ಧಾರವಾಡ

ಪರಿಸರ ಉಳಿವು ನಮ್ಮೆಲ್ಲರ ಉಳಿವು

Published On :

ಕನ್ನಡಪ್ರಭ ವಾರ್ತೆ, ಕಲಘಟಗಿ, ಜೂ. 11
ತಾಲೂಕಿನ ಮಡಕಿಹೊನ್ನಳ್ಳಿ ಪ್ರಾಥಮಿಕ ಶಾಲೆಯಲ್ಲಿ ಬಿಡಿಎಸ್ಸೆಸ್ ಸ್ವಯಂ ಸೇವಾ ಸಂಸ್ಥೆ, ಶಿಕ್ಷಣ ಫೌಂಡೇಶನ್, ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ವನಮಹೋತ್ಸವ ಹಾಗೂ ಪರಿಸರ ಜಾಗೃತಿ ಆಂದೋಲನ ನಡೆಯಿತು.
ತಾಪಂ ಅಧ್ಯಕ್ಷ ಎಂ.ಎಫ್. ಜಾವೂರ ಉದ್ಘಾಟಿಸಿ, ಬಾಲ್ಯದಿಂದಲೇ ಪರಿಸರ ಪ್ರೀತಿಸುವ ಗುಣ ಮಕ್ಕಳಲ್ಲಿ ಬೆಳೆಯಬೇಕಾಗಿದೆ. ಪರಿಸರ ಉಳಿವು ನಮ್ಮೆಲ್ಲರ ಉಳಿವು ಎಂಬ ಅರಿವು ಬರಬೇಕಾಗಿದೆ ಎಂದರು. ಶಾಲೆ ಮುಖ್ಯೋಪಾಧ್ಯಾಯ ವೈ.ಜಿ ಭಗವತಿ ಮಾತನಾಡಿ, ಪರಿಸರ ನಾಶದಿಂದ ಅನೇಕ ಜೀವ ಸಂಕುಲ ನಶಿಸುತ್ತಿದ್ದು, ಇದರ ಜಾಗೃತಿಗಾಗಿ ಆಂದೋಲನ ಸಂಘಟಿಸಲಾಗಿದೆ ಎಂದು ಹೇಳಿದರು.
ಸಂಯೋಜಕ ಕೆ.ಬಿ. ಕಟ್ಟಿಮನಿ, ಸಾಮಾಜಿಕ ಉಪವಲಯ ಅರಣ್ಯಾಧಿಕಾರಿ ಆರ್.ಜೆ. ಕಡೆಮನಿ, ಶಿಕ್ಷಣ ಫೌಂಡೇಶನ್ ಸಂಯೋಜಕ ಕಾಶೀನಾಥ ನಾಟೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮದ ಬೀದಿಗಳಲ್ಲಿ ಮಕ್ಕಳಿಂದ ಜಾಗೃತಿ ಆಂದೋಲನ ಜರುಗಿತು. ಅನಂತರ ಗ್ರಾಮದ ಮೂಕ ಬಸವೇಶ್ವರ ದೇವಸ್ಥಾನದ ಎದುರು ಪರಿಸರ ಮಿತ್ರ ತಂಡದ ಮಕ್ಕಳಾದ ಮಹೇಶ ಜಾವೂರ, ಸ್ನೇಹಾ ಪಾಟೀಲ ತಂಡದಿಂದ 'ಮರದಿಂದ ಮಳೆ, ಮಳೆಯಿಂದ ಬೆಳೆ' ಎಂಬ ಬೀದಿ ನಾಟಕ ಪ್ರದರ್ಶನಗೊಂಡಿತು. ಅಧ್ಯಕ್ಷತೆಯನ್ನು ರುದ್ರಯ್ಯ ಹಿರೇಮಠ ವಹಿಸಿದ್ದರು. ಬಿ.ಎಸ್. ಪಾಟೀಲ, ನಾರಾಯಣ ಗರಗ, ವಿದ್ಯಾ ಮೇಟಿ, ಬಸವರಾಜ ಇಂದೂರ, ಶಿವಾನಂದ ಹರಳಯ್ಯ, ಶೋಭಾ ಹಿರೇಮಠ, ಶಾಂತವ್ವಾ ದೊಡ್ಡಮನಿ, ಎಂ.ಇ. ಅಜಗರ್ಣಿ, ಎಚ್.ಎಚ್. ಭಜಂತ್ರಿ, ಪಿ.ಬಿ. ಮಿರ್ಜಿ, ಎ.ಎಂ. ಹತ್ತಿ ಇದ್ದರು. ಎಂ.ಜೆ. ಕಮ್ಮಾರ ಸ್ವಾಗತಿಸಿದರು. ಎಸ್.ಕೆ. ಕುಮಟಾಕರ ನಿರೂಪಿಸಿದರು. ಕಲ್ಮೇಶ ಇನಾಮತಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.