ಸ್ವಾರಸ್ಯ

ಸುಮಲತಾ ಹೆಸರಿನ 3 ಅಭ್ಯರ್ಥಿಗಳ ನಾಮಪತ್ರ: ಸೋಷಿಯಲ್ ಮೀಡಿಯಾದಲ್ಲಿ ಜೆಡಿಎಸ್ ಗೆ ಮಂಗಳಾರತಿ!

ಏಪ್ರಿಲ್ 18 ರಂದು ನಡೆಯುವ ಮತದಾನದಲ್ಲಿ ನಿಖಿಲ್ ಗೆ ಮತಹಾಕಲು ಬರುವ ಮತದಾರರು ಮತಯಂತ್ರದ ತುಂಬಾ ಸುಮಲತಾ ಅನ್ನೋ ಹೆಸರುಗಳನ್ನು ನೋಡಿ ...

ಸುಮಲತಾ ಹೆಸರಿನ 3 ಅಭ್ಯರ್ಥಿಗಳ ನಾಮಪತ್ರ: ಸೋಷಿಯಲ್ ಮೀಡಿಯಾದಲ್ಲಿ ಜೆಡಿಎಸ್ ಗೆ ಮಂಗಳಾರತಿ!
ಬೂಕನಕೆರೆಯಲ್ಲಿ ಸುಮಲತಾ ಅಂಬರೀಷ್ ಪ್ರಚಾರ
Published On :
ಮಂಡ್ಯ: ಏಪ್ರಿಲ್ 18 ರಂದು ನಡೆಯುವ ಮತದಾನದಲ್ಲಿ ನಿಖಿಲ್ ಗೆ ಮತಹಾಕಲು ಬರುವ ಮತದಾರರು ಮತಯಂತ್ರದ ತುಂಬಾ ಸುಮಲತಾ ಅನ್ನೋ ಹೆಸರುಗಳನ್ನು ನೋಡಿ ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಹುಡುಕಾಡಬೇಕಾಗುತ್ತದೆ. ಇದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಜೆಡಿಎಸ್ ಗೆ ಮಾಡಿರು ಮಂಗಳಾರತಿಯ ಒಂದು ಝಲಕ್.
ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಭಯಗೊಂಡಿರುವ ಜೆಡಿಎಸ್ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ, ಹೀಗಾಗಿ ಸುಮಲತಾ ಎನ್ನುವ ಹೆಸರಿನ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪ್ರಾದೇಶಿಕ ಪಕ್ಷ ಜೆಡಿಎಸ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳ ಸುರಿಮಳೆಯಾಗಿದೆ. ಅವರ ಮಂಡ್ಯದಲ್ಲಿ ಚುನಾವಣೆ ಎದುರಿಸಲು ಸಮರ್ಥರಿಲ್ಲ, ಒಬ್ಬ ಮಹಿಳೆಯನ್ನು ಚುನಾವಣೆಯಲ್ಲಿ ಎದುರಿಸಲು ತಾಕತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಇನ್ನೂ ಸುಮಲತಾ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿರುವ ಮೂವರು ಅಭ್ಯರ್ಥಿಗಳ ಫೋಟೋ ಶೇರ್ ಮಾಡಿರುವ ಕೆಲವರು ಇದು ಜೆಡಿಎಸ್ ನ ಚೀಪ್ ಪಾಲಿಟಿಕ್ಸ್ ಎಂದು ಟೀಕಿಸಿದ್ದಾರೆ, ಮತದಾರರು ಇಂತ ಚಿಲ್ಲರೆ ರಾಜಕೀಯಕ್ಕೆ ತಕ್ಕ ಪಾಠ ಕಲಿಸಬೇಕಿದೆ, ಹೀಗಾಗಿ ಮತದಾರರು ಸುಮಲತಾ ಅಂಬರೀಷ್ ಅವರ ಚಿಹ್ನೆಯನ್ನು ಸರಿಯಾಗಿ ತಿಳಿದುಕೊಂಡು ಮತಹಾಕುವಂತೆ ಹೇಳಿದ್ದಾರೆ, ಈ ಮೂಲಕ ಮಂಡ್ಯವನ್ನು ಜೆಡಿಎಸ್ ಮುಕ್ತವಾಗಿಸಬೇಕು, ಅದರ ಮೂಲಕ ಮಂಡ್ಯ ಜನತೆಯ ಗೌರವ ಸ್ವಾಭಾಮಿನ ತೋರಿಸಬೇಕು  ಎಂದು ಕಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ವ್ಯಕ್ತಿ ಹೀಗೆ ಕಮೆಂಟ್ ಮಾಡಿದ್ದಾರೆ, ನಾವು ಅಭ್ಯರ್ಥಿಯನ್ನು ಕಣಕ್ಕಿಳಸಲಿಲ್ಲ ಎಂದು ಟೀಕಿಸಿದ್ದೀರಿ,  ಆದರೆ ಒಂದೇ ಹೆಸರಿನ ಮೂವರು ಅಭ್ಯರ್ಥಿ ಕಣಕ್ಕಿಳಿಸಿದರೇ ನಾವು  ಏನು ಮಾಡುವುದು, ನಿಮ್ಮ ಹಾಗೆ ಕೀಳು ಮಟ್ಟದ ರಾಜಕೀಯ ಮಾಡದೇ ನಾವು ಸುಮಲತಾ ಅವರಿಗೆ ಬೆಂಬಲ ನೀಡುತ್ತಿದ್ದೇವೆ, ಜನರು ಅವರನ್ನು ಬಹಳ ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ.
ಇನ್ನೂ ನಟ ದರ್ಶನ್ ಅಭಿಮಾನಿಗಳ ಸಂಘ ದರ್ಶನ್ ಸೇನಾ ಸಮಿತಿ,  ಮುಖ್ಯಮಂತ್ರಿ ಕುಮಾರ ಸ್ವಾಮಿ ವಿರುದ್ಧ ಹರಿಹಾಯ್ದಿದೆ, ಚಾಲೆಂಜಿಂಗ್ ಸ್ಟಾರ್ ಮತ್ತು ಡಿ ಬಾಸ್ ಬಿರುದುಗಳ ಬಗ್ಗೆ ಕೇವಲವಾಗಿ ಮಾತನಾಡಿರುವ ಕುಮಾರಸ್ವಾಮಿ ವಿರುದ್ಧ ಟ್ವೀಟ್ ಮಾಡಿದೆ, ನಾವು ಮಂಡ್ಯ ಜನ, ಸ್ವಾಭಿಮಾನದವರು, ಇದಕ್ಕೆ ಮೇ 23 ರಂದು ನಮ್ಮ ಉತ್ತರ(ಮತ ಎಣಿಕೆ ದಿನ) ಸಿಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಟ್ವೀಟ್ ಮಾಡಿರುವ  ನಟ ದರ್ಶನ್, ಅಭಿಮಾನಿಗಳು ಯಾವುದೇ ಅತಿರೇಖಕ್ಕೆ ಹೋಗದೇ ಕೂಲ್ ಆಗಿರುವಂತೆ ಹೇಳಿದ್ದಾರೆ, ಯಾವುದೇ ವದಂತಿಗಳಿಗೆ ಕಿವಿಕೊಡದಂತೆ ಇರಲು ಹೇಳಿದ್ದಾರೆ. ಚುನಾವಣೆ ಸಮಯದಲ್ಲಿ ಇದೆಲ್ಲಾ ಕಾಮನ್, ಯಾವುದೇ ವಿಡಿಯೋ ಹಾಕದಂತೆ ಮನವಿ ಮಾಡಿದ್ದಾರೆ, ನಾವು ಆರಂಭದಲ್ಲೇ ಹೇಳಿದ್ದೇನೆ, ನನಗೆ ಯಾರ ಮೇಲೂ ಕೋಪವಿಲ್ಲ, ಬೇಸರವಿಲ್ಲ ನನ್ನ ಅಭಿಮಾನಿಗಳು ಕೂಡ ಹಾಗೆಯೇ ಇರಬೇಕೆಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.