ಧಾರವಾಡ

ಜೀವನ ವಿಧಾನದಲ್ಲಿ ರಾಕ್ಷಸಿ ಭಾವ ಬೇಡ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 8
ಸತ್ಯ ಶುದ್ಧ ಸಾತ್ವಿಕ ಆಚರಣೆಗಳನ್ನು ರೂಢಿಸಿಕೊಳ್ಳುವ ಮೂಲಕ ಜೀವನ ವಿಧಾನದಲ್ಲಿ ಎಂದೂ ರಾಕ್ಷಸಿ ಭಾವ ಇಲ್ಲದೇ ಬದುಕಬೇಕೆನ್ನುವುದು ಎಲ್ಲ ಧರ್ಮಾಚರಣೆಗಳ ಮೂಲ ಆಶಯ ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯರು ಹೇಳಿದರು.
ತಾಲೂಕಿನ ಅಮ್ಮಿನಬಾವಿಯಲ್ಲಿ ವೀರಭದ್ರೇಶ್ವರ ನೂತನ ಮೂರ್ತಿ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಗತ್ತಿನಲ್ಲಿರುವ ಯಾವುದೇ ಧರ್ಮ ಹಿಂಸೆಯನ್ನು ಬೋಧಿಸುವದಿಲ್ಲ. ದ್ವಂದ್ವ-ವೈರುಧ್ಯಗಳನ್ನು ನಾವೇ ಸೃಷ್ಟಿಸುವ ಮೂಲಕ ಮನುಷ್ಯರಲ್ಲಿ ಕಂದಕಗಳನ್ನು ನಿರ್ಮಿಸುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಬೆಳಗಾವಿ ಜಿಲ್ಲೆ ಮುರಗೋಡ ಹಿರೇಮಠದ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಜನಮನದಲ್ಲಿ ದುಷ್ಟ ಭಾವನೆಗಳನ್ನು ನಿಗ್ರಹಿಸಿ ಶಿಷ್ಟ-ಸ್ನೇಹ ಭಾವನೆಗಳನ್ನು ಬೆಳೆಸಬೇಕೆಂಬುದು ವೀರಭದ್ರಸ್ವಾಮಿಯ ಅವತಾರದ ಹಿಂದಿನ ಸಂದೇಶ. ವೀರಭದ್ರಸ್ವಾಮಿಯ ಆರಾಧನೆಯ ಹಿಂದಿರುವ ಮೂಲ ಚಿಂತನೆಯನ್ನು ಭಕ್ತರೆಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದರು.
ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯಶ್ರೀ ಸಾನಿಧ್ಯ ವಹಿಸಿದ್ದರು. ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಗಣೇಶ ಪೂಜೆ, ಗಂಗಾಕಲಶಪೂಜೆ, ನವಗ್ರಹ ಶಾಂತಿ ಪೂಜೆ, ಉಮಾಮಹೇಶ್ವರ ಪೂಜೆ, ಗುರುಪಾದಪೂಜೆ, ರುದ್ರಹೋಮ, ಏಕಾದಶ ಮಹಾ ರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ , ಮಹಾಂಗಳಾರತಿ ಹಲವು ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು.
ಸಹ ವೈದಿಕರಾದ ಶಿವಾನಂದಶಾಸ್ತ್ರಿಗಳು ಹಿರೇಮಠ, ಸೋಮಲಿಂಗಶಾಸ್ತ್ರಿಗಳು ಗುಡ್ಡದಮಠ, ಈರಯ್ಯ ಹಿರೇಮಠ, ಮೃತ್ಯುಂಜಯ ಹಿರೇಮಠ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.