ನಿಮ್ಮ ಬೆರಳನ್ನು ಅದಕ್ಕಾಗಿ ಅಲ್ಲ, ಇದಕ್ಕಾಗಿ ಬಳಸಿ: ಬಾಲಿವುಡ್ ನಟಿಯ 'ಹಸ್ತಮೈಥುನ' ವಿಚಾರ ಮತ ಜಾಗೃತಿಗೆ ಬಳಕೆ!
ಸಿಪಿಐ ಅಭ್ಯರ್ಥಿ ಕನ್ಹಯ್ಯ ಕುಮಾರ್ ಪರ ಪ್ರಚಾರ ಮಾಡಿದ್ದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರ ಹಸ್ತಮೈಥುನ ವಿಚಾರ ಇದೀಗ ಮತ ಜಾಗೃತಿಗೆ ಬಳಕೆಯಾಗುತ್ತಿರುವ ಶೋಚನೀಯ ಸಂಗತಿ.

Published On :
ಸಿಪಿಐ ಅಭ್ಯರ್ಥಿ ಕನ್ಹಯ್ಯ ಕುಮಾರ್ ಪರ ಪ್ರಚಾರ ಮಾಡಿದ್ದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರ ಹಸ್ತಮೈಥುನ ವಿಚಾರ ಇದೀಗ ಮತ ಜಾಗೃತಿಗೆ ಬಳಕೆಯಾಗುತ್ತಿರುವ ಶೋಚನೀಯ ಸಂಗತಿ.
ಹೌದು. ಸ್ವರಾ ಭಾಸ್ಕರ್ ವೀರೆ ದಿ ವೆಡ್ಡಿಂಗ್ ಚಿತ್ರದಲ್ಲಿ ನಟಿಸಿದ್ದು ಅದರಲ್ಲಿ ಅವರ ಹಸ್ತಮೈಥುನದ ದೃಶ್ಯ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಅಲ್ಲದೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಗೂ ತುತ್ತಾಗಿತ್ತು. ಇದೀಗ ಈ ವಿಚಾರ ಮುನ್ನೆಲೆಗೆ ಬಂದಿದೆ.
ನಿನ್ನೆ ನಡೆದ ಲೋಕಸಭೆಯ ನಾಲ್ಕನೇ ಹಂತದ ಚುನಾವಣೆ ವೇಳೆ ಮತದಾನದ ಜಾಗೃತಿ ಮೂಡಿಸಲು ಸ್ವರಾ ಭಾಸ್ಕರ್ ಅವರನ್ನು ಎಳೆದು ತರಲಾಗಿತ್ತು. ಮುಂಬೈನ ಬೀದಿಗಳಲ್ಲಿ ಕೆಲ ಯುವಕ-ಯುವತಿಯರು ಈ ಚುನಾವಣೆ ಸ್ವರಾ ಭಾಸ್ಕರ್ ರೀತಿಯಲ್ಲ. ನಿಮ್ಮ ಬೆರಳನ್ನು ಬುದ್ಧಿವಂತಿಕೆಯಿಂದ ಬಳಸಿ ಮತ ಹಾಕಿ ಎಂದು ಬರೆದ ಪ್ಲೇಕಾರ್ಡ್ ಗಳನ್ನು ಹಿಡಿದು ಪ್ರತ್ಯಕ್ಷರಾಗಿದ್ದರು.
ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸ್ವರಾ ಭಾಸ್ಕರ್ ತಮ್ಮ ಟ್ವೀಟರ್ ಖಾತೆಯಲ್ಲಿ ನನ್ನ ಟ್ರೋಲಿಗರು ಮತ್ತೆ ಹಾರ್ಡ್ ವರ್ಕ್ ನಡೆಸುತ್ತಿದ್ದಾರೆ. ನನ್ನ ಹೆಸರು ಪ್ರಖ್ಯಾತಿಗೊಳಿಸಲು ಅವರು ಬೆವರು ಹರಿಸಿ ದುಡಿಯುತ್ತಿದ್ದಾರೆ. ಏ ಹುಡುಗರೇ ನೀವು ತುಂಬಾ ತ್ಯಾಗಮಯಿಗಳು.. ನಾಚಿಕೆಗೇಡು ಹುಡುಗರೇ, ನಿಮ್ಮ ಯೋಚನೆ ಸಂಕುಚಿತವಾಗಿದೆ. ಆದರೆ ನಿಮ್ಮ ಪ್ರಯತ್ನ ಮೆಚ್ಚುವಂತದ್ದು ಎಂದು ನಯವಾಗಿಯೇ ತಿರುಗೇಟು ನೀಡಿದ್ದಾರೆ.
Don't be like Swara Bhaskar
Use your finger wisely, vote wisely
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Lok Sabha pollsಹಸ್ತಮೈಥುನSwara Bhaskarಸ್ವರಾ ಭಾಸ್ಕರ್MasturbationVeere Di WeddingMumbai Pollsಮುಂಬೈ ಚುನಾವಣೆವೀರೆ ದಿ ವೆಡ್ಡಿಂಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


