ಧಾರವಾಡ

ಹಣ ದುರುಪಯೋಗ: ವಸೂಲಿಗೆ ಆದೇಶ

Published On :

ಹುಬ್ಬಳ್ಳಿ:  ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನೌಕರರ ಪತ್ತಿನ ಸಹಕಾರಿ ಸಂಘದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದ ಅಂದಿನ ನೌಕರರ ಸಹಕಾರಿ ಸಂಘದ ಕಾರ್ಯದರ್ಶಿ ಎಚ್.ಜಿ. ಕೊಪ್ಪದ ಅವರಿಂದ ರು. 1.85 ಲಕ್ಷ ಮೊತ್ತ ಮತ್ತು 2007ರಿಂದ ಶೇ. 10ರಂತೆ ಬಡ್ಡಿ ಆಕರಿಸಿ ವಸೂಲಿ ಮಾಡಬೇಕು ಎಂದು ಸಹಕಾರಿ ಸಂಘಗಳ ಅಪರ ನಿಬಂಧಕರು ಆದೇಶಿಸಿದ್ದಾರೆ. ಎನ್‌ಡಬ್ಲ್ಯೂಕೆಆರ್‌ಟಿಸಿಯಲ್ಲಿ ಟ್ರಾಪಿಕ್ ಇನ್ಸಪೆಕ್ಟರ್ ಎಚ್.ಜಿ. ಕೊಪ್ಪದ ಅವರು ವಾಯವ್ಯ ಕರ್ನಾಟಕ ಸಾರಿಗೆ ನೌಕರರ ಸಹಕಾರಿ ಸಂಘದ ಕಾರ್ಯದರ್ಶಿಯಾಗಿದ್ದ ವೇಳೆ ಸಂಘದ ಹಣ ದುರುಪಯೋಗ ಮಾಡಿಕೊಂಡಿರುವುದು ವಿಚಾರಣೆ ವೇಳೆ ಸಾಬೀತಾಗಿದೆ. ಆದ್ದರಿಂದ ನವಲಗುಂದ ತಾಲೂಕಿನ ಅಳಗವಾಡಿಯಲ್ಲಿರುವ ಐದು ಎಕರೆ ಜಮೀನು ಮತ್ತು ಗೋಕುಲ್ ರಸ್ತೆಯಲ್ಲಿ ಕೊಪ್ಪದ ಅವರ ಪತ್ನಿ ರೇಣುಕಾ ಕೊಪ್ಪದ ಅವರ ಹೆಸರಿನಲ್ಲಿರುವ ಮನೆಯನ್ನು ಜಪ್ತಿ ಮಾಡಿ ದುರುಪಯೋಗಪಡಿಸಿಕೊಂಡಿರುವ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಬೇಕು ಎಂದು ಆದೇಶಿಸಿದೆ.
ಹಣ ದುರುಪಯೋಗ ಪ್ರಕರಣವನ್ನು ಮುಚ್ಚಿ ಹಾಕುವ ನಿಟ್ಟಿನಲ್ಲಿ ಕೊಪ್ಪದ ಅವರು ಅಂದಿನ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಮೂರ್ತಿ ಅವರ ವಿರುದ್ಧ ಲೋಕಾಯುಕ್ತಕ್ಕೆ ಸುಳ್ಳು ಪ್ರಮಾಣ ಪತ್ರದ ಮುಖಾಂತರ ದೂರು ನೀಡಿದ್ದರು. ವಿಚಾರಣೆ ವೇಳೆ ಪ್ರಕಾಶಮೂರ್ತಿ ಅವರ ಸಾಕ್ಷ್ಯ ಮತ್ತು ಸರ್ಕಾರಿ ಲೆಕ್ಕ ಪರಿಶೋಧಕರು ಸಲ್ಲಿಸಿದ ವರದಿಯನ್ನಾಧರಿಸಿ ಹನುಮಂತಪ್ಪ ಕೊಪ್ಪದ ಅವರು ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಸಾಬೀತು ಪಡಿಸಲಾಗಿತ್ತು. ಸಂಘದ ಪರ ಡಿ.ಕೆ. ರಾಮಪ್ಪ ಅವರು ವಕಾಲತ್ತು ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.