ಟಾಸ್ಕ್ಫೋರ್ಸ್ ಪರಿಷ್ಕರಣೆ
ಹುಬ್ಬಳ್ಳಿ: ಅವಳಿ ನಗರದಲ್ಲಿ ಪ್ರಕೃತಿ ವಿಕೋಪದಿಂದಾಗುವ ಅನಾಹುತಗಳಿಗೆ ತುರ್ತು ಪರಿಹಾರ ಹಾಗೂ ಕೆಲಸ ನಿರ್ವಹಿಸಲು ಪಾಲಿಕೆಯಿಂದ ನೂತನ ಟಾಸ್ಕ್ಪೋರ್ಸ್ ಸಮಿತಿ ಸಕ್ರಿಯಗೊಳಿಸಲಾಯಿತು.
ಪಾಲಿಕೆಯ ಆಯುಕ್ತ ರಮಣದೀಪ ಚೌಧರಿ ಶುಕ್ರವಾರ ಸಮಿತಿಗೆ ಸೂಕ್ತ ಸಲಹೆ ಸೂಚನೆ ನೀಡಿದರಲ್ಲದೇ, ತುರ್ತು ಕಾಮಗಾರಿಗಳಲ್ಲಿ ಉಪಯೋಗಿಸುವ ಉಪಕರಣಗಳನ್ನು ಪರಿಶೀಲಿಸಿದರು. ಪ್ರಸ್ತುತ ಅವಳಿ ನಗರದಲ್ಲಿ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳಲ್ಲಿ ಹಾಗೂ ಇತರ ಪ್ರದೇಶಗಳಲ್ಲಿ ಅನಾಹುತಗಳು ಸಂಭವಿಸಿವೆ. ಪೂರ್ವಭಾವಿಯಾಗಿ ಇಂತಹ ಘಟನೆಗಳಿಗೆ ಪಾಲಿಕೆಯಿಂದ ತುರ್ತು ಕೆಲಸ್ನ ತೆಗೆದುಕೊಳ್ಳಲು ಅನುಕೂಲವಾಗುವಂತೆ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದ ತುರ್ತು ಕಾರ್ಯಪಡೆಯನ್ನ್ನು ಪರಿಷ್ಕರಿಸಲಾಗಿದೆ. ಪಡೆಯು ಪ್ರತಿನಿತ್ಯ ಮಧ್ಯಾಹ್ನ 2ರಿಂದ ರಾತ್ರಿ 10 ಗಂಟೆ ವರೆಗೆ ಹಾಗೂ ರಾತ್ರಿ 10 ಗಂಟೆಯಿಂದ ಮುಂಜಾನೆ 6 ಗಂಟೆ ವರೆಗೆ ಎರಡು ಪಾಳಿಯಲ್ಲಿ ಕೆಲಸ ನಿರ್ವಹಿಸಲಿದೆ.
ಪರಿಷ್ಕೃತ ತುರ್ತು ಕಾರ್ಯಪಡೆಯಲ್ಲಿ ವಲಯ ಕಚೇರಿ ಸಹಾಯಕ ಆಯುಕ್ತರು, ಕಿರಿಯ ಅಭಿಯಂತರು ಹಾಗೂ ಕನಿಷ್ಠ 10 ಕಾರ್ಮಿಕರನ್ನ್ನು ಒದಗಿಸಿ, ಕಾರ್ಯಪಡೆಗೆ ಆವಶ್ಯಕ ಉಪಕರಣಗಳಾದ ಸೇಪ್ಟಿ ಬೆಲ್ಟ್, ರೋಪ್, ಟಾರ್ಚ್, ಟ್ರ್ಯಾಕ್ಟರ್, ಕಾಂಕ್ರೀಟ್ ಕಟರ್, ವಿಶೇಷ ಸರ್ಚ್ ಲೈಟ್, ಸ್ಟ್ರಚರ್, ಮೇಘಾ ಫೋನ್ ಹಾಗೂ ಹೊದಿಕೆಗಳನ್ನು ಪೂರೈಸಲಾಗಿದೆ. ತುರ್ತು ಕಾರ್ಯಪಡೆಯು ಸಾರ್ವಜನಿಕ ದೂರುಗಳನ್ನ್ನು ಆಧರಿಸಿ ವಿಶೇಷ ಕಾರ್ಯಸೂಚಿಯೊಂದಿಗೆ ತಂಡದ ಮುಖ್ಯಸ್ಥರ ನಿರ್ದೇಶನದಲ್ಲಿ ಕೂಡಲೇ ಕಾರ್ಯಪ್ರವೃತ್ತ ಆಗಲಿದೆ. ವಿಶೇಷ ಕಾರ್ಯಪಡೆಯ ಮೊದಲನೇ ತಂಡವು ದಿನದ ಮಧ್ಯಾಹ್ನ 2ರಿಂದ ರಾತ್ರಿ 10 ಗಂಟೆಯ ಅವಧಿಗೆ ಮೊದಲನೇ ಪಾಳಿ ಹಾಗೂ 2ನೇ ತಂಡವು ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯ ಅವಧಿಯ ವರೆಗೆ ಕೆಲಸ ನಿರ್ವಹಿಸುವದು. ಹುಬ್ಬಳ್ಳಿ ಹಾಗೂ ಧಾರವಾಡ ಕೇಂದ್ರ ಕಚೇರಿಯಲ್ಲಿ ಈ ತಂಡವು ಲಭ್ಯವಿದ್ದು, ಪ್ರಸ್ತುತ ಮಳೆಯಿಂದ ಸಂಭವಿಸಬಹುದಾದ ಆಕಸ್ಮಿಕ ಘಟನೆಗಳಿಗೆ ಸಾರ್ವಜನಿಕರಿಂದ ಸ್ವೀಕರಿಸುವ ದೂರುಗಳನ್ನ್ನು ಆಧರಿಸಿ ಕಾರ್ಯಾಚರಣೆ ಕೈಕೊಳ್ಳುವುದು. ತಂಡದಲ್ಲಿ ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಒಳಗೊಂಡಿದ್ದು ಪ್ರಕೃತಿ ವಿಕೋಪದಿಂದ ಗಿಡಗಳು ಬಿದ್ದಲ್ಲಿ ಕೂಡಲೇ ಯಂತ್ರೋಪಕರಣಗಳ ಸಹಾಯದಿಂದ ತೆರವುಗೊಳಿಸಲಾಗುವುದು. ಪ್ರತಿ ತುರ್ತು ತಂಡದ ಜೊತೆಗೆ ಆರೋಗ್ಯ ಮೇಲ್ವಿಚಾರಣೆ ಸಿಬ್ಬಂದಿ, ವಲಯ ಕಚೇರಿಯ ತಾಂತ್ರಿಕ ಸಿಬ್ಬಂದಿ ಮತ್ತು ಪರಿಸರ ಅಭಿಯಂತರು ಒಳಗೊಂಡಿರುವರು. ಹುಬ್ಬಳ್ಳಿ ವಿಭಾಗದ ಕಾರ್ಯಾಚರಣೆಗೆ ಪಾಲಿಕೆಯ ಅಧೀಕ್ಷಕ ಅಭಿಯಂತ ಪ್ರಕಾಶ ಲಕ್ಷ್ಮಣ ಗರಗ ಮತ್ತು ಧಾರವಾಡ ವಿಭಾಗದ ತುರ್ತು ಕಾರ್ಯಗಳಿಗೆ ಜಂಟಿ ಆಯುಕ್ತ ಶಕಿಲ್ ಅಹ್ಮದ್ ಅವರನ್ನ್ನು ಉಸ್ತುವಾರಿ ಅಧಿಕಾರಿಗಳನ್ನ್ನಾಗಿ ನಿಯೋಜಿಸಲಾಗಿದೆ. ಪ್ರಸ್ತುತ ಅವಳಿನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ಸಂಭವಿಸುವ ಅನಾಹುತಗಳಿಗೆ ಪಾಲಿಕೆಯ ಸಹಾಯಕ್ಕಾಗಿ ಪಾಲಿಕೆಯಲ್ಲಿ 24 ತಾಸು ಕೆಲಸ ನಿರ್ವಹಿಸುತ್ತಿರುವ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 2213888, 2213869ಕ್ಕೆ ಮಾಡಿ ದೂರು ದಾಖಲಿಸಬಹುದು. ವಲಯ ಕಚೇರಿ ವ್ಯಾಪ್ತಿಯಲ್ಲಿ ರಚಿಸಿದ ಕಾರ್ಯತಂಡಕ್ಕೆ ವಲಯ ಕಚೇರಿಯ ಸಹಾಯಕ ಆಯುಕ್ತರನ್ನ್ನು ತಂಡದ ಮುಖ್ಯಸ್ಥರನ್ನಾಗಿ ನಿಯೋಜಿಸಿದ್ದು ಅವರಿಂದಲೂ ಸಹಾಯ್ನ ಪಡೆಯಬಹುದಾಗಿದೆ.
ಹೀಗಿದೆ ಟಾಸ್ಕ್ಪೋರ್ಸ್...
ಟ ಪ್ರಕಾಶ ಗರಗ, ಹುಬ್ಬಳ್ಳಿ ವಿಭಾಗದಲ್ಲಿ ಬರುವ ಎಲ್ಲ ವಲಯ ಕಚೇರಿ ವ್ಯಾಪ್ತಿ. (04, 05, 06, 07, 08, 09, 10 ಹಾಗೂ 11ನೇ ವಾರ್ಡ್). ಮೊಬೈಲ್ ನಂ. 9448021496.
ಡಿ.ಡಿ. ಮಾದರ, ವಲಯ ಕಚೇರಿ 4ರ ವ್ಯಾಪ್ತಿಯಲ್ಲಿ ಬರುವ ವಾರ್ಡ್ಗಳು 23, 24 ಹಾಗೂ 25. ಮೊಬೈಲ್ ನಂ. 9482248362.
ಆರ್.ಎಚ್. ಕುಲಕರ್ಣಿ, ವಲಯ ಕಚೇರಿ 5ರ ವ್ಯಾಪ್ತಿಯಲ್ಲಿ ಬರುವ ವಾರ್ಡ್ಗಳು 26, 27, 28, 34, 35 ಹಾಗೂ 46. ಮೊ. ನಂ. 9448367388.
ವಿ.ಎಂ. ಹಿರೇಮಠ, ವಲಯ ಕಚೇರಿ 6ರ ವ್ಯಾಪ್ತಿಯಲ್ಲಿ ಬರುವ ವಾರ್ಡ್ಗಳು 29, 30, 31, 32, 33, 48 ಹಾಗೂ 49. ಮೊ. 9844140005.
ಪಿ.ಡಿ. ಗಾಳೆಮ್ಮನವರ, ವಲಯ ಕಚೇರಿ 7ರ ವ್ಯಾಪ್ತಿಯಲ್ಲಿ ಬರುವ ವಾರ್ಡ್ಗಳು 36, 37, 38, 39 ಹಾಗೂ 40. ಮೊ. ಸಂ. 9448267664.
ಎಸ್.ಎನ್. ಗಣಾಚಾರಿ, ವಲಯ ಕಚೇರಿ 8ರ ವ್ಯಾಪ್ತಿಯಲ್ಲಿ ಬರುವ ವಾರ್ಡ್ಗಳು 47, 50, 51, 52 ಹಾಗೂ 56. ಮೊ. ಸಂ. 9448783522.
ಎಂ.ಎಂ. ಚವ್ಹಾಣ, ವಲಯ ಕಚೇರಿ 9ರ ವ್ಯಾಪ್ತಿಯಲ್ಲಿ ಬರುವ ವಾರ್ಡ್ಗಳು 44, 45, 53 ಹಾಗೂ 54. ಮೊ. ಸಂ. 9632319215.
ಎಂ.ಎಂ. ನದಾಫ, ವಲಯ ಕಚೇರಿ 10ರ ವ್ಯಾಪ್ತಿಯಲ್ಲಿ ಬರುವ ವಾರ್ಡ್ಗಳು 41, 42, 43, 60, 61, 62, 63, 64 ಹಾಗೂ 65. ಮೊ.ಸಂ. 9341487801.
ಬಿ.ಸಣ್ಣ ಪರಶುರಾಮ, ವಲಯ ಕಚೇರಿ 11ರ ವ್ಯಾಪ್ತಿಯಲ್ಲಿ ಬರುವ ವಾರ್ಡ್ಗಳು 57, 55, 58, 59, 66 ಹಾಗೂ 67. ಮೊ.ಸಂ. 9740953200.
ಶಕಿಲ್ ಅಹ್ಮದ ಜಂಟಿ ಆಯುಕ್ತರು ಉಸ್ತುವಾರಿ ಅಧಿಕಾರಿ ಧಾರವಾಡ ವಿಭಾಗದಲ್ಲಿ ಬರುವ ಎಲ್ಲ ವಲಯ ಕಚೇರಿ ವ್ಯಾಪ್ತಿ 01, 02, 03 ಹಾಗೂ 12ನೇ ವಾರ್ಡ್. ಮೊ.ಸಂ. 9886726874.
ಪಿ.ಬಿ. ಗುಡಿಯವರ, ವಲಯ ಕಚೇರಿ 1ರ ವ್ಯಾಪ್ತಿಯಲ್ಲಿ ಬರುವ ವಾರ್ಡ್ಗಳು 1, 2, 13, 14 ಹಾಗೂ 17. ಮೊ.ಸಂ. 9880858993.
ಸಿ.ಎಂ. ಬಂಡಿ, ವಲಯ ಕಚೇರಿ 2 ರ ವ್ಯಾಪ್ತಿಯಲ್ಲಿ ಬರುವ ವಾರ್ಡ್ಗಳು 6, 7, 8, 9, 10 ಹಾಗೂ 11. ಮೊ. ಸಂ. 9482930346.
ಆರ್.ಎಲ್. ಪೂಜಾರ. ವಲಯ ಕಚೇರಿ 3ರ ವ್ಯಾಪ್ತಿಯಲ್ಲಿ ಬರುವ ವಾರ್ಡ್ಗಳು 3, 4, 5, 12 ಹಾಗೂ 15. ಮೊ.ಸಂ. 9632612334
ಆರ್.ಎ. ಶೆಟ್ಟರ್, ವಲಯ ಕಚೇರಿ 3 ರ ವ್ಯಾಪ್ತಿಯಲ್ಲಿ ಬರುವ ವಾರ್ಡ್ಗಳು 16, 18, 19, 20, 21 ಹಾಗೂ 22. ಮೊ.ಸಂ. 9449973216.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

