ನಿಖಿಲ್ ಎಲ್ಲಿದ್ದೀಯಪ್ಪ ಚಿತ್ರದಲ್ಲಿ ನಟಿಸಲು ನಾನ್ ರೆಡಿ: ನಟಿ ತಾರಾ
ನಿಖಿಲ್ ಎಲ್ಲಿದ್ದೀಯಪ್ಪ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಹಲವರು ಟಿಕ್ ಟಾಕ್ ವಿಡಿಯೋ ಮೂಲಕ ನಾಟಕ, ವಾಟ್ಸ್ ಆ್ಯಪ್ ಮೂಲಕ ವಿಡಿಯೋಗಳನ್ನು ಮಾಡಿ ಹರಿಬಿಟ್ಟಿದ್ದರು.

Published On :
ಬೆಳಗಾವಿ: ನಿಖಿಲ್ ಎಲ್ಲಿದ್ದೀಯಪ್ಪ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಹಲವರು ಟಿಕ್ ಟಾಕ್ ವಿಡಿಯೋ ಮೂಲಕ ನಾಟಕ, ವಾಟ್ಸ್ ಆ್ಯಪ್ ಮೂಲಕ ವಿಡಿಯೋಗಳನ್ನು ಮಾಡಿ ಹರಿಬಿಟ್ಟಿದ್ದರು. ಇದೀಗ ಇದೇ ಹೆಸರಲ್ಲಿ ಚಿತ್ರ ಮಾಡಿದರೆ ಅದರಲ್ಲಿ ನಾನು ನಟಿಸಲು ರೆಡಿ ಎಂದು ನಟಿ, ಬಿಜೆಪಿ ಮಾಜಿ ಎಂಎಲ್ಸಿ ತಾರಾ ಹೇಳಿದ್ದಾರೆ.
ಚಿತ್ರದಲ್ಲಿ ಪಾತ್ರ ಚೆನ್ನಾಗಿದ್ದರೆ ಕಥೆ ಇಷ್ಟವಾದರೇ ಖಂಡಿತವಾಗಿಯೂ ನಾನು ಅಭಿನಯಿಸುತ್ತೇನೆ. ಒಳ್ಳೆಯ ನಿರ್ದೇಶಕ, ಕಥೆ ಮತ್ತು ಸಂಭಾವ್ಯ ಸಿಕ್ಕರೆ ಚಿತ್ರದಲ್ಲಿ ನಟಿಸುತ್ತೇನೆ ಎಂದರು.
ನಿಖಿಲ್ ಎಲ್ಲಿದ್ದೀಯಪ್ಪ ಟೈಟಲ್ ನಲ್ಲಿ ಸಿನಿಮಾ ಮಾಡಲು ಹಲವರು ಪ್ಲಾನ್ ಮಾಡಿದ್ದು ಅಲ್ಲದೆ ಚಿತ್ರದ ಶೀರ್ಷಿಕೆಗಾಗಿ 7 ರಿಂದ 8 ಮಂದಿ ಟೈಟಲ್ ಕೊಡುವಂತೆ ಫಿಲಂ ಚೇಂಬರ್ ಗೆ ಮನವಿ ಮಾಡಿದ್ದರು. ಆದರೆ ಇದೆಲ್ಲಾ ರಾಜಕೀಯಕ್ಕೆ ಸಂಬಂಧಿಸುವುದರಿಂದ ವಾಣಿಜ್ಯ ಮಂಡಳಿ ಯಾರಿಗೂ ಟೈಟಲ್ ನೀಡಲು ನಿರಾಕಿಸಿತ್ತು.
ಇನ್ನು ಚಿತ್ರ ನಟರ ಕುರಿತಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ತಾರಾ ಅವರು, ಸಿಎಂ ಮಗ ಸೋಲುವ ಭಯದಲ್ಲಿ ಈ ರೀತಿ ಮಾತಾಡುತ್ತಿದ್ದಾರೆ. ಯಾರೇ ಆಗಲಿ ವೈಯಕ್ತಿಕ ತೇಜೋವಧೆ ಮಾಡಬಾರದು ಎಂದು ನಟಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Politicsರಾಜಕೀಯಮಂಡ್ಯMandyaTaraತಾರಾಲೋಕಸಭೆ ಚುನಾವಣೆLok Sabha pollsNikhil Yellidiyappaನಿಖಿಲ್ ಎಲ್ಲಿದ್ದೀಯಪ್ಪ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


