ತಾಯಿ ಋಣ ತೀರಿಸಲಾಗದು
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 19
ತಾಯಿ ಇದ್ದರೆ ನೂರು ಜನ ಬಂಧು ಬಳಗವಿದ್ದಂತೆ. ತಾಯಿಯು ತನ್ನೆಲ್ಲ ಕಷ್ಟಕಾರ್ಪಣ್ಯಗಳನ್ನು ಬದಿಗಿಟ್ಟು ಮಕ್ಕಳ ಸರ್ವಾಂಗೀಣ ಶ್ರೇಯಸ್ಸಿಗೆ ಎಂಥ ತ್ಯಾಗವನ್ನಾದರೂ ಮಾಡುತ್ತಾಳೆ. ಇಂತಹ ತಾಯಿಯ ಋಣ ತೀರಿಸಲಾಗದು ಎಂದು ಕನ್ನಡ ವಿದ್ವಾಂಸ ಡಾ. ಎಸ್.ಎಂ. ವೃಷಭೇಂದ್ರಸ್ವಾಮಿ ಹೇಳಿದರು.
ಇಲ್ಲಿಯ ವಿದ್ಯಾವರ್ಧಕ ಸಂಘದಲ್ಲಿ ಚನ್ನಮ್ಮ ಬಸಲಿಂಗಪ್ಪ ಹೊಸಕೋಟಿ ದತ್ತಿ ಪ್ರಾರಂಭೋತ್ಸವದ ಅಂಗವಾಗಿ ಆಯೋಜಿಸಿದ್ದ ತಾಯಿ ಸ್ಮರಣೆ ತಂದೆ-ತಾಯಿ, ಗುರು-ಹಿರಿಯರ ಸೇವೆ ಸ್ಮರಣೆ, ಕರ್ತವ್ಯ ಕುರಿತು ಚಿಂತನೆಗಳು ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ಪೂಜ್ಯ ಸ್ಥಾನವಿದೆ. ತಾಯಿಗಿಂತ ಮಿಗಿಲಾದ ಬಂಧು ಜಗತ್ತಿನಲ್ಲಿಲ್ಲ. ತಾಯಿ ಕಣ್ಣಿಗೆ ಕಾಣುವ ದೇವರು. ತಾಯಿ, ಅವ್ವ, ಅಮ್ಮ ಅಂದಾಗ ಯಾವುದೋ ಅಗೋಚರ, ಅದಮ್ಯ ಮಹಾಶಕ್ತಿ ಮೈಯಲ್ಲಿ, ಮನಸ್ಸಿನಲ್ಲಿ, ಹೃದಯದಲ್ಲಿ ತುಂಬಿ ಬರುತ್ತದೆ ಎಂದರು.
ಸಾಹಿತಿ ಲೀಲಾ ಕಲಕೋಟಿ ಮಾತನಾಡಿ, ಜನನಿಯ ಸೇವೆ ಎಷ್ಟು ಮಾಡಿದರೂ ಕಡಿಮೆ. ಇಂದಿನ ದಿನಗಳಲ್ಲಿ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ವಿಷಾಧನೀಯ. ಹೊಸಕೋಟಿ ದಂಪತಿಗಳು ತಾಯಿ ಸ್ಮರಣೆ ಕುರಿತಾಗಿ ಸಂಘದಲ್ಲಿ ದತ್ತಿ ಇರಿಸಿ ಇಂಥ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಅನುಕೂಲ ಮಾಡಿರುವುದು ಶ್ಲಾಘನೀಯ. ತಂದೆ-ತಾಯಿ, ಗುರು-ಹಿರಿಯರ ಸೇವೆ ಮಾಡಿ, ಅವರನ್ನು ಪ್ರೀತಿ, ವಾತ್ಸಲ್ಯದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಐವರು ತಾಯಂದಿರನ್ನು ಸನ್ಮಾನಿಸಲಾಯಿತು. ಶಾಂತಾ ಹಿರೇಮಠ, ದತ್ತಿದಾನಿ ಜಯಶ್ರೀ ಅಣ್ಣಿಗೇರಿ, ದತ್ತಿ ದಾನಿ ಚನಬಸಪ್ಪ ಹೊಸಕೋಟಿ, ಗೌರಮ್ಮ ಹೊಸಕೋಟಿ, ಸಂಘದ ಉಪಾಧ್ಯಕ್ಷ ಶಿವಣ್ಣ ಬೆಲ್ಲದ, ಕಾರ್ಯಾಧ್ಯಕ್ಷ ಪ್ರೊ. ಬಿ.ವಿ. ಗುಂಜೆಟ್ಟಿ, ಕೋಶಾಧ್ಯಕ್ಷ ಕೃಷ್ಣ ಜೋಶಿ, ಸೌಮ್ಯ ದಾಸನಕೊಪ್ಪ, ಶರತ ಅಂಚಟಗೇರಿ, ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ಮೋಹನ ನಾಗಮ್ಮನವರ, ಗುರು ಹಿರೇಮಠ, ವಿ.ವಿ. ಹೆಬ್ಬಳ್ಳಿ, ಭಾರತಿದೇವಿ ರಾಜಗುರು, ಪ್ರಭಾವತಿ ಮೂರಶಿಳ್ಳಿ, ಆಶಾ ಸಯ್ಯದ್, ಮಧಮತಿ ಸಣಕಲ್ಲ, ಸಿ.ಜಿ. ಹಿರೇಮಠ, ಮಾರ್ಕಂಡೇಯ ದೊಡಮನಿ, ಬಿ.ಕೆ. ಹೊಂಗಲ್, ಎಚ್.ಡಿ. ನದಾಫ್, ಡಾ. ವಿಶ್ವನಾಥ ಚಿಂತಾಮಣಿ, ಎಂ.ಬಿ. ಹೆಗ್ಗೇರಿ, ಚಂದ್ರಕಾಂತ ಸಣಕಲ್, ಬಿ.ಆರ್. ಶೆಟ್ಟಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

