ಮುಕ್ತ ಮತ್ತು ನಿಸ್ಪಕ್ಷಪಾತ ಚುನಾವಣೆಗಾಗಿ ಪಿಎಂ ಮೋದಿ ಬಯೋಪಿಕ್ ಬಿಡುಗಡೆ ಇಲ್ಲ!
ಹಾಲಿ ಲೋಕಸಭಾ ಚುನಾವಣೆ ಮುಕ್ತ ಮತ್ತು ನಿಸ್ಪಕ್ಷಪಾತದಿಂದ ನಡೆಯಬೇಕು ಎಂಬ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರಕ್ಕೆ ತಡೆ ನೀಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

Published On :
ನವದೆಹಲಿ: ಹಾಲಿ ಲೋಕಸಭಾ ಚುನಾವಣೆ ಮುಕ್ತ ಮತ್ತು ನಿಸ್ಪಕ್ಷಪಾತದಿಂದ ನಡೆಯಬೇಕು ಎಂಬ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರಕ್ಕೆ ತಡೆ ನೀಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಯೋಗ, ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಚಿತ್ರ ಬಿಡುಗಡೆಗೆ ಅನುವು ಮಾಡಿಕೊಟ್ಟರೆ ಚುನಾವಣಾ ನೀತಿ ಸಂಹಿತಿಗೆ ಧಕ್ಕೆ ಮಾಡಿದಂತೆ. ಹೀಗಾಗಿ ಮುಕ್ತ ಮತ್ತು ನಿಸ್ಪಕ್ಷಪಾತ ಚುನಾವಣೆಯ ಉದ್ದೇಶದಿಂದ ಈ ಚಿತ್ರ ಬಿಡುಗಡೆಗೆ ತಡೆ ನೀಡಲಾಗಿದೆ ಎಂದು ಆಯೋಗ ಹೇಳಿದೆ.
ಚಿತ್ರವನ್ನು ತಡೆಯುವ ಹಿಂದೆ ಆಯೋಗಕ್ಕೆ ಯಾವುದೇ ಹಿತಾಸಕ್ತಿ ಇಲ್ಲ. ಆದರೆ ಚಿತ್ರದಲ್ಲಿ ಪ್ರಧಾನಿ ಮೋದಿ ಅವರನ್ನು ವೈಭವೀಕರಿಸಲಾಗಿದ್ದು, ಇದರಿಂದ ಮತದಾರರ ಮೇಲೆ ಪ್ರಭಾವ ಬೀರಿದಂತಾಗುತ್ತದೆ. ಇದೇ ಕಾರಣಕ್ಕೆ ಆಯೋಗ ಚಿತ್ರ ಬಿಡುಗಡೆಗೆ ನಿರ್ಬಂಧ ಹೇರಿದ್ದು, ಚುನಾವಣೆ ಮುಕ್ತಾಯದ ಬಳಿಕ ಚಿತ್ರ ಬಿಡುಗಡೆ ಮಾಡಬಹುದು ಎಂದು ಹೇಳಿದೆ.
ಇನ್ನು ಈ ಹಿಂದೆ ಚಿತ್ರದ ಕುರಿತು ಮಾತನಾಡಿದ್ದ ಆಯೋಗ, 'ಇದು ಮೋದಿಯವರ ಜೀವನ ಚರಿತ್ರೆ ಎನ್ನುವುದಕ್ಕಿಂತ ರಾಜಕೀಯ ಕಾರ್ಯಸೂಚಿಗಳನ್ನು ತೋರಿಸಿದ ಸಂತ ಚರಿತ್ರೆ ಎನ್ನಬಹುದು. ಈಗಲೇ ಬಿಡುಗಡೆ ಮಾಡಿದರೆ ಚುನಾವಣಾ ವ್ಯವಸ್ಥೆ ಆಡಳಿತ ರೂಢ ಬಿಜೆಪಿ ಪಕ್ಷದ ಕಡೆಗೆ ವಾಲಿದಂತೆ ಆಗುತ್ತದೆ. ಹಾಗಾಗಿ ಸದ್ಯ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ' ಎಂದು ತನ್ನ ನಿಲುವನ್ನು ಆಯೋಗ ಸ್ಪಷ್ಟಪಡಿಸಿತ್ತು.
ಮೋದಿಯವರ ಬಯೋಪಿಕ್ ಸಿನಿಮಾ ನೋಡಿದ ಬಳಿಕ ಸಿನಿಮಾ ಬಿಡುಗಡೆ ಬಗ್ಗೆ ತೀರ್ಮಾನಿಸಿ ಏ.22ರೊಳಗೆ ವರದಿ ನೀಡುವಂತೆ ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ಈ ಹಿಂದೆ ಸೂಚನೆ ನೀಡಿತ್ತು. ಅದಾದ ಬಳಿಕ ಏ.17ರಂದು ಆಯೋಗದ ಏಳು ಅಧಿಕಾರಿಗಳನ್ನೊಳಗೊಂಡ ತಂಡ ಪಿಎಂ ನರೇಂದ್ರ ಮೋದಿಯವರ ಬಯೋಪಿಕ್ ಸಿನಿಮಾವನ್ನು ವೀಕ್ಷಿಸಿತ್ತು. ಈಗ ಆಯೋಗ ತನ್ನ ವರದಿ ನೀಡಿದೆ. ಆಯೋಗದ ವರದಿಯಲ್ಲಿ 'ಈ ಬಯೋಪಿಕ್ ನಲ್ಲಿ ನರೇಂದ್ರ ಮೋದಿಯವರನ್ನು ತುಂಬ ಪ್ರಶಂಸಿಸಿ ಚಿತ್ರಿಸಲಾಗಿದೆ. ಅಲ್ಲದೆ ಬಹುತೇಕ ಪ್ರತಿಪಕ್ಷಗಳು ಭ್ರಷ್ಟವೆಂದು ಹಲವು ದೃಶ್ಯಗಳಲ್ಲಿ ಬಿಂಬಿಸಲಾಗಿದೆ. ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸಿನಿಮಾ ಬಿಡುಗಡೆಗೆ ಅವಕಾಶ ನೀಡಿದರೆ ಚುನಾವಣಾ ವ್ಯವಸ್ಥೆ ಒಂದು ಪಕ್ಷದ ಪರ ಒಲವು ತೋರಿದಂತೆ ಆಗುತ್ತದೆ ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
supreme courtನವದೆಹಲಿNew DelhiPM Narendra Modiಪ್ರಧಾನಿ ನರೇಂದ್ರ ಮೋದಿಸುಪ್ರೀಂ ಕೋರ್ಟ್Bollywoodಬಾಲಿವುಡ್Election Commissionಚುನಾವಣಾ ಆಯೋಗ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


