ಬಿಡುವಿಲ್ಲದ ಪ್ರಚಾರದಿಂದ ಸಿಧು ಧ್ವನಿಪೆಟ್ಟಿಗೆಗೆ ಹಾನಿ, ಹೆಚ್ಚು ಮಾತನಾಡದಿರಲು ವೈದ್ಯರ ಸಲಹೆ
ಕಾಂಗ್ರೆಸ್ ನ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾದ ಪಂಜಾಬ್ ಸಚಿವ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಈ ಲೋಕಸಭೆ ಚುನಾವಣೆಯ ವೇಳೆ ಸರಿಸುಮಾರು 80 ರ್ಯಾಲಿಗಳಲ್ಲಿ ಭಾಗವಹಿಸಿದ್ದು ಇದು ಅವರ....

Published On :
ಅಮೃತಸರ್: ಕಾಂಗ್ರೆಸ್ ನ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾದ ಪಂಜಾಬ್ ಸಚಿವ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಈ ಲೋಕಸಭೆ ಚುನಾವಣೆಯ ವೇಳೆ ಸರಿಸುಮಾರು 80 ರ್ಯಾಲಿಗಳಲ್ಲಿ ಭಾಗವಹಿಸಿದ್ದು ಇದು ಅವರ ವೈಯುಕ್ತಿಕ ಆರೋಗ್ಯ,ಕಾಳಜಿಗಾಗಿ ಸಮಯವೇ ಸಿಗದಂತೆ ಮಾಡಿದೆ ಇದರಿಂದ ಅವರ ಧ್ವನಿ ಪೆಟ್ಟಿಗೆ ಮೇಲೆ ದೊಡ್ಡ ಪ್ರಮಾಣದ ದುಷ್ಪರಿಣಾಮವಾಗಿದೆ.
ಸಿಧು ತಾವು ಮಾತ್ರೆ, ಔಷಧಿ ಹಾಗೂ ಚುಚ್ಚುಮದ್ದುಗಳ ಮೇಲೆ ಅವಲಂಬಿತರಾಗಿದ್ದಾರೆ."ಪಂಜಾಬ್ ಕ್ಯಾಬಿನೆಟ್ ಸಚಿವ ನವಜೋತ್ ಸಿಂಗ್ ಸಿಧು ಅವರು 28 ದಿನಗಳಲ್ಲಿ 80 ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ. ರಾಷ್ಟ್ರದಾದ್ಯಂತ ಪ್ರಚಾರ ಮಾಡಿದ್ದಾರೆ.ಇದರಿಂದ ಅವರ ಧ್ವನಿ ಪೆಟ್ಟಿಗೆಗೆ ಹಾನಿಯಾಗಿದೆ." ಅಧಿಕೃತ ಪ್ರಕಟಣೆ ಹೇಳಿದೆ.
"ಚಂಡೀಘರ್ ನಲ್ಲಿ ಭಾನುವಾರ ಬೆಳಿಗ್ಗೆ ಸಿಧು ವೈದ್ಯರನ್ನು ಸಂಪರ್ಕಿಸಿದ್ದು ಅವರು ಹಾನಿಯಾಗಿರುವ ಗಂಟಲ ಮೇಲೆ ಮುಲಾಮು ಲೇಪನಕ್ಕಾಗಿ ಸಲಹೆ ಮಾಡಿದ್ದಾರೆ. ಅಲ್ಲದೆ ನಾಲ್ಕು ದಿನಗಳ ಕಾಲ ಗಂಟಲು ಉರಿಯೂತಕ್ಕಾಗಿ ಚಿಚ್ಚುಮದ್ದನ್ನು ತೆಗೆದುಕೊಳ್ಳಲು ಹೇಳಲಾಗಿದೆ.ಅಷ್ಟೇ ಅಲ್ಲದೆ ಇಂತಹಾ ಔಷಧಿ ತೆಗೆದುಕೊಳ್ಳುವ ವೇಳೆ ಹೆಚ್ಚು ಮಾತನಾಡಬಾರದು, 48 ಗಂಟೆಗಳ ಸಂಪೂರ್ಣ ವಿಶ್ರಾಂತಿ, ಬೇಕಿದೆ" ಎಂದೂ ವೈದ್ಯರು ಸಲಹೆ ನೀಡಿದ್ದಾರೆ.
ಆದರೆ ಲೋಕಸಭೆ ಚುನವಣೆ ಅಂತಿಮ ಹಂತ ತಲುಪಿರುವ ವೇಳೆ ತಾವು ಪ್ರಚಾರದಲ್ಲಿ ಭಾಗವಹಿಸುವುದು ಅನಿವಾರ್ಯ ಎಂದು ಸಿಧು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


