ಜಿಲ್ಲಾ ರೈತ ಮೋರ್ಚಾ ಸಭೆ
ಧಾರವಾಡ: ಜಿಲ್ಲಾ ರೈತರ ಸಮಸ್ಯೆ ಹಾಗೂ ಮತ್ತಿತರ ವಿಷಯಗಳನ್ನು ಚರ್ಚಿಸುವುದಕ್ಕಾಗಿ ಸತ್ತೂರಿನ ಜನತಾ ಪಕ್ಷದ ಕತೇರಿಯಲ್ಲಿ ಇತ್ತೀಚೆಗೆ ಮಹಾನಗರ ಜಿಲ್ಲಾ ರೈತ ಮೋರ್ಚಾ ಸಭೆ ನಡೆಯಿತು. ಜಿಲ್ಲೆಯ ರೈತರು ನಿತ್ಯ 3-4 ತಾಸು ಪಂಪ್ಸೆಟ್ ಬಳಸಿದ್ದರೂ 24 ತಾಸು ವಿದ್ಯುತ್ ಬಳಕೆಯ ಬಿಲ್ ನೀಡಲಾಗುತ್ತಿದೆ. ಟ್ರ್ಯಾಕ್ಟರ್, ಕೃಷಿ ಉಪಕರಣ ಖರೀದಿಸಿದಾಗ ತೆರಿಗೆ ರಹಿತ ಬಿಲ್ ನೀಡಲಾಗುತ್ತಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ರೈತರು ದೂರಿದರು. 2004ರಿಂದ ರೈತರ ಪಂಪ್ಸೆಟ್ ಬಳಕೆಯ ವಿದ್ಯುತ್ ಬಿಲ್ನ್ನು ಮನ್ನಾ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಲು ಇದೇ ಸಂದರ್ಭದಲ್ಲಿ ನಿರ್ಧರಿಸಲಾಯಿತು. ರೈತರ ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಜೂ. 30 ಕೊನೆಯ ದಿನವಾಗಿದ್ದು, ಈ ಅವಧಿಯನ್ನು ಆ. 31ರವರೆಗೂ ವಿಸ್ತರಿಸಬೇಕು ಎಂದು ಆಗ್ರಹಿಸಲಾಯಿತು. ರೈತರ ಜಮೀನುಗಳಿಗೆ ತೆರಳುವ ರಸ್ತೆ ಅಭಿವೃದ್ಧಿ, ಕೆರೆ, ಬಾವಿಗಳನ್ನು ರಕ್ಷಿಸಿ ಅಭಿವೃದ್ಧಿಗೊಳಿಸುವುದು, ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸುವ ಘಟಕ ಸ್ಥಾಪಿಸುವುದು ಮತ್ತಿತರ ಬೇಡಿಕೆ ಈಡೇರಿಕೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ರೈತ ಮೋರ್ಚಾ ಅಧ್ಯಕ್ಷ ಯಲ್ಲಪ್ಪ ಅರವಳದ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳು : ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರಾಗಿ ಅಜ್ಜಪ್ಪ ಹೊರಕೇರಿ, ಕಾರ್ಯದರ್ಶಿಯಾಗಿ ಶಶಿಮೌಳಿ ಕುಲಕರ್ಣಿ, ಸಂಘಟನಾ ಕಾರ್ಯದರ್ಶಿಯಾಗಿ ಅಶೋಕ ನವಲಗುಂದ, ಕಾರ್ಯಕಾರಿಣಿ ಸದಸ್ಯರಾಗಿ ಯಲ್ಲಪ್ಪ ಮಾಗಣ್ಣವರ, ಮಹಾಬಳೇಶ್ವರ ಶೀಲವಂತ, ಮಂಜುನಾಥ ಇಂಗಳಗಿ, ಸುಭಾಷ ಇಂಗನಳ್ಳಿ ಆಯ್ಕೆಯಾಗಿದ್ದಾರೆಂದು ಮೋರ್ಚಾ ಅಧ್ಯಕ್ಷ ಯಲ್ಲಪ್ಪ ಅರವಳದ ತಿಳಿಸಿದ್ದಾರೆ.
ಮಾರ್ಪಡಿಸಿದ ಕೃಷಿ ವಿಮಾ ಯೋಜನೆ ಮಂಜೂರು
ಧಾರವಾಡ: ಪ್ರಸಕ್ತ ಮುಂಗಾರಿನಲ್ಲಿ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ರಾಜ್ಯ ಸರ್ಕಾರ ಜಿಲ್ಲೆ 5 ತಾಲೂಕಿನ 14 ಹೋಬಳಿಗಳಲ್ಲಿ ಜಾರಿಗೊಳಿಸಲು ಮಂಜೂರಾತಿ ನೀಡಿದೆ. ಯೋಜನೆ ವ್ಯಾಪ್ತಿಗೆ ಒಳಪಟ್ಟ ಹೋಬಳಿ ಮಟ್ಟದ ಬೆಳೆಗಳಾದ ಮುಸುಕಿನಜೋಳ (ನೀರಾವರಿ), ಮುಸುಕಿನಜೋಳ, ಜೋಳ, ತೊಗರಿ, ಹೆಸರು, ಉದ್ದು, ಸೋಯಾಅವರೆ (ಮಳೆ ಆಶ್ರಿತ), ಶೇಂಗಾ, ಬತ್ತ (ನೀರಾವರಿ), ಬತ್ತ, ಮತ್ತು ಸಾವೆ (ಮಳೆ ಆಶ್ರಿತ). ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಧಾರವಾಡ, ಕಲಘಟಗಿ ತಾಲೂಕುಗಳಿಗೆ: ಬತ್ತ (ಮಳೆ ಆಶ್ರಿತ) ಹುಬ್ಬಳ್ಳಿ ಮತ್ತು ಕುಂದಗೋಳ ತಾಲೂಕು: ಶೇಂಗಾ (ಮಳೆ ಆಶ್ರಿತ) ನವಲಗುಂದ: ಮುಸುಕಿನಜೋಳ (ನೀರಾವರಿ). ಈ ಯೋಜನೆ ಅಧಿಸೂಚಿತ ಬೆಳೆ, ಹೋಬಳಿಗಳಲ್ಲಿ ಬೆಳೆ ಸಾಲ ಪಡೆಯುವ ರೈತರಿಗೆ ಕಡ್ಡಾಯ. ಬೆಳೆಸಾಲ ಪಡೆಯದವರಿಗೆ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಐಚ್ಛಿಕ. ಈ ರೈತರು ಹವಾಮಾನ ಆಧಾರಿತ ಬೆಳೆ ವಿಮಾ ಅಥವಾ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಗಳಲ್ಲಿ ಒಂದನ್ನು ಆರಿಸಿಕೊಳ್ಳಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

