ದೇಶ

ನಾನು ಒಂದೇ ವೋಟರ್ ಐಡಿ ಹೊಂದಿದ್ದೇನೆ: ಎಎಪಿ ಆರೋಪಕ್ಕೆ ಗಂಭೀರ್ ಪ್ರತ್ಯುತ್ತರ

ಗೌತಮ್ ಗಂಬೀರ್ ಅವರ ಬಳಿ ಎರಡು ಮತದಾರರ ಗುರುತಿನ ಚೀಟಿ ಇದೆ ಎಂದು ಆರೊಪಿಸಿ ಕೋರ್ಟ್ ಮೆಟ್ಟಿಲೇರಿದ್ದ ಆಮ್ ಆದ್ಮಿ ಪಕ್ಷದ ಆರೋಪಕ್ಕೆ ಮಾಜಿ ಕ್ರಿಕೆಟಿಗ....

ನಾನು ಒಂದೇ ವೋಟರ್ ಐಡಿ ಹೊಂದಿದ್ದೇನೆ: ಎಎಪಿ ಆರೋಪಕ್ಕೆ ಗಂಭೀರ್ ಪ್ರತ್ಯುತ್ತರ
ಗೌತಮ್ ಗಂಬೀರ್
Published On :
ನವದೆಹಲಿ: ಗೌತಮ್ ಗಂಬೀರ್ ಅವರ ಬಳಿ ಎರಡು ಮತದಾರರ ಗುರುತಿನ ಚೀಟಿ ಇದೆ ಎಂದು ಆರೊಪಿಸಿ ಕೋರ್ಟ್ ಮೆಟ್ಟಿಲೇರಿದ್ದ ಆಮ್ ಆದ್ಮಿ  ಪಕ್ಷದ ಆರೋಪಕ್ಕೆ ಮಾಜಿ ಕ್ರಿಕೆಟಿಗ, ಲೋಕಸಬಾ ಚುನಾವಣೆ ಪೂರ್ವ ದೆಹಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಂಭೀರ್ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
"ನನ್ನ ಬಳಿ ಒಂದೇ ಒಂದು ಗುರುತಿನ ಚಿಟಿ ದೆ, ದೆಹಲಿ ಆಡಳಿತಾರೂಢ ಪಕ್ಷವಾಗಿರುವ ಎಎಪಿಗೆ ಸಾರ್ವಜನಿಕರ ಕುರಿತಂತೆ ಯಾವುದೇ ಉತ್ತಮ ದೃಷ್ಟಿಕೋನ ಇಲ್ಲದ ಕಾರಣ ಹೀಗೆ ಆಧಾರರಹಿತ ಆರೋಪ ಮಾಡುತ್ತಿದೆ" ಗಂಭೀರ್ ಹೇಳಿದ್ದಾರೆ.
"ನಾನು ರಾಜೇಂದರ್ ನಗರ್  ನಲ್ಲಿ  ಕೇವಲ ಒಂದು ಮತದಾರರ ಗುರುತಿನ ಚೀಟಿಯನ್ನು ಹೊಂದಿದ್ದೇನೆ.ರಾಮಜಸ್ ರಸ್ತೆ(ಕರೋಲ್ ಭಾಗ್) ನಲ್ಲಿ ನನ್ನ ತಾಯಿಯ ಮನವಿಯ ಹಿನ್ನೆಲೆಯಲ್ಲಿ ನಾನು ವಾಸವಿದ್ದೆ. ಆದರೆ ಅಲ್ಲಿ ಯಾವುದೇ ಮತದಾರ ಗುರುತಿನ ಚೀಟಿಗೆ ನಾನು ಅರ್ಜಿ ಸಲ್ಲಿಸಲಿಲ್ಲ" ಎಂದು ಅವರು ಹೇಳಿದರು.
ಬಿಜೆಪಿ ಅಭ್ಯರ್ಥಿ ರಾಜೀಂದರ್ ನಗರ್ ಮತ್ತು ಕರೋಲ್ ಭಾಗ್ ಕ್ಷೇತ್ರಗಳೆರಡರಲ್ಲಿಯೂ ಎರಡು ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಎಎಪಿ ಆರೋಪಿಸಿತ್ತು. ಅಲ್ಲದೆ ಪಕ್ಷವು ಗಂಭೀರ್ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನೂ ದಾಖಲಿಸಿದೆ. ಮೇ 1 ರಂದು ಗಂಭೀರ್ ವಿರುದ್ಧದ ಈ ಮೊಕದ್ದಮೆಯನ್ನು  ದೆಹಲಿ ನ್ಯಾಯಾಲಯ ವಿಚಾರಣೆ ನಡೆಸಲಿದೆ.
ಎಎಪಿಗೆ ಪಕ್ಷದ ರ್ಯಾಲಿಯ ಸಮಯದಲ್ಲಿ ಮತದಾರರೊಡನೆ ಹೇಳಿಕೊಳ್ಲಲು ವಿಷಯಗಳೇ ಇಲ್ಲದ ಕಾರಣ ಈ ಬಗೆಯ ಆರೋಪ ಮಾಡುತ್ತಿದೆ. ಎಂದು ಗಭೀರ್ ಹೇಳಿದ್ದಾರೆ.
ಈ ಸಾರ್ವತ್ರಿಕ ಚುನಾವಣೆಯಲ್ಲಿ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಿಂದ ಎಎಪಿಯ ಅತಿಷಿ ವಿರುದ್ಧ ಗಂಭೀರ್ ಸ್ಪರ್ಧಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.