ದೇಶ

ಅಂತಿಮ ಹಂತದ ಮತದಾನ ಮುಕ್ತಾಯದ ಬಳಿಕವೇ ಎಕ್ಸಿಟ್ ಪೋಲ್ ಪ್ರಸಾರ: ಚುನಾವಣಾ ಆಯೋಗ

ಅಂತಿಮ ಹಂತದ ಮತದಾನ ಮುಕ್ತಾಯದ ಬಳಿಕವೇ ಚುನಾವಣೋತ್ತರ ಸಮೀಕ್ಷೆಯ ವರದಿಗಳನ್ನು ಪ್ರಸಾರ ಮಾಡಬಹುದು ಎಂದು ಚುನಾವಣಾ ಆಯೋಗ ಮಾಧ್ಯಮಗಳಿಗೆ ಸೂಚನೆ ನೀಡಿದೆ.

ಅಂತಿಮ ಹಂತದ ಮತದಾನ ಮುಕ್ತಾಯದ ಬಳಿಕವೇ ಎಕ್ಸಿಟ್ ಪೋಲ್ ಪ್ರಸಾರ: ಚುನಾವಣಾ ಆಯೋಗ
ಸಂಗ್ರಹ ಚಿತ್ರ
Published On :
ನವದೆಹಲಿ: ಅಂತಿಮ ಹಂತದ ಮತದಾನ ಮುಕ್ತಾಯದ ಬಳಿಕವೇ ಚುನಾವಣೋತ್ತರ ಸಮೀಕ್ಷೆಯ ವರದಿಗಳನ್ನು ಪ್ರಸಾರ ಮಾಡಬಹುದು ಎಂದು ಚುನಾವಣಾ ಆಯೋಗ ಮಾಧ್ಯಮಗಳಿಗೆ ಸೂಚನೆ ನೀಡಿದೆ.
ಮೇ 19ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, ಅಂದು ಸಂಜೆ ಮತದಾನ ಮುಕ್ತಾಯದ ಬಳಿಕವಷ್ಟೇ ಚುನಾವಣೋತ್ತರ ಸಮೀಕ್ಷೆಯ ವರದಿಗಳನ್ನು ಪ್ರಸಾರ ಮಾಡಬಹುದು ಎಂದು ಆಯೋಗ ಹೇಳಿದೆ. ಒಂದು ವೇಳೆ ಆಯೋಗದ ನಿರ್ದೇಶನದ ಹೊರತಾಗಿಯೂ ಪ್ರಸಾರ ಮಾಡಿದ್ದೇ ಆದರೆ, ಆರ್ ಪಿ ಆ್ಯಕ್ಟ್ 1951ರ ಸೆಕ್ಷನ್ 126ಎ ಅಡಿಯಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದೆ.
ಅಂತೆಯೇ ಆಯೋಗ ಕೆಲ ಮಾರ್ಗದರ್ಶಕ ಸೂತ್ರಗಳನ್ನು ಬಿಡುಗಡೆ ಮಾಡಿದ್ದು, ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮ, ಅಂತರ್ಜಾಲ, ರೇಡಿಯೋ, ವೆಬ್ ಸೈಟ್ ಗಳು ಸೇರಿದಂತೆ ಎಲ್ಲಿಯೂ ಕೂಡ ಅಂತಿಮ ಹಂತದ ಮತದಾನ ಮುಕ್ತಾಯಗೊಳ್ಳುವವರೆಗೂ ಚುನಾವಣೋತ್ತರ ಸಮೀಕ್ಷೆಗಳ ವರದಿಯನ್ನು ಪ್ರಸಾರ ಅಥವಾ ಪ್ರಕಟಿಸಬಾರದು ಎಂದು ಹೇಳಿದೆ. 
ಅಂತೆಯೇ ಸಾಮಾಜಿಕ ಜಾಲತಾಣಗಳಲ್ಲಿನ ಸುದ್ದಿಗಳು, ಬರಹಗಳು ಅಭಿಪ್ರಾಯಗಳನ್ನು, ಅಜೆಂಡಾಗಳನ್ನು ಬಿಂಬಿಸಬಾರದು. ಅಂತೆಯೇ ಯಾವುದೇ ವ್ಯಕ್ತಿ, ಪಕ್ಷ ಅಥವಾ ಸಂಘಟನೆಯ ಪರ-ವಿರೋಧ ಅಭಿಪ್ರಾಯಗಳನ್ನು ಬರಹಗಳನ್ನು ಪ್ರಸಾರ ಮಾಡಬಾರದು ಎಂದು ಆಯೋಗ ಹೇಳಿದೆ. ಅಂತೆಯೇ ಚುನಾವಣಾ ಆಯೋಗ ವೀಕ್ಷಣಾ ತಂಡವನ್ನು ನೇಮಕ ಮಾಡಿದ್ದು, ಅಧಿಕಾರಿಗಳು ವಾಹಿನಿಗಳು, ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿದ್ದಾರೆ. ಈ ಪೈಕಿ ಯಾವುದೇ ರೀತಿಯ ನಿಯಮ ಉಲ್ಲಂಘನೆ ಕಂಡು ಬಂದರೆ ಅಂತಹ ವಾಹಿನಿ, ಪತ್ರಿಕೆ, ವೆಬ್ ಸೈಟ್ ಸಾಮಾಜಿಕ ಜಾಲತಾಣಗಳ ವಿರುದ್ಧ ಎನ್ ಬಿಎಸ್ ಎ (News Broadcasting Standards Authority) ದೂರು ನೀಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.
ಇದೇ ಏಪ್ರಿಲ್ 11 ರಿಂದ ಮೇ 19ರವರೆಗೂ ಒಟ್ಟು 7 ಹಂತಗಳಲ್ಲಿ ಲೋಕಸಭಾ ಚುನಾವಣೆಯ ಮತದಾನ ನಡೆಯಲಿದೆ. ಮೇ 23ರಂದು ಮತಎಣಿಕೆ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.