ಧಾರವಾಡ

ನಾಳೆಯಿಂದ ಯೋಗ ಸ್ಪರ್ಶ

Published On :

ಹುಬ್ಬಳ್ಳಿ:  ಪತಂಜಲಿ ಯೋಗ ಶಿಕ್ಷಣ ಸಮಿತಿ ಹುಬ್ಬಳ್ಳಿ ಶಾಖೆ ವತಿಯಿಂದ ನಗರದಲ್ಲಿ 'ಯೋಗ ಸ್ಪರ್ಶ- 2014' ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟನಾ ಕಾರ್ಯದರ್ಶಿ ಪ್ರಸನ್ ದೀಕ್ಷಿತ ಹೇಳಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. 23ರಂದು ಶ್ರೀ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಮೊದಲ ಶಿಬಿರ ಮುಂಜಾನೆ 11 ಗಂಟೆಗೆ ಪ್ರಾರಂಭವಾಗುತ್ತದೆ. ಉಳಿದ ಶಿಬಿರಗಳು 24ರಂದು  ಮುಂಜಾನೆ 11 ಗಂಟೆಗೆ ಪ್ರಾರಂಭವಾಗುತ್ತವೆ. ನೆಹರು ಮೈದಾನದಲ್ಲಿ 25ರಂದು ಸಂಜೆ ಲಲಿತಾ ಸಹಸ್ರನಾಮ ಪೂಜೆ, 26ರಂದು ಸಂಜೆ ಆರೋಗ್ಯದೆಡೆಗೆ ಯೋಗ ನಡಿಗೆ ವಿಶೇಷ ಕಾರ್ಯಕ್ರಮ ಜರುಗಲಿದೆ. 25ರಂದು ಮುಂಜಾನೆ 10 ಗಂಟೆಗೆ ಜೈನ್ ಬೋರ್ಡಿಂಗ್‌ನಲ್ಲಿ ಯೋಗ ಕೇಂದ್ರ ನಡೆಸುವ ಶಿಕ್ಷಕರ ಸಮಾವೇಶ ಏರ್ಪಡಿಸಲಾಗಿದೆ ಎಂದರು. ಎರಡು ಸಾವಿರ ಶಿಬಿರಾರ್ಥಿಗಳು ಹಾಗೂ 300 ಯೋಗ ಶಿಕ್ಷಕರು ಭಾಗವಹಿಸಲಿದ್ದಾರೆ. 500 ಕಾರ್ಯಕರ್ತರು ಸೇವೆ ಮಾಡಲಿದ್ದಾರೆ. 24 ಸತ್ಸಂಗಗಳನ್ನ್ನು 7 ಸ್ಥಳಗಳಲ್ಲಿ ಏರ್ಪಡಿಸಲಾಗಿದೆ. ಮಠಾಧೀಶರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಯೋಗ ಸ್ಪರ್ಶದಂತಹ ಕಾರ್ಯಕ್ರಮಗಳ ಮೂಲಕ ಸಂಸ್ಕೃತಿ, ಸಂಸ್ಕಾರ, ಸಂಘಟನೆ ಸೇವಾ ಗುಣಗಳನ್ನ್ನು ಸಮಾಜದಲ್ಲಿ ಬೆಳೆಸುವ ಕಾರ್ಯ ನಡೆಯುತ್ತದೆ. ಯೋಗದ ನಿಜವಾದ ಮಹತ್ವ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ಮಹೇಂದ್ರ ಠಕ್ಕರ, ಸುರೇಶ ಡಿ. ಹೊರಕೇರಿ, ದಯಾನಂದ ಮಗಜಿಕೊಂಡಿ, ಜಸವೀರಸಿಂಗ ಕೌಂಸಲ, ನಾರಾಯಣ ಪ್ರಸಾದ ಪಾಠಕ, ಪ್ರಕಾಶ ಲಿಂಬಿಕಾಯಿ ಇದ್ದರು.
ರಾಜ್ಯದ ಹಿತಕ್ಕೆ ದನಿ ಎತ್ತುವೆ
ಹುಬ್ಬಳ್ಳಿ:  ವಿಧಾನಪರಿಷತ್‌ನಲ್ಲಿ ಜೆಡಿಎಸ್ ನಾಯಕರಾಗಿ ಆಯ್ಕೆಯಾದ ಬಸವರಾಜ ಹೊರಟ್ಟಿ ಅವರನ್ನು ಪಕ್ಷದ ಕಾರ್ಯಕರ್ತರು ಹುಬ್ಬಳ್ಳಿ ನಗರದ ಮಿನಿವಿಧಾನಸೌಧದಲ್ಲಿ ಭಾನುವಾರ ಸನ್ಮಾನಿಸಿದರು. ಬಳಿಕ ಮಾತನಾಡಿದ ಹೊರಟ್ಟಿ, ಜೆಡಿಎಸ್ ತಮ್ಮನ್ನು ಗುರುತಿಸಿ ಈ ಸ್ಥಾನಮಾನ ನೀಡಿದ್ದಕ್ಕೆ ಸಂತಸವಾಗಿದೆ. ಇಂದಿನ ದಿನಮಾನದಲ್ಲಿ ರಾಜಕೀಯ ವ್ಯವಸ್ಥೆ ಕುಲಗೆಟ್ಟಿದೆ. ಹಣಗಳಿಸುವ ಉದ್ದೇಶದಿಂದ ರಾಜಕೀಯಕ್ಕೆ ಬರುವವರು ಹೆಚ್ಚಾಗಿದ್ದಾರೆ. ಪ್ರಾಮಾಣಿಕವಾಗಿ ಜನಸೇವೆ ಮಾಡಬೇಕೆಂಬ ಉದ್ದೇಶದಿಂದ ರಾಜಕೀಯ ಕ್ಷೇತ್ರವನ್ನು ಆಯ್ದುಕೊಳ್ಳುವವರು ಬೆರಳೆಣಿಕೆಯಷ್ಟು ಮಂದಿ ಎಂದರು. ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರಯತ್ನ ಮಾಡಬೇಕು. ಪಕ್ಷ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ, ರಾಜ್ಯದ ಹಿತದೃಷ್ಟಿಯಿಂದ ಸದನದಲ್ಲಿ ದನಿ ಎತ್ತುವುದಾಗಿ ಹೇಳಿದರು. ರಾಜಣ್ಣ ಕೊರವಿ, ಅಲ್ತಾಫ್ ಕಿತ್ತೂರ, ಫೇಮಿದಾ ಕಿಲ್ಲೇದಾರ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಕಿರಣ ಹಿರೇಮಠ, ಶ್ರೀಕಾಂತ ಮಗಜಿಕೊಂಡಿ ಮತ್ತಿತರರಿದ್ದರು.
ಜೀವ ಬೆದರಿಕೆ: ದೂರು
ಧಾರವಾಡ: ಒಡಹುಟ್ಟಿದ ಅಣ್ಣನು ತನ್ನ ತಮ್ಮನಿಗೆ ಚಾಕುವಿನಿಂದ ಇರಿದು ಜೀವ ಬೆದರಿಕೆ ಹಾಕಿದ ಘಟನೆ ಇಲ್ಲಿನ ಆಝಾದ ನಗರದಲ್ಲಿ ನಡೆದಿದೆ. ತಮ್ಮ ಹರೀಶಸಿಂಗ್ ಕಿಲ್ಲೇದಾರ ಎಂಬಾತನ ಮೇಲೆ ಆತನ ಅಣ್ಣ ಆನಂದಸಿಂಗ್ ಕಿಲ್ಲೇದಾರ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ. ಜೀವ ಬೆದರಿಕೆ ಹಾಕಿದ್ದಾನೆ ಎಂದು ತಮ್ಮ ಹರೀಶಸಿಂಗ್ ಕಿಲ್ಲೇದಾರ ಭಾನುವಾರ ಶಹರ ಠಾಣೆಗೆ ದೂರು ನೀಡಿದ್ದಾನೆ. ಹಳೇ ವೈಷಮ್ಯದಿಂದ ಆನಂದಸಿಂಗ್ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಶಹರ ಠಾಣಾ ಇನ್ಸ್‌ಪೆಕ್ಟರ್ ಬಸವೇಶ್ವರ ಹೀರಾ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.