ಫಲಿತಾಂಶ ಪ್ರಕಟವಾಗುವ ಮುನ್ನವೇ ನಿಖಿಲ್ ಸಂಸದ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಣೆ
ಲೋಕಸಭಾ ಚುನಾವಣೆ ಮುಗಿದಿದ್ದು, ಫಲಿತಾಂಶ ಹೊರಬೀಳುವ ಮುನ್ನವೇ ನಿಖಿಲ್ ಕುಮಾರಸ್ವಾಮಿ ಸಂಸದರಾಗಿದ್ದಾರೆ ? ಹೌದು ಇಂತಹ ವಿಚಿತ್ರವೊಂದು ಶ್ರೀರಂಗಪಟ್ಟಣದ ಜೆಡಿಎಸ್ ಹಾಗೂ ನಿಖಿಲ್

Published On :
ಮಂಡ್ಯ: ಲೋಕಸಭಾ ಚುನಾವಣೆ ಮುಗಿದಿದ್ದು, ಫಲಿತಾಂಶ ಹೊರಬೀಳುವ ಮುನ್ನವೇ ನಿಖಿಲ್ ಕುಮಾರಸ್ವಾಮಿ ಸಂಸದರಾಗಿದ್ದಾರೆ ? ಹೌದು ಇಂತಹ ವಿಚಿತ್ರವೊಂದು ಶ್ರೀರಂಗಪಟ್ಟಣದ ಜೆಡಿಎಸ್ ಹಾಗೂ ನಿಖಿಲ್ ಅಭಿಮಾನಿಯ "ಲಗ್ನಪತ್ರಿಕೆ" ಈ ಎಡವಟ್ಟು ಬೆಳಕಿಗೆ ಬಂದಿದೆ.
ಶ್ರೀರಂಗಪಟ್ಟಣದ ಟಿಎಪಿಎಸಿ ಕಲ್ಯಾಣ ಮಂಟಪದಲ್ಲಿ ಮೇಳಾಪುರದ ಎಂ.ಎನ್.ಅಶೋಕ್ಕುಮಾರ್ ಹಾಗೂ ಅಭಿಲಾಷ ಅವರ ಮದುವೆ ಜೂ.6ರಂದು ನಡೆಯಲಿದೆ. ವಿವಾಹ ಆಹ್ವಾನ ಪತ್ರಿಕೆಯ ಒಂದು ಪುಟದಲ್ಲಿ ನಿಖಿಲ್ ಕುಮಾರ ಸ್ವಾಮಿ ಫೋಟೋ ಹಾಕಿ ಕೆಳಭಾಗದಲ್ಲಿ ವಿಶೇಷ ಆಹ್ವಾನಿತರು ಜೆಡಿಎಸ್ ಯುವ ಸಾರಥಿ, ನಿಖಿಲ್ ಕುಮಾರಸ್ವಾಮಿ, ಮಂಡ್ಯ, ಸಂಸದರು ಎಂದು ಮುದ್ರಿಸಲಾಗಿದೆ...!
ವಿವಾಹ ಆಹ್ವಾನ ಪತ್ರಿಕೆ ಎಲ್ಲಡೆ ಭಾರಿ ವೈರಲ್ ಆಗಿದ್ದು ಚುನಾವಣಾ ಫಲಿತಾಂಶ ಪ್ರಕಟವಾಗುವ ಮೊದಲೇ.. ನಿಖಿಲ್ ಕುಮಾರಸ್ವಾಮಿಗೆ ಸಂಸದ ಸ್ಥಾನವನ್ನು ನೀಡುವ ಮೂಲಕ ಬೆಂಬಲಿಗರು ಅಭಿಮಾನ ಮೆರೆದಿದ್ದಾರೆ..!
ಈ ಹಿಂದೆ ನಿಖಿಲ್ ಅವರ ಅಭಿಮಾನಿಯೊಬ್ಬ ಚುನಾವಣೆ ಮುಗಿಯುತ್ತಿದ್ದಂತೆ ನಿಖಿಲ್ ಅವರನ್ನು ಸಂಸದರು ಎಂದು ನಮೂದಿಸಿದ ನಾಮಫಲಕವನ್ನು ತಮ್ಮ ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಹಾಗೇ ಜೆಡಿಎಸ್ ಅಂದಾಭಿಮಾನಿಯೊಬ್ಬ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಜ್ವಲ್ ರೇವಣ್ಣನವರ ಹೆಸರು ಹಾಕಿ, ಅದರ ಮುಂದೆ ಲೋಕಸಭಾ ಸಂಸದರು ಎಂದು ನಮೂದಿಸಿದ್ದ ಫೋಟೋ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಅಭಿಮಾನಿಗಳ ಈ ಹುಚ್ಚು ಅಭಿಮಾನ, ನಾಯಕರನ್ನು ಸಂತೋಷಗೊಳಿಸುತ್ತದೆ. ಆದರೆ ರಾಜಕೀಯ ನಾಯಕರು ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ತೀವ್ರ ಟೀಕೆಗೆ ಒಳಗಾಗಿ ಪೇಚಿಗೆ ಸಿಲುಕುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Politicsಲೋಕಸಭಾ ಚುನಾವಣೆWedding Invitationಮದುವೆ ಆಹ್ವಾನ ಪತ್ರಿಕೆನಿಖಿಲ್ ಕುಮಾರಸ್ವಾಮಿNikhil KumaraswamyLoksabha election results
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


