ಯಶ್‍ಗೆ ಅಭಿಮಾನಿಯೊಬ್ಬ ನಿಂಬೆಹಣ್ಣು ಕೊಟ್ಟಿದ್ದೇಕೆ ಗೊತ್ತ?
ಸದ್ಯ ಕರ್ನಾಟಕ ರಾಜಕೀಯದಲ್ಲಿ ನಿಂಬೆಹಣ್ಣು ಸಹ ದೊಡ್ಡ ಹೆಸರು ಮಾಡಿದೆ. ಪ್ರಮುಖ ನಾಯಕರು ತಮ್ಮ ಕೈಯಲ್ಲಿ ನಿಂಬೆಹಣ್ಣು ಹಿಟ್ಟುಕೊಂಡು ತಿರುಗುತ್ತಿರುವುದು ನಿಂಬೆಹಣ್ಣಿಗೂ ಬೆಲೆ ಜಾಸ್ತಿಯಾಗಿದೆ.

Published On :
ಮಂಡ್ಯ: ಸದ್ಯ ಕರ್ನಾಟಕ ರಾಜಕೀಯದಲ್ಲಿ ನಿಂಬೆಹಣ್ಣು ಸಹ ದೊಡ್ಡ ಹೆಸರು ಮಾಡಿದೆ. ಪ್ರಮುಖ ನಾಯಕರು ತಮ್ಮ ಕೈಯಲ್ಲಿ ನಿಂಬೆಹಣ್ಣು ಹಿಟ್ಟುಕೊಂಡು ತಿರುಗುತ್ತಿರುವುದು ನಿಂಬೆಹಣ್ಣಿಗೂ ಬೆಲೆ ಜಾಸ್ತಿಯಾಗಿದೆ. ಈ ಮಧ್ಯೆ ಪ್ರಚಾರದಲ್ಲಿ ತೊಡಗಿದ್ದ ರಾಕಿಂಗ್ ಸ್ಟಾರ್ ಯಶ್‍ಗೆ ಅಭಿಮಾನಿಯೊಬ್ಬ ನಿಂಬೆಹಣ್ಣು ಕೊಟ್ಟಿದ್ದಾರೆ.
ಸ್ವತಂತ್ರ್ಯ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಯಶ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇಂದು ಹಳ್ಳಿಕೆರೆಯಲ್ಲಿ ಪ್ರಚಾರ ಮಾಡುತ್ತಿದ್ದಾಗ ಅಭಿಮಾನಿಯೊಬ್ಬ ಯಶ್ ಗೆ ಅಣ್ಣ ಸೇಫ್ಟಿಗೆ ಇರಲಿ ಅಂತಾ ನಿಂಬೆಹಣ್ಣನ್ನು ಕೊಟ್ಟಿದ್ದಾರೆ.
ಅಭಿಮಾನಿ ನಿಂಬೆಹಣ್ಣು ಕೊಟ್ಟಾಗ ಯಶ್ ಯಾಕೋ ನಿಂಬೆಹಣ್ಣು ಸೇಫ್ಟಿಗಾ? ಎಂದು ಗ್ರಾಮಸ್ಥರ ಮುಂದೆ ನಿಂಬೆಹಣ್ಣನ್ನು ಕೈಯಲ್ಲಿ ಹಿಡಿದು ತೋರಿಸಿದರು. ಬಳಿಕ ಜನರ ಪ್ರೀತಿ ಇರುವವರೆಗೂ ಇದ್ಯಾವುದೂ ಬೇಡ ಬಿಡ್ರೋ ಅಂತ ಹೇಳಿ ಪ್ರಚಾರ ಕಾರ್ಯ ಮುಂದುವರೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
yashPoliticsಮಂಡ್ಯMandyaಯಶ್ಲೋಕಸಭೆ ಚುನಾವಣೆLok Sabha pollsLemonನಿಂಬೆಹಣ್ಣುSumalatha Ambareeshಸುಮಲತಾ ಅಂಬರೀಶ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


