ಸಂಗೀತ ಸಂವೇದನಾ ಕ್ರಿಯೆ
ಹುಬ್ಬಳ್ಳಿ: ಸಂಗೀತ ಕೇವಲ ಮನರಂಜನೆಗಷ್ಟೇ ಅಲ್ಲ. ಅದು ಅಲೌಕಿಕ ಅನುಭೂತಿ ನೀಡುವ ಸಂವೇದನಾ ಕ್ರಿಯೆ ಎಂಬುದು ನಿರೂಪಿತವಾಗಿದೆ ಎಂದು ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಹೇಳಿದರು.
ವಿದ್ಯಾನಗರದ ಸ್ಟಡಿ ಹೌಸ್ನಲ್ಲಿರುವ ಲೇಡಿಸ್ ಹಾಸ್ಟೆಲ್ನಲ್ಲಿ ಇತ್ತೀಚೆಗೆ ನಡೆದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗೀತ ಮನಸ್ಸಿಗೆ ಮುದ ನೀಡುವ ಸಾಧನ ಎಂದರು.
ಪ್ರೊ. ಎಂ.ಎಚ್. ದ್ಯಾವಪ್ಪನವರ ಮಾತನಾಡಿ, ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ, ಕಠಿಣ ಪರಿಶ್ರಮ ಅತ್ಯಗತ್ಯ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕಠಿಣ ಪರಿಶ್ರಮ ರೂಢಿಸಿಕೊಳ್ಳಬೇಕು. ಅಂದಾಗಲೇ ಸಾರ್ಥಕತೆ ದೊರೆಯುತ್ತದೆ ಎಂದರು.
ಜಿ. ವಿ. ವಳಸಂಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಂ.ಎಚ್. ಹಿರೇಗೌಡರ, ಜಿ.ಎಂ. ಭಟ್ಟ ಪಾಲ್ಗೊಂಡಿದ್ದರು. ಅನುಪಮ ಭಟ್ಟ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗಣೇಶ ಗುಂಡಕಲ್ ತಬಲಾ ಸಾಥ್ ನೀಡಿದರೆ, ಸತೀಶ ಶೆಟ್ಟಿ ಹಾರ್ಮೋನಿಯಂ ಸಾಥ್ ನೀಡಿದರು. ವಿನುತಾ ನಾಯ್ಕ ಪ್ರಾರ್ಥಿಸಿದರು.
ಈರನಗೌಡ ಭೀಮನಗೌಡ ಹುಲ್ಲೂರ ನಿಧನ
ನವಲಗುಂದ: ಇಲ್ಲಿಯ ಸಿದ್ದಾಪುರ ಓಣಿ ನಿವಾಸಿ ಈರನಗೌಡ ಭೀಮನಗೌಡ ಹುಲ್ಲೂರ (50) ಭಾನುವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ, ಅಪಾರ ಬಂಧು-ಬಳಗ ಇದ್ದಾರೆ. ಈರನಗೌಡ ನಿಧನಕ್ಕೆ ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಸಚಿವ ಕೆ.ಎನ್. ಗಡ್ಡಿ, ಪಂಚಗೃಹ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು, ಗವಿಮಠದ ಬಸವಲಿಂಗ ಸ್ವಾಮೀಜಿ, ನಾಗಲಿಂಗಸ್ವಾಮಿ ಮಠದ ವೀರಯ್ಯ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಚಿನ್ನಾಭರಣ ಲೂಟಿ
ಹುಬ್ಬಳ್ಳಿ: ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಕಳ್ಳರು ಮನೆಯ ಬೀಗ ಮುರಿದು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಹುಬ್ಬಳ್ಳಿ ನಗರದ ಕುಸುಗಲ್ ಸಿಟಿಪಾರ್ಕ್ನಲ್ಲಿ ನಡೆದಿದೆ. ಶ್ರೀದೇವಿ ಸಿದ್ದಾಪುರ ಎಂಬುವವರ ಮನೆಗೆ ನುಗ್ಗಿದ ಕಳ್ಳರು 115 ಗ್ರಾಂ ತೂಕದ ಬಂಗಾರದ ಒಡವೆ ಹಾಗೂ ರು. 10 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಕಳ್ಳತನ: ದೂರು
ಹುಬ್ಬಳ್ಳಿ: ನೇಕಾರ ನಗರದ ಸದಾಶಿವನಗರದಲ್ಲಿನ ರುಕ್ಮಿಣಿ ಹೆಳವರ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಡೆದಿದೆ. ಮನೆ ಮಂದಿ ಊರಿಗೆ ಹೋದಾಗ ಕೀಲಿ ಕೈ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು 10 ಗ್ರಾಂ ತೂಕದ ಚಿನ್ನಾಭರಣ, 450 ಗ್ರಾಂ ತೂಕದ ಬೆಳ್ಳಿ ಆಭರಣ, ರು. 12 ನಗದು, ರೇಷ್ಮೆ ಸೀರೆ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಹಳೆಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

