ಧಾರವಾಡ

ಸತ್ತವ ಬಂದು ಸಹಿ ಮಾಡಿದ!

Published On :

ಕನ್ನಡಪ್ರಭ ವಾರ್ತೆ, ಕಲಘಟಗಿ, ಜು. 29
ಆರು ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಯೊಬ್ಬ ಇಲ್ಲಿನ ಉಪನೋಂದನಾಧಿಕಾರಿಗಳ ಕಚೇರಿಗೆ ಮೂರು ವರ್ಷಗಳ ಹಿಂದೆ ಬಂದು ಜಮೀನೊಂದರ ಖರೀದಿ ಕಾಗದಪತ್ರಗಳಿಗೆ ಸಹಿ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ!
ತಾಲೂಕಿನ ದೇವರಲಿಂಗೇಕೊಪ್ಪ ಗ್ರಾಮದ ರೈತ ಮಾದೇಗೌಡ ಚಂದ್ರಗೌಡ ಪಾಟೀಲ 2008ರಲ್ಲಿ ನಿಧನರಾಗಿದ್ದು, 2011ರ ನವೆಂಬರ್ 20ರಂದು ದೇವರಲಿಂಗೇಕೊಪ್ಪ ಗ್ರಾಮದ ರಿ.ಸ.ನಂ. 61ರ 1.17 ಎಕರೆ ಜಮೀನು ಖರೀದಿಗಾಗಿ ತನ್ನ ಭಾವಚಿತ್ರ ಹಾಗೂ ಹೆಬ್ಬೆರಳಿನ ಗುರುತು ನೀಡಿದ್ದು ಚರ್ಚೆಗೆ ಕಾರಣವಾಗಿದೆ.
ಮೃತರು ಭಾವಚಿತ್ರ ಹಾಗೂ ಹೆಬ್ಬೆರಳಿನ ಗುರುತು ನೀಡಲು ಸಾಧ್ಯವಿಲ್ಲ. ನಕಲಿ ಸಹಿ ಮಾಡಿಸಿ, ಕಾಗದಪತ್ರ ಸಿದ್ಧಪಡಿಸಲಾಗಿದೆ ಎನ್ನುವುದು ಹಿರೇಹೊನ್ನಳ್ಳಿ ಗ್ರಾಮದ ಬಸಮ್ಮ ಬಸರಿಕೊಪ್ಪ ಅವರ ಆರೋಪ. ಈ ಕುರಿತು ತನಿಖೆ ಮಾಡಬೇಕೆಂದು ಧಾರವಾಡ ಜಿಲ್ಲಾಧಿಕಾರಿಗೆ, ಲೋಕಾಯುಕ್ತರಿಗೆ ಪೂರ್ಣ ದಾಖಲೆಗಳನ್ನು ನೀಡಿದ್ದಾಗಿ ಬಸಮ್ಮ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಮಾದೇಗೌಡನ ಪತ್ನಿಯೂ ಹಲವು ವರ್ಷಗಳ ಹಿಂದೆಯೇ ನಿಧನರಾಗಿದ್ದಾರೆ. ಸಂಬಂಧಿಯಾದ ನಾನು ಇವರ ಪುತ್ರಿ ಶ್ರುತಿಯನ್ನು 10 ವರ್ಷಗಳಿಂದಲೂ ನನ್ನ ಮಕ್ಕಳಂತೆ ಸಾಕುತ್ತಿದ್ದೇನೆ. ಇತ್ತೀಚೆಗೆ ಸರ್ಕಾರಿ ಇಲಾಖೆಗಳಲ್ಲಿ ದಾಖಲೆಗಳನ್ನು ಪಡೆಯುವ ವೇಳೆ ಈ ಆಕ್ರಮ ದಾಖಲೆಗಳು ಬೆಳಕಿಗೆ ಬಂದಿವೆ. ಮಾದೇವಗೌಡನ ಅಂಗವಿಕಲ ಮಗಳ ವಾರಸುದಾರರಿಗೆ ಆಸ್ತಿ ಹೋಗಬಾರದೆಂದು ಈ ರೀತಿ ಮಾಡಿಸಿರಬೇಕೆಂದು ಬಸಮ್ಮ ಸಂಶಯ ವ್ಯಕ್ತಪಡಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ದೂರು ನೀಡಿದ್ದಾಗಿ ಬಸಮ್ಮ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.