ಪಡಿತರ ಚೀಟಿ ವಿತರಿಸಲು ಮನವಿ
ಹುಬ್ಬಳ್ಳಿ: ದಲಿತ ಕಡು ಬಡವರಿಗೆ ಪಡಿತರ ಚೀಟಿ ಕೂಡಲೇ ವಿತರಿಸಬೇಕೆಂದು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ಹೋರಾಟ ಸಮಿತಿ ಕಾರ್ಯಕರ್ತರು ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಪಡಿತರವನ್ನೇ ಆಧಾರವಾಗಿಟ್ಟುಕೊಂಡು ಬದುಕುತ್ತಿರುವ ಬಡಬಗ್ಗರಿಗೆ ರೇಷನ್ ಕಾರ್ಡ್ ವಿತರಣೆ ಮಾಡದಿರುವ ಪರಿಣಾಮ ಆಹಾರದ ಸಮಸ್ಯೆ ಎದುರಾಗಿದೆ. ಇಂದಿನ ತುಟ್ಟಿ ದಿನಮಾನದಲ್ಲಿ ದಿನಸಿ ಸಾಮಗ್ರಿ ಕೊಳ್ಳಲು ಕಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಎರಡೊತ್ತಿನ ಊಟಕ್ಕಾಗಿ ಬಡವರು ತೊಂದರೆ ಅನುಭವಿಸುವಂತಾಗಿದ್ದು, ಸರ್ಕಾರ
ಈ ಕೂಡಲೇ ಎಲ್ಲ ಅಡೆತಡೆಗಳನ್ನು ದೂರ ಮಾಡಿ ಪಡಿತರ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಕಾರ್ಯಕರ್ತರು ಒತ್ತಾಯಿಸಿದರು.
ಆನಂದ ಬೆಣಸಮಟ್ಟಿ, ಪಕ್ಕಣ್ಣ ದೊಡ್ಡಮನಿ, ಮಹೇಶ ಭಂಡಾರಿ, ಮಂಜುನಾಥ ಭಂಗಿ, ಬಸವಣ್ಣೆಪ್ಪ ತಂಬೂರ, ಗೋಪಾಲ ತಲಪೂರ ಮತ್ತಿತರರು ಇದ್ದರು.
--
ಹುಣಸೀಮರದ ಮಾತಲ್ಲಿ ಹುರುಳಿಲ್ಲ: ಶಿವಣ್ಣ ಬೆಲ್ಲದ
ಧಾರವಾಡ: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಸಮಿತಿ ಕಾರ್ಯಕಾರಿ ಮಂಡಳಿಯ ಚುನಾವಣೆ ಇತ್ತೀಚೆಗೆ ನಡೆದಿದ್ದು, ಗೆದ್ದ ಅಭ್ಯರ್ಥಿಗಳ ಬಗ್ಗೆ ವಿರೋಧಿ ಗುಂಪು ತಪ್ಪು ಮಾಹಿತಿ ನೀಡಿದೆ ಎಂದು ಸಮಿತಿ ಮಾಜಿ ಅಧ್ಯಕ್ಷ ಶಿವಣ್ಣ ಬೆಲ್ಲದ ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುರಾಜ ಹುಣಸೀಮರದ ಹಾಗೂ ಜಿ.ಜಿ. ದೊಡವಾಡ ಅವರು ಆಯ್ಕೆಯಾದ ಕೆಲ ಸದಸ್ಯರು ತಮ್ಮವರೆಂದು ಹೇಳಿದ್ದು ವಿಷಾದನೀಯ ಎಂದರು.
ಸಮಾಜದ ಜನತೆಗೆ ತಪ್ಪು ಸಂದೇಶ ನೀಡಬಾರದು. ಎ.ಎಸ್. ಪ್ರಭಾಕರ ಹಾಗೂ ಎ.ಎಸ್. ನಳಿನಿ ನಮ್ಮ ಗುಂಪಿನಲ್ಲಿದ್ದು, ಅದೇ ರೀತಿ ಈಶ್ವರ ಉಳ್ಳೆಗಡ್ಡಿ ನಮ್ಮ ಜೊತೆಗೂಡಿ ಸ್ಪರ್ಧಿಸಿದ್ದರು. ಗೀತಾ ಮರಲಿಂಗಣ್ಣವರ ಅವರನ್ನು ಪತಿಯೇ ಸೂಚಿಸಿದ್ದರಿಂದ ಅವರನ್ನೂ ನಮ್ಮ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದೆವು. ಇದೇ ರೀತಿ ಇನ್ನೂ ಮೂವರು ತಮ್ಮ ಒಪ್ಪಿಗೆ ಕೊಟ್ಟಿದ್ದರಿಂದ ನಮ್ಮ ಪಟ್ಟಿಯಲ್ಲಿ ಸೇರಿಸಿ ಪ್ರಚಾರ ಮಾಡುವ ಮೂಲಕ ಗೆಲ್ಲಿಸಿದ್ದೇವೆ. ಗೆದ್ದವರೆಲ್ಲರೂ ನಮ್ಮವರೇ ಎಂದು ಹೇಳಿಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದು ಬೆಲ್ಲದ ವ್ಯಂಗ್ಯವಾಡಿದರು.
ಇದೀಗ ಚುನಾವಣೆ ಮುಗಿದಿದೆ. ಎಲ್ಲರೂ ಕೂಡಿ ಒಟ್ಟಾಗಿ ಸಮಾಜವನ್ನು ಕಟ್ಟಬೇಕಿದೆ. ಇದನ್ನು ಬಿಟ್ಟು ಹುಣಸೀಮರದ ಗುಂಪು ಕಟ್ಟುವುದು ಸರಿಯಲ್ಲ. ಹುಣಸೀಮರದ ಅವರನ್ನು ಸಮಿತಿ ಸದಸ್ಯರನ್ನಾಗಿ ಮಾಡಿದ್ದು ತಾವು. ಸದಸ್ಯತ್ವ ಶುಲ್ಕವನ್ನು 15 ದಿನ ಬಿಟ್ಟು ಕೊಟ್ಟಿದ್ದಾರೆ. ಇದೀಗ ಸಮಾಜದ ವಿರುದ್ಧ ಕೆಲಸ ಮಾಡುತ್ತಿದ್ದಾರೆಂದು ಬೆಲ್ಲದ ಆರೋಪಿಸಿದರು.
ಬಸವಂತಪ್ಪ ತೋಟದ, ಶಂಕರ ಕುಂಬಿ, ಚಂದ್ರಶೇಖರ ಶಿರೂರ, ಎ.ಎಸ್. ಪ್ರಭಾಕರ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

