ಭಯದಿಂದ ಕೂಡಿದ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ- ಉರ್ಮಿಳಾ ಮಾತೋಂಡ್ಕರ್
ಭಯದಿಂದ ಕೂಡಿದ ಸಮಾಜದಲ್ಲಿ ನಾವು ಬದುಕುತ್ತಿದ್ದೆೇವೆ ಎಂದು ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಲಿವುಡ್ ನಟಿ ಉರ್ಮಿಳಾ ಮತೋಂಡ್ಕರ್ ಹೇಳಿದ್ದಾರೆ

ಮುಂಬೈ: ಭಯದಿಂದ ಕೂಡಿದ ಸಮಾಜದಲ್ಲಿ ನಾವು ಬದುಕುತ್ತಿದ್ದೆೇವೆ ಎಂದು ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಲಿವುಡ್ ನಟಿ ಉರ್ಮಿಳಾ ಮತೋಂಡ್ಕರ್ ಹೇಳಿದ್ದಾರೆ
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕರು ಏನಾದರೂ ಒಂದು ಕೆಲಸ ಮಾಡಬೇಕಾದ ಅಗತ್ಯವಿದೆ. ದೇಶದ ಪ್ರಜೆಯಾಗಿ ನನ್ನ ಕರ್ತವ್ಯವನ್ನು ಪೂರ್ಣಗೊಳಿಸಲು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ಆದರೆ, ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಪೂರ್ವಭಾವಿಯಾಗಿ ಚರ್ಚಿಸಿದಾಗ ಸವಾಲು ಕೇಳಿಬಂದಿತ್ತು. ಅದನ್ನು ಸ್ವೀಕರಿಸಿರುವುದಾಗಿ ಅವರು ತಿಳಿಸಿದರು.
ಪ್ರಸ್ತುತ ನಾವು ದ್ವೇಷ ಹಾಗೂ ಹಿಂಸಾತ್ಮಕ ವಾತಾವರಣದಲ್ಲಿ ವಾಸಿಸುತ್ತಿದ್ದೇವೆ. ಇದರ ವಿರುದ್ಧ ಹೋರಾಟ ನಡೆಸಬೇಕಾದದ್ದು ನನ್ನ ಜವಾಬ್ದಾರಿ ಎನಿಸಿತು. ಏನೇ ಆಗಲಿ ರಾಜಕೀಯದಲ್ಲಿದ್ದು, ಇಂತಹ ವಾತಾವರಣದ ವಿರುದ್ಧ ಹೋರಾಟ ನಡೆಸುತ್ತೇನೆ ಎಂದರು.
ಅಭಿವ್ಯಕ್ತಿ ಸ್ವಾತಂತ್ರವನ್ನು ಬೆಂಬಲಿಸುತ್ತೇನೆ. ನಮ್ಮ ಸಭೆಯೊಂದಕ್ಕೆ ಕೆಲವರು ಅಡ್ಡಿಪಡಿಸಿದ್ದರಿಂದ ಭಯ ಆಯಿತು. ಅದಕ್ಕಾಗಿ ಮೊದಲ ಬಾರಿಗೆ ನನ್ನ ಜೀವಕ್ಕಾಗಿ ಪೊಲೀಸರಿಂದ ರಕ್ಷಣೆ ಕೋರಿದ್ದೇನೆ. ಇಂತಗ ದ್ವೇಷಕಾರಿ ವಾತವಾರಣ ದೇಶದಲ್ಲಿ ಎಷ್ಟುಇದೆ ಎಂಬುದನ್ನು ಯೋಚಿಸಬೇಕಾಗಿದೆ ಎಂದರು.
ವಿಚಾರವಾದಿ ನರೇಂದ್ರ ದಾಬೊಲ್ಕರ್, ಗೋವಿಂದ್ ಪನ್ಸಾರೆ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ವಿಚಾರವನ್ನು ಪ್ರಸ್ತಾಪಿಸಿದ ಉರ್ಮಿಳಾ, ಇಂತಹವರ ಹತ್ಯೆ ಸಂದರ್ಭದಲ್ಲಿ ನಕಾರಾತ್ಮವಾಗಿ ಯೋಚಿಸುವವರು ಹಾಗೂ ದ್ವೇಷಕಾರಿ ಮನೋಭಾವದ ಜನರ ವಿರುದ್ಧ ಹೋರಾಡುವುದು ನನ್ನ ನಿಲುವಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


