂರೂ ಪ್ರಕರಣಗಳಲ್ಲಿ ಮೋದಿಗೆ ಕ್ಲೀನ್ ಚಿಟ್ ಸಿಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.