ದೇಶ

ಮೋದಿ ಭ್ರಷ್ಟಾಚಾರಿಗಳ ಚೌಕಿದಾರ್, ದೀದಿ ಸುಳ್ಳಿನ ಭರವಸೆಯ ನಾಯಕಿ: ರಾಹುಲ್ ಗಾಂಧಿ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಪ್ರತಿನಿತ್ಯ ಸುಳ್ಳುನ್ನು ಹೇಳುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದು, ನೀರವ್ ಮೋದಿ, ಮೆಹುಲ್ ಚೋಕ್ಸಿ,ವಿಜಯ್ ಮಲ್ಯ ಅವರಂತಹ ದೇಶ ಭ್ರಷ್ಟ ಅಪರಾಧಿಗಳಿಗೆ ಪ್ರಧಾನಿ ಮೋದಿ ಚೌಕಿದಾರ್ ಆಗಿದ್ದಾರೆ ಎಂದು ಹೇಳಿದ್ದಾರೆ.

ಮೋದಿ ಭ್ರಷ್ಟಾಚಾರಿಗಳ ಚೌಕಿದಾರ್, ದೀದಿ ಸುಳ್ಳಿನ ಭರವಸೆಯ ನಾಯಕಿ: ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್ ಗಾಂಧಿ
Published On :

ಮಾಲ್ಡಾ: ಪ್ರಧಾನಿ ನರೇಂದ್ರ ಮೋದಿ ಪ್ರತಿನಿತ್ಯ ಸುಳ್ಳುನ್ನು ಹೇಳುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದು, ನೀರವ್ ಮೋದಿ, ಮೆಹುಲ್ ಚೋಕ್ಸಿ,ವಿಜಯ್ ಮಲ್ಯ ಅವರಂತಹ ದೇಶ ಭ್ರಷ್ಟ ಅಪರಾಧಿಗಳಿಗೆ ಪ್ರಧಾನಿ ಮೋದಿ ಚೌಕಿದಾರ್ ಆಗಿದ್ದಾರೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರೊಂದಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಹೋಲಿಸಿದ ರಾಹುಲ್ ಗಾಂಧಿ,  ಈ ಇಬ್ಬರು ನಾಯಕರು ಯಾರೊಂದಿಗೂ ಸಮಾಲೋಚಿಸದೆ  ಕ್ರಮವಾಗಿ ಕೇಂದ್ರ ಹಾಗೂ ರಾಜ್ಯಸರ್ಕಾರ ನಡೆಸುತ್ತಿದ್ದು, ಜನರ ಧ್ವನಿಯನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ನಾಯಕರು ತಮ್ಮ ಭಾಷಣದಲ್ಲಿ ನೀಡುವ ಭರವಸೆಗಳೆಲ್ಲವೂ ಬರೀ ಸುಳ್ಳಾಗಿರುತ್ತದೆ. ಪ್ರಧಾನಿ ಏಲ್ಲೇ ಹೋದರು ಬರೀ ಸುಳ್ಳುಗಳನ್ನೇ ಹೇಳುತ್ತಾರೆ.ಲೋಕಸಭಾ ಚುನಾವಣಾ ಸಿದ್ದಾಂತಗಳ ಆಧಾರದ ಮೇಲೆ ನಡೆಯಲಿದ್ದು, ಒಂದು ಕಡೆ ದೇಶದ ಏಕತೆಗಾಗಿ ಹೋರಾಡುವ ಕಾಂಗ್ರೆಸ್ ಪಕ್ಷವಿದ್ದರೆ ಮತ್ತೊಂದೆಡೆ ಧರ್ಮ, ಜಾತಿ ಆಧಾರದ ಮೇಲೆ ದೇಶ ವಿಭಜಿಸುವ ಬಿಜೆಪಿ,ಆರ್ ಎಸ್ ಎಸ್, ನರೇಂದ್ರ ಮೋದಿ ಇದ್ದಾರೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.

ರಾಫೆಲ್ ಒಪ್ಪಂದದಲ್ಲಿ ನರೇಂದ್ರ ಮೋದಿ  30 ಸಾವಿರ ಕೋಟಿ ಸಾರ್ವಜನಿಕ ಹಣವನ್ನು ಲೂಟಿ ಮಾಡಿ ಅನಿಲ್ ಅಂಬಾನಿಗೆ ನೀಡಿದ್ದಾರೆ. ಅಲ್ಲದೇ, ದೇಶ ಭ್ರಷ್ಟ ಅಪರಾಧಿಗಳ ಚೌಕಿದಾರ್ ಆಗಿದ್ದಾರೆ ಎಂದು ಆರೋಪಿಸಿದ್ದಾರೆ.

ಬಂಗಾಳ ಸರ್ಕಾರ  ಒಬ್ಬ ವ್ಯಕ್ತಿ ಕೈಯಲ್ಲಿ ನಡೆಯುತ್ತಿದೆ.ಮಮತಾ ಬ್ಯಾನರ್ಜಿ ಯಾರೊಂದಿಗೂ ಸಮಾಲೋಚಿಸುವುದಿಲ್ಲ,ಅವರಿಗೆ ಏನ್ನನಿಸುತ್ತದೆಯೋ ಅದನ್ನು ಮಾಡುತ್ತಾರೆ.  ಬಂಗಾಳದವರಿಗೇಕೆ ಧ್ವನಿ ಇಲ್ಲವೆ ಎಂದು ಪ್ರಶ್ನಿಸಿದರು.ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಯಾರೂ ಹೆದರಬೇಕಾದ ಅಗತ್ಯವಿಲ್ಲ ಎಂದು ರಾಹುಲ್ ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.