ಪರಿಹಾರ ಕಾರ್ಯಕ್ಕೆ ಟಾಸ್ಕ್ಫೋರ್ಸ್
ಹುಬ್ಬಳ್ಳಿ: ಅವಳಿ ನಗರದಲ್ಲಿ ಪ್ರಕೃತಿ ವಿಕೋಪದಿಂದ ಆಗುವ ಅನಾಹುತಗಳಿಗೆ ತುರ್ತು ಪರಿಹಾರ ಕಾರ್ಯಗಳನ್ನು ಕೈಕೊಳ್ಳಲು ಮಹಾನಗರ ಪಾಲಿಕೆಯಿಂದ ಟಾಸ್ಕ್ಫೋರ್ಸ್ ರಚಿಸಿ, ಕೆಲಸ ನಿರ್ವಹಿಸಲು ನಿರ್ದೇಶಿಸಲಾಗಿದೆ.
ಇತ್ತಿಚಿನ ದಿನಗಳಲ್ಲಿ ಆಕಸ್ಮಿಕ ಮಳೆಯಿಂದ ಅವಳಿ ನಗರದ ತಗ್ಗು ಪ್ರದೇಶಗಳಲ್ಲಿ ಹಾಗೂ ಇತರ ಪ್ರದೇಶಗಳಲ್ಲಿ ಅನಾಹುತಗಳು ಸಂಭವಿಸುತ್ತಿವೆ. ಪ್ರಕೃತಿ ವಿಕೋಪದಿಂದ ಆಗುವ ಇಂತಹ ಅನಾಹುತಗಳಿಗೆ ಪಾಲಿಕೆಯಿಂದ ತುರ್ತು ಕೆಲಸ್ನ ತೆಗೆದುಕೊಳ್ಳಲು ಅನುಕೂಲವಾಗುವಂತೆ ಪಾಲಿಕೆಯಿಂದ ತುರ್ತು ಕಾರ್ಯಪಡೆಯನ್ನ್ನು ದಿನದ 24 ಗಂಟೆಯ ಅವಧಿಯಲ್ಲಿ ಕೆಲಸ ನಿರ್ವಹಿಸುವಂತೆ ರಚಿಸಲಾಗಿದೆ.
ರಚಿಸಿದ ಕಾರ್ಯಪಡೆಯಲ್ಲಿ ವಲಯ ಕಚೇರಿ ಸಹಾಯಕ ಆಯುಕ್ತರು, ಕಿರಿಯ ಅಭಿಯಂತರು ಹಾಗೂ ಕನಿಷ್ಠ 10 ಕಾರ್ಮಿಕರನ್ನ್ನು ಒಳಗೊಂಡಿದ್ದು, ಈ ಕಾರ್ಯಪಡೆ ಅತಿ ಅವಶ್ಯಕ ಉಪಕರಣಗಳಾದ ಸೇಪ್ಟಿ ಬೆಲ್ಟ್, ರೋಫ್, ಟಾರ್ಚ್, ಟ್ರ್ಯಾಕ್ಟರ್, ಕಾಂಕ್ರೀಟ್ ಕಟರ್, ವಿಶೇಷ ಸರ್ಚ್ ಲೈಟ್ ಮತ್ತಿತರ ಅವಶ್ಯಕ ಉಪಕರಣಗಳನ್ನ್ನು ಹೊಂದಿದೆ.
ತುರ್ತು ವೈದ್ಯಕೀಯ ಸೇವ್ನೆ ಒದಗಿಸಲು ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ವೈದ್ಯಕೀಯ ವಾಹನದೊಂದಿಗೆ ಸಿಬ್ಬಂದ್ನಿ ನಿಯೋಜಿಸಿ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ. ರಚಿಸಿದ ತಂಡವು ದಿನನಿತ್ಯದ ಅವಧಿಯಲ್ಲಿ ಕೆಲಸ ನಿರ್ವಹಿಸಿ ವಿಶೇಷ ಕಾರ್ಯಪಡೆಯು ಮೊದಲ ತಂಡವು ಮಧ್ಯಾಹ್ನ್ನ 2 ರಿಂದ ರಾತ್ರಿ 10 ಗಂಟೆಯ ಅವಧಿಗೆ ಮತ್ತು 2ನೇ ತಂಡ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯ ಅವಧಿಗೆ ಕೆಲಸ ನಿರ್ವಹಿಸುವುದು. ಹುಬ್ಬಳ್ಳಿ ಹಾಗೂ ಧಾರವಾಡ ಕೇಂದ್ರ ಕಚೇರಿಯಲ್ಲಿ ಈ ತಂಡ ಲಭ್ಯವಿದ್ದು ಆಕಸ್ಮಿಕ ಘಟನೆಗಳಿಗೆ ಸಾರ್ವಜನಿಕರಿಂದ ಸ್ವೀಕರಿಸುವ ತುರ್ತು ಕರೆಗಳನ್ನು ಆಧರಿಸಿ ತಂಡ ಕಾರ್ಯಾಚರಣೆ ಮಾಡುವುದು. ಈ ತಂಡದಲ್ಲಿ ತೋಟಗಾರಿಕೆ ಇಲಾಖೆ ಸಿಬ್ಬಂದಿಯೂ ಇದ್ದು, ಪ್ರಕೃತಿ ವಿಕೋಪದಿಂದ ಗಿಡಗಳು ಬಿದ್ದಲ್ಲಿ ಕೂಡಲೇ ತೆರವುಗೊಳಿಸಲು ಹೆಚ್ಚುವರಿ ಉಪಕರಣಗಳನ್ನು ಒದಗಿಸಲಾಗಿದೆ. ಪ್ರತಿ ತುರ್ತು ತಂಡದ ಜೊತೆಗೆ ಆರೋಗ್ಯ ಮೇಲ್ವಿಚಾರಣಾ ಸಿಬ್ಬಂದಿ, ವಲಯ ಕಚೇರಿಯ ತಾಂತ್ರಿಕ ಸಿಬ್ಬಂದಿ ಮತ್ತು ಪರಿಸರ ಅಭಿಯಂತರು ಒಳಗೊಂಡಿದ್ದು, ಹುಬ್ಬಳ್ಳಿ ವಿಭಾಗದ ತುರ್ತು ಕಾರ್ಯಗಳಿಗೆ ಅಧೀಕ್ಷಕ ಅಭಿಯಂತರರನ್ನ್ನು ಮತ್ತು ಧಾರವಾಡ ವಿಭಾಗದ ತುರ್ತು ಕಾರ್ಯಗಳಿಗೆ ಜಂಟಿ ಆಯುಕ್ತರನ್ನ್ನು ಉಸ್ತುವಾರಿ ಅಧಿಕಾರಿಗಳನ್ನ್ನಾಗಿ ನೇಮಿಸಿ ಕಾರ್ಯನಿರ್ವಹಿಸಲು ಆಯುಕ್ತರು ಸೂಚಿಸಿದ್ದಾರೆ.
ಸಾರ್ವಜನಿಕರು ಪ್ರಕೃತಿ ವಿಕೋಪದಿಂದ ಆಗುವ ಅನಾಹುತಗಳಿಗೆ ಪಾಲಿಕೆಯಿಂದ ಅವಶ್ಯವಿರುವ ಸಹಾಯಕ್ಕಾಗಿ ಅಧಿಕಾರಿಗಳನ್ನು ಮತ್ತು ಪಾಲಿಕೆಯ ದಿನನಿತ್ಯದ 24 ಗಂಟೆ ಅವಧಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 2213888, 2213869 ಸಂಪರ್ಕಿಸಲು ಕೋರಲಾಗಿದೆ. ಪಾಲಿಕೆಯಿಂದ ಮುಜಾಗೃತಾ ಕ್ರಮವಾಗಿ ವಲಯ ಕಚೇರಿ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಹೂಳು ತುಂಬಿರುವ ನೀರು ಸರಳವಾಗಿ ಹರಿಯದೆ ಇರುವ ತೆರೆದ ಚರಂಡಿಗಳನ್ನ್ನು ಗುರುತಿಸುವುದು, ನಾಲಾಗಳ ವಸ್ತುಸ್ಥಿತಿಯ್ನ ಸಮಿಕ್ಷ್ನೆ ಮಾಡಿ ಎರಡು ದಿನಗಳಲ್ಲಿ ಪ್ರಸ್ತಾವನೆ ಮತ್ತು ವರದಿ ಸಲ್ಲಿಸಲು ಸೂಚಿಸಲಾಗಿದೆ. ಈ ಪ್ರದೇಶಗಳಲ್ಲಿ ಬರುವ ಒಳಚರಂಡಿ ಚೇಂಬರ್ ಹೊದಿಕೆ ಇಲ್ಲದೆ ಇರುವುದು, ಕ್ರಾಸ್ಡ್ರೇನ್ ಸ್ಥಿತಿ ಮತ್ತು ನೀರು ಸರಾಗವಾಗಿ ಹರಿದು ಹೋಗುವಂತೆ ಕಾಮಗಾರಿ ತೆಗೆದುಕೊಳ್ಳಲು ವಿಶೇಷ ಪ್ರಸ್ತಾವನ್ನೆ ಸಲ್ಲಿಸಲು ಎಲ್ಲ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ವಲಯ ಕಚೇರಿ ಸಹಾಯಕ ಆಯುಕ್ತರಿಗೆ ಸೂಚಿಸಲಾಗಿದೆ.
ಪ್ರಕೃತಿ ವಿಕೋಪದಿಂದ ಬಿರುಗಾಳಿಗೆ ಗಿಡ-ಮರಗಳು ಉರಳಿ ಬಿದ್ದ ಪ್ರಕರಣಗಳು ವರದಿ ಆಗುತ್ತಿರುವುದರಿಂದ ಪಾಲಿಕೆಯ ತೋಟಗಾರಿಕೆ ಸಿಬ್ಬಂದಿಗೆ ವಿಶೇಷ ಯಂತ್ರಗಳನ್ನ್ನು ಪೂರೈಸಿ ಕೆಲಸ ನಿರ್ವಹಿಸಲು ನೇಮಿಸಿದೆ. ಮಳೆಯಿಂದ ಕುಸಿದು ಬೀಳುವ ಮನೆಗಳ ಕುಟುಂಬಗಳ ಸದಸ್ಯರಿಗೆ ತಾತ್ಕಾಲಿಕವಾಗಿ ವಾಸಿಸಲು ಅನಕೂಲವಾಗುವಂತೆ ವಲಯ ಕಚೇರಿ ವ್ಯಾಪ್ತಿಯಲ್ಲಿ ಈಗಾಗಲೇ ಸ್ಥಾಪಿಸಿದ ನಿರ್ಗತಿಕ ರಾತ್ರಿ ವಸತಿ ಕೇಂದ್ರಗಳಲ್ಲಿ ವಾಸಿಸಲು ಮತ್ತು ವಲಯ ಕಚೇರಿ ವ್ಯಾಪ್ತಿಯಲ್ಲಿ ಬರುವ ಪಾಲಿಕೆಯ ಸಮುದಾಯ ಭವನದಲ್ಲಿ ಉಚಿತವಾಗಿ ವಾಸ್ತವ್ಯ ಮಾಡಲು ತಿಳಿಸಲಾಗಿದೆ.
ಎಲ್ಲ ಕೆಲಸಗಳಿಗೆ ಪಾಲಿಕೆಯ ಕೇಂದ್ರ ಕಚೇರಿಯ ಎಲ್ಲ ವಿಭಾಗದ ಮುಖ್ಯಸ್ಥರನ್ನ್ನು ಪ್ರತಿ ವಲಯ ಕಚೇರಿಗೆ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ನಿತ್ಯದ ಕರ್ತವ್ಯದ ಜತೆಗೆ ಕನಿಷ್ಠ 1 ಗಂಟೆ ಬೆಳಗ್ಗೆ ಹಾಗೂ 1 ಗಂಟೆ ಸಂಜೆ ಅವಧಿಯಲ್ಲಿ ಅವರಿಗೆ ನಿಯೋಜಿಸಿದ ವಲಯ ಕಚೇರಿ ವ್ಯಾಪ್ತಿಯಲ್ಲಿ ಕ್ಷೇತ್ರ ಪರಿಶೀಲನೆ ಮಾಡಿ ಅವಶ್ಯಕ ಕ್ರಮ ತೆಗೆದುಕೊಂಡು ವರದಿ ಸಲ್ಲಿಸಲು ಆಯುಕ್ತರು ಸೂಚಿಸಿದ್ದಾರೆ.
ತುರ್ತು ಕಾರ್ಯಪಡೆ ಅಧಿಕಾರಿಗಳ ಹೆಸರು, ದೂರವಾಣಿ
ಹುಬ್ಬಳ್ಳಿ ವಿಭಾಗದ ತುರ್ತು ಕೆಲಸಗಳಿಗೆ: ವಲಯ ಕಚೇರಿ 4, 5, 6, 7, 8, 9, 10 ಹಾಗೂ 11ರ ವ್ಯಾಪ್ತಿಯ ಉಸ್ತುವಾರಿಯನ್ನು ಅಧೀಕ್ಷಕ ಅಭಿಯಂತರ ಪ್ರಕಾಶ ಗರಗ (9448021496) ಅವರಿಗೆ ವಹಿಸಲಾಗಿದೆ.
ವಲಯ ಕಚೇರಿ 4 ರ ವ್ಯಾಪ್ತಿ ವಾರ್ಡ್ಗಳಾದ 23, 24 ಹಾಗೂ 25ರ ನಾಗರಿಗರು ಸಹಾಯಕ ಆಯುಕ್ತ ಡಿ.ಡಿ. ಮಾದರ (9482248362), ವಲಯ ಕಚೇರಿ 5 ರ ವ್ಯಾಪ್ತಿಯ ವಾರ್ಡ್ಗಳಾದ 26, 27, 28, 34, 35 ಹಾಗೂ 46ರ ನಾಗರಿಕರು ಸಹಾಯಕ ಆಯುಕ್ತ ಆರ್.ಎಚ್. ಕುಲಕರ್ಣಿ (9448367388), ವಲಯ ಕಚೇರಿ 6ರ ವ್ಯಾಪ್ತಿಯ ವಾರ್ಡ್ 29, 30, 31, 32, 33, 48 ಹಾಗೂ 49ರ ನಾಗರಿಕರು ಸಹಾಯಕ ಆಯುಕ್ತ ವಿ.ಎಂ. ಹಿರೇಮಠ (9844140005), ವಲಯ ಕಚೇರಿ 7 ರ ವ್ಯಾಪ್ತಿಯ ವಾರ್ಡ್ 36, 37, 38, 39 ಹಾಗೂ 40ರ ನಾಗರಿಕರು ಸಹಾಯಕ ಆಯುಕ್ತ ಪಿ.ಡಿ. ಗಾಳೇಮ್ಮನವರ (9448267664), ವಲಯ ಕಚೇರಿ 8 ರ ವ್ಯಾಪ್ತಿಯ ವಾರ್ಡ್ 47, 50, 51, 52 ಹಾಗೂ 56ರ ನಾಗರಿಕರು ಸಹಾಯಕ ಆಯುಕ್ತ ಎಸ್.ಎನ್. ಗಣಾಚಾರಿ (9448783522), ವಲಯ ಕಚೇರಿ 9ರ ವ್ಯಾಪ್ತಿಯ ವಾರ್ಡ್ 44, 45, 53 ಹಾಗೂ 54 ನಾಗರಿಕರು ಸಹಾಯಕ ಆಯುಕ್ತ ಸುಭಾಸ ಕಂಬಳಿ (9448223850), ವಲಯ ಕಚೇರಿ 10 ರ ವ್ಯಾಪ್ತಿಯ ವಾರ್ಡ್ 41, 42, 43, 60, 61, 62, 63, 64 ಹಾಗೂ 65ರ ನಾಗರಿಕರು ಸಹಾಯಕ ಆಯುಕ್ತ ಎಂ.ಎಂ. ನದಾಫ (9341487801), ವಲಯ ಕಚೇರಿ 11 ರ ವ್ಯಾಪ್ತಿಯ ವಾರ್ಡ್ 57, 55, 58, 59, 66 ಹಾಗೂ 67ರ ನಾಗರಿಕರು ಸಹಾಯಕ ಆಯುಕ್ತ ಬಿ. ಸಣ್ಣ ಪರಶುರಾಮ (9740953200).
ಧಾರವಾಡ ವಿಭಾಗ ತುರ್ತು ಕಾರ್ಯಗಳಿಗೆ: ವಲಯ ಕಚೇರಿ ವ್ಯಾಪ್ತಿ 1, 2, 3 ಹಾಗೂ 12ರ ಉಸ್ತುವಾರಿಯನ್ನು ಜಂಟಿ ಆಯುಕ್ತ ವೀರೇಂದ್ರ ಕುಂದಗೋಳ (9448612188) ಅವರಿಗೆ ವಹಿಸಲಾಗಿದೆ. ವಲಯ ಕಚೇರಿ 1ರ ವ್ಯಾಪ್ತಿಯ ವಾರ್ಡ್ 1, 2, 13, 14 ಹಾಗೂ 17ರ ನಾಗರಿಕರು ಸಹಾಯಕ ಆಯುಕ್ತ ಪಿ.ಬಿ. ಗುಡಿಯವರ (9880858993), ವಲಯ ಕಚೇರಿ 2 ರ ವ್ಯಾಪ್ತಿಯ ವಾರ್ಡ್ 6, 7, 8, 9, 10 ಹಾಗೂ 11ರ ನಾಗರಿಕರು ಸಹಾಯಕ ಆಯುಕ್ತ ಜಿ.ಕೆ. ಮರಳಿಹಳ್ಳಿ (9448837205), ವಲಯ ಕಚೇರಿ 3 ರ ವ್ಯಾಪ್ತಿಯ ವಾರ್ಡ್ 3, 4, 5, 12 ಹಾಗೂ 15ರ ನಾಗರಿಕರು ಸಹಾಯಕ ಆಯುಕ್ತ ಶ್ರೀಧರ ವೆಂಕೊಬರಾವ್ (9480831903), ವಲಯ ಕಚೇರಿ 3 ರ ವ್ಯಾಪ್ತಿಯಲ್ಲಿ ವಾರ್ಡ್ 16, 18, 19, 20, 21 ಹಾಗೂ 22ರ ನಾಗರಿಕರು ಸಹಾಯಕ ಆಯುಕ್ತ ಆರ್.ಎ. ಶೆಟ್ಟರ (9449973216) ಅವರನ್ನು ಸಂಪರ್ಕಿಸಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

