ಮರೇವಾಡ: ಇಂದು ಬಸವಣ್ಣ ಜಾತ್ರೆ
ಧಾರವಾಡ: ತಾಲೂಕಿನ ಮರೇವಾಡ ಗ್ರಾಮದ ಬಸವಣ್ಣ(ನಂದೀಶ್ವರ) ದೇವರ ವಾರ್ಷಿಕ ರಥೋತ್ಸವ ಮೇ 14 ರಂದು ಸಂಜೆ 5ಕ್ಕೆ ನಡೆಯಲಿದೆ.
ದೇವರ ಶಿಲಾ ವಿಗ್ರಹಕ್ಕೆ ಏಕಾದಶ ಮಹಾರುದ್ರಾಭಿಷೇಕ, ನೂರಾವೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ ಮತ್ತು ಮಹಾಮಂಗಳಾರತಿಯು ಹಿರಿಯ ವೈದಿಕರಾಗಿರುವ ವೇ.ಮೂ. ತಿಪ್ಪಯ್ಯಸ್ವಾಮಿ ಯರಗಂಬಳಿಮಠ ಹಾಗೂ ದೇವಾಲಯದ ಅರ್ಚಕ ಬಳಗದ ವೈದಿಕತ್ವದಲ್ಲಿ ನಡೆಯಲಿವೆ. ನಂತರ ದೇವಾಲಯದ ಭಕ್ತ ಮಂಡಳಿ ದಾಸೋಹ ಸೇವೆಯಲ್ಲಿ ಮಹಾಪ್ರಸಾದ ವಿತರಣೆ ಜರುಗುವುದು.
ರಥೋತ್ಸವವು ವಿವಿಧ ಜನಪದ ವಾದ್ಯ, ಮೇಳಗಳೊಂದಿಗೆ ನಡೆಯಲಿದೆ. ಅಮ್ಮಿನಬಾವಿ ಗ್ರಾಮದ ಬಸವಣ್ಣ ದೇವರ ದೇವಸ್ಥಾನದ ಪ್ರಧಾನ ಅರ್ಚಕರು ಕಾರ್ಣಿಕ ನುಡಿಯುವರು.
ಮರೇವಾಡ ಬಸವಣ್ಣ ದೇವರ ಭಕ್ತ ಸಮೂಹವು ಗದಗ, ಹಾವೇರಿ, ಧಾರವಾಡ, ಬೆಳಗಾವಿ, ದಾಂಡೇಲಿ, ಬಾಗಲಕೋಟೆ, ವಿಜಾಪುರ ಸೇರಿದಂತೆ ದೂರದ ಮಹಾರಾಷ್ಟ್ರದಲ್ಲಿದ್ದು, ಈ ಜಾತ್ರಾ ಮಹೋತ್ಸವದಲ್ಲಿ ಶೃದ್ಧೆಯಿಂದ ಪಾಲ್ಗೊಳ್ಳುತ್ತಾರೆ.
ಡೊಳ್ಳಿನ ಹಾಡುಗಳ ಸ್ಪರ್ಧೆ ಇದೇ ಸಂದರ್ಭದಲ್ಲಿ ನಡೆಯಲಿದ್ದು, ಜಾತ್ರೆಯ ದಿನ ಅಹೋರಾತ್ರಿ ಸವಾಲ-ಜವಾಬ ಡೊಳ್ಳಿನ ಹಾಡುಗಳ ಸ್ಪರ್ಧೆ ಏರ್ಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

