ನೀವು ನೆಹರು, ಇಂದಿರಾರನ್ನು ಟೀಕಿಸುತ್ತೀರಿ, ಅವರನ್ನೇ ಅನುಸರಿಸುತ್ತೀರಿ: ಮೋದಿಗೆ ರಾಜ್ ಠಾಕ್ರೆ ಸವಾಲ್
ಪ್ರಧಾನಿ ನರೇಂದ್ರ ಮೋದಿ ನೆಹರು, ಇಂದಿರಾಗಾಂಧಿಯವರನ್ನು ತೆಗಳುತ್ತಲೇ ಅವರನ್ನೇ ಅನುಸರಿಸುತ್ತಿದ್ದಾರೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.

Published On :
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೆಹರು, ಇಂದಿರಾಗಾಂಧಿಯವರನ್ನು ತೆಗಳುತ್ತಲೇ ಅವರನ್ನೇ ಅನುಸರಿಸುತ್ತಿದ್ದಾರೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ. ಪ್ರಥಮ್ ಸೇವಕ್ ಎಂಬ ಪದವನ್ನು ಮೊದಲ ಬಾರಿಗೆ ಭಾರತದ ಪ್ರಧಾನಿ ಜವಾಹರಲಾಲ್ ನೆಹರುಬಳಕೆ ಮಾಡಿದ್ದರು, ನೆಹರು "ಪ್ರಥಮ್ ಸೇವಕ್" ಎಂದಿದ್ದನ್ನು ಮೋದಿ "ಪ್ರಧಾನ್ ಸೇವಕ್" ಂದು ಬದಲಿಸಿಕೊಂಡಿದ್ದಾರೆ ಎಂದಿರುವ ಠಾಕ್ರೆ ಮೋದಿ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ.
ನವದೆಹಲಿಯ ತೀನ್ ಮೂರ್ತಿ ಭವನ್ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯದಲ್ಲಿ ಪಂಡಿತ್ ನೆಹರು ಅವರ ಈ ಹೇಳಿಕೆ ಕೆತ್ತಲ್ಪಟ್ಟಿದೆ."ಇಸ್ ದೇಶ್ ಕಿ ಜನತಾ ಹಮೇ ಪ್ರಧಾನ್ ಮಂತ್ರಿ ನ ಕಹೇ, ಪ್ರಥಮ್ ಸೇವಕ್ ಕಹೇ" ಎಂದು ನೆಹರು ಹೇಳಿದ್ದರು.
ನೆಹರು ಅವರ ಹೇಳಿಕೆಯ ಪ್ರಥಮ್ ಸೇವಕ್ ಎಂಬ ಪದವನ್ನು ಮೋದಿ ಪ್ರಧಾನ್ ಸೇವಕ್ ಎಂದು ಬದಲಿಸಿಕೊಂಡಿದ್ದಾರೆ ಎಂದು ಠಾಕ್ರೆ ದೂರಿದರು.ಕಾಂಗ್ರೆಸ್ ನೇತೃತ್ವದ 56 ಪಕ್ಷಗಳ ಮಹಾಘಟಬಂಧನ್ ಅಭಿಯಾನದ ಪರ ಅವರು ಮಾತನಾಡುತ್ತಿದ್ದರು.
"ಮೋದಿ ನೆಹರು ಹಾಗೂ ಇಂದಿರಾ ಗಾಂಧಿಯವರನ್ನು ದ್ವೇಷಿಸುತ್ತೀರಿ, ಆದರೆ ಈಗಲೂ ನೀವು ಅವರನ್ನೇ ಅನುಸರಿಸುತ್ತೀರಿ. ಕಳೆದ ಐದು ವರ್ಷಗಳಲ್ಲಿ ನೀವು ಎಲ್ಲ ವಿಚಾರದಲ್ಲಿಯೂ ದೇಶಕ್ಕೆ ಸುಳ್ಳು ಹೇಳಿಕೊಂಡು ಬಂದಿದ್ದೀರಿ. "
ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಗಲ್ಲಿಗೇರುವುದಕ್ಕೆ ಸಿದ್ದವಾಗಿದ್ದ ಭಗತ್ ಸಿಂಗ್ ಅವರನ್ನು ಕಾಂಗ್ರೆಸ್ ಕುಟುಂಬ ಸದಸ್ಯರೊಬ್ಬರೂ ಭೇಟಿಯಾಗಿಲ್ಲ ಎಂದಿದ್ದ ಮೋದಿ ಹೇಳೀಕೆ ಉಲ್ಲೇಖಿಸಿದ ಠಾಕ್ರೆ ನೆಹರು ಅವರು ಭಗತ್ ಸಿಂಗ್ ಅವರನ್ನು ಎರಡು ಬಾರಿ ಜೈಲಿನಲ್ಲಿ ಭೇಟಿಯಾಗಿದ್ದರೆಂದು ಹಳೆಯ ಪತ್ರಿಕೆ ತುಣುಕಿನ ಮೂಲಕ ಸಾಕ್ಷಿ ತೋರಿಸಿದ್ದಾರೆ.
"ಮೋದಿಯವರೇ ಕಾಂಗ್ರೆಸ್ ಕುಟುಂಬ ಎಂದರೆ ಯಾವುದು? ನೆಹರು ಕುಟುಂಬವೆ? ಗಾಂಧಿ ಕುಟುಂಬವೆ? ಪಟೇಲ್, ಸರೋಜಿನಿ ನಾಯ್ಡು, ಮೌಲಾನಾ ಆಜಾದ್ ಕುಟುಂಬಗಳೆ? ನೆಹರು ಅವರ ಕುಟುಂಬವಾಗಿದ್ದರೆ ಭಗತ್ ಸಿಂಗ್ ಅವರನ್ನು ಜೈಲಿನಲ್ಲಿ ಎರಡು ಬಾರಿ ನೆಹರು ಭೇಟಿಯಾಗಿದ್ದರು.ಅದು ಇಂದಿರಾ ಅವರ ಕುಟುಂಬವಾಗಿದ್ದು ಆ ಸಮಯದಲ್ಲಿ ಇಂದಿರಾ ಅವರಿಗೆ ಕೇವಲ 14 ವರ್ಷ ವಯಸ್ಸಾಗಿತ್ತು, ರಾಜೀವ್, ಸಂಜಯ್, ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಕುಟುಂಬದ ಪ್ರಶ್ನೆ ಇಲ್ಲಿ ಬರುವುದಿಲ್ಲ"
ಮೋದಿ ಮತ್ತು ಭಾರತೀಯ ಜನತಾಪಕ್ಷದ ಅಧ್ಯಕ್ಷ ಅಮಿತ್ ಶಾ ಅಪಾಯಕಾರಿ" ಜನರಾಗಿದ್ದಾರೆಂದು ಹೇಳಿದ ಠಾಕ್ರೆ ಅವರು ಅಧಿಕಾರಕ್ಕೆ ಮರಳಿದರೆ ಇಡೀ ದೇಶವನ್ನು ತಮ್ಮ ಗುಲಾಮರಿಗೆ ವಹಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


