ಬಿಜೆಪಿ ಪರ ರಣ್‌ವೀರ್-ದೀಪಿಕಾ ಪ್ರಚಾರ? ಫೋಟೋ ವೈರಲ್, ಏನಿದರ ಸತ್ಯಾಸತ್ಯತೆ?
ಸದ್ಯ ಲೋಕಸಭೆ ಚುನಾವಣೆಯ ಕಾವು ದೇಶದೆಲ್ಲಡೆ ಜೋರಾಗಿದೆ. ಈ ಮಧ್ಯೆ ಮೊದಲ ಹಂತದ ಚುನಾವಣೆ ಗುರುವಾರ ಮುಗಿದಿದ್ದು ರಾಜಕೀಯ ಮುಖಂಡರು ಅಬ್ಬರದ ಪ್ರಚಾರದ ಮೊರೆ ಹೋಗುತ್ತಿದ್ದಾರೆ.

Published On :
ಮುಂಬೈ: ಸದ್ಯ ಲೋಕಸಭೆ ಚುನಾವಣೆಯ ಕಾವು ದೇಶದೆಲ್ಲಡೆ ಜೋರಾಗಿದೆ. ಈ ಮಧ್ಯೆ ಮೊದಲ ಹಂತದ ಚುನಾವಣೆ ಗುರುವಾರ ಮುಗಿದಿದ್ದು ರಾಜಕೀಯ ಮುಖಂಡರು ಅಬ್ಬರದ ಪ್ರಚಾರದ ಮೊರೆ ಹೋಗುತ್ತಿದ್ದಾರೆ.
ಇನ್ನು ಬಾಲಿವುಡ್ ನಟ-ನಟಿಯಾರದ ರಣ್‌ವೀರ್ ಮತ್ತು ದೀಪಿಕಾ ಪಡುಕೋಣೆ ಬಿಜೆಪಿ ಪರ ಮಾಡುತ್ತಿದ್ದಾರೆ ಎಂದು ಹೇಳುವ ಫೋಟೋವೊಂದು ಇದೀಗ ವೈರಲ್ ಆಗಿದೆ. ಆದರೆ ಇದು ಸತ್ಯಕ್ಕೆ ದೂರವಾಗಿದೆ.
ಹೌದು, ಕಳೆದ ಎರಡು ದಿನಗಳಿಂದ ಸತಿ-ಪತಿಗಳಾದ ದೀಪ್‍ವೀರ್ ಅವರು ಕೇಸರಿ ಶಾಲು ಹಾಕಿಕೊಂಡಿದ್ದು ಅದರ ಮೇಲೆ ಬಿಜೆಪಿಗೆ ಮತ ಹಾಕಿ ಎಂಬ ಸಾಲುಗಳಿರುವ ಫೋಟೋ ವೈರಲ್ ಆಗಿದೆ. ಅಸಲಿಗೆ ದೀಪ್‍ವೀರ್ ಕೇಸರಿ ಶಾಲು ಹಾಕಿಕೊಂಡಿರುವುದು ನಿಜ. ಆದರೆ ಬಿಜೆಪಿ ಪರ ಮತಯಾಚನೆ ಮಾಡುತ್ತಿಲ್ಲ.
2018ರಲ್ಲಿ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ದೀಪ್‍ವೀರ್ ಜೋಡಿ ಭೇಟಿ ನೀಡಿತ್ತು. ಈ ವೇಳೆ ಕೇಸರಿ ಶಾಲು ಹಾಕಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಅಂದು ಕ್ಲಿಕ್ಕಿಸಿದ ಫೋಟೋದಲ್ಲಿ ಶಾಲು ಮೇಲೆ ಯಾವುದೇ ಅಕ್ಷರಗಳು ಇರಲಿಲ್ಲ. ಇದೀಗ ಅದೇ ಫೋಟೋದ ಶಾಲು ಮೇಲೆ ವೋಟ್ ಫಾರ್ ಬಿಜೆಪಿ ಎಂಬ ಸಾಲು ಬರೆದು ಕೊಂಚ ಎಟಿಡ್ ಮಾಡಿ ಹರಿಬಿಡಲಾಗಿದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bjpಬಿಜೆಪಿBollywoodಬಾಲಿವುಡ್Deepika Padukoneದೀಪಿಕಾ ಪಡುಕೋಣೆಲೋಕಸಭೆ ಚುನಾವಣೆLok Sabha pollsRanveer Singhರಣವೀರ್ ಸಿಂಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


