15 ಶರಣರ, 211 ಕಲಾವಿದರ 111 ವಚನಗಳ ನೃತ್ಯ
ಧಾರವಾಡ: ಇಲ್ಲಿಯ ವಿದ್ಯಾವರ್ಧಕ ಸಂಘದಲ್ಲಿ ರತಿಕಾ ನೃತ್ಯನಿಕೇತನದ ವತಿಯಿಂದ ಬಸವ ಜಯಂತಿಯ ಅಂಗವಾಗಿ ವಚನ ನೃತ್ಯ ಸಂಗಮ ಕಾರ್ಯಕ್ರಮ ವಿಶೇಷ ರೀತಿಯಲ್ಲಿ ನಡೆಯಿತು.
ಮೊಟ್ಟ ಮೊದಲ ಬಾರಿಗೆ ಶರಣರ ವಚನಗಳ ಸಾರವನ್ನು ಮಕ್ಕಳ ಮೂಲಕ ಸಮಾಜಕ್ಕೆ ತಲುಪಿಸುವ ನಿಟ್ಟಿನಲ್ಲಿ ಬಸವಣ್ಣ, ಚನ್ನಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ನೀಲಾಂಬಿಕಾ, ಅಂಬಿಗರ ಚೌಡಯ್ಯ, ಡೋಹರ ಕಕ್ಕಯ್ಯ, ಮಡಿವಾಳ ಮಾಚಯ್ಯ ಸೇರಿದಂತೆ ಸುಮಾರು 15 ಶರಣರ 111 ವಚನಗಳು, 211 ಬಾಲ ಕಲಾವಿದರಿಂದ, ಸತತವಾಗಿ 15 ತಾಸುಗಳ ಕಾಲ ಮೂಡಿಬಂದಿತು.
ಭಾರತೀಯ ಸಂಸ್ಕೃತಿಯ ಪ್ರಸಿದ್ಧ ನೃತ್ಯ ಕಲಾ ಪ್ರಕಾರಗಳಾದ ಭರತನಾಟ್ಯ, ಕಥಕ್, ಕುಚಿಪುಡಿ, ಜನಪದ, ಸೆಮಿ ಕ್ಲಾಸಿಕಲ್ ಶೈಲಿಗಳಲ್ಲಿ ನೃತ್ಯಗಳನ್ನು ಸಂಯೋಜಿಸಿ ದೃಶ್ಯ ಕಾವ್ಯದ ಮೂಲಕ ವಿಭಿನ್ನವಾಗಿ ಪುಟಾಣಿ ಕಲಾವಿದರು ಪ್ರಸ್ತುತಪಡಿಸಿದರು. ಮಕ್ಕಳು ಸತತ 15 ಗಂಟೆಗಳ ಕಾಲ ನಾನಾ ವಚನಗಳಿಗೆ ಮರು ಜನ್ಮ ನೀಡಿದರು. ಸಭಿಕರ ಮನಗೆಲ್ಲುವಲ್ಲೂ ಯಶಸ್ವಿಯಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

