4ರಂದು ಸಂಗೀತ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಧಾರವಾಡ, ಆ. 1
ಮೆಲೋಡಿ ಕಿಂಗ್ ಕಿಶೋರ ಕುಮಾರ ಅವರ 85ನೇ ಹುಟ್ಟುಹಬ್ಬ ಹಾಗೂ ಗುರುಪಾದಪ್ಪ ಕುರಡಿಕೇರಿ ಸ್ಮರಣಾರ್ಥ ಆ. 4ರಂದು ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ 'ರಿಮ್ ಜಿಮ್ ಗಿರ ಸಾವನ್' ಹೆಸರಿನ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಆಯೋಜಕ ಸದಾನಂದ ಕುಡಿಕೇರಿ, ತಂದೆ ಗುರುಪಾದಪ್ಪ ಅವರು ಕ್ಯಾನ್ಸರ್ ರೋಗದಿಂದ ತೀರಿ ಹೋದರು. ಈ ಹಿನ್ನೆಲೆಯಲ್ಲಿ 2002ನೇ ಇಸ್ವಿಯಿಂದ ಕಿಶೋರ ಕುಮಾರ ಹಾಡುಗಳ ಸಂಗೀತ ಕಾರ್ಯಕ್ರಮವನ್ನು ತಂದೆಯ ಸ್ಮರಣಾರ್ಥ ಹಮ್ಮಿಕೊಳ್ಳುತ್ತಿದ್ದೇನೆ. ಎಂತಹ ದುಃಖ ಮರೆಯುವ ಶಕ್ತಿ ಕಿಶೋರ ಕುಮಾರ ಅವರ ಹಾಡುಗಳಿಗಿದೆ ಎಂದರು. ಸಮಾರಂಭದಲ್ಲಿ ಕಿಶೋರ ಕುಮಾರ ಅವರ ಹಾಡುಗಳನ್ನು ಪ್ರಸ್ತುತಪಡಿಸುವ ಮೂಲಕ ಪ್ರೇಕ್ಷಕರಿಂದ ಸಂಗ್ರಹವಾದ ಹಣವನ್ನು ಕ್ಯಾನ್ಸರ್ಪೀಡಿತ ಇಬ್ಬರು ಮಕ್ಕಳಿಗೆ ಸ್ಥಳದಲ್ಲಿಯೇ ಧನಸಹಾಯ ಮಾಡುವುದು ಸಮಾರಂಭದ ಪರಿಪಾಟ ಎಂದು ಕುರಡಿಕೇರಿ ಹೇಳಿದರು.
ಆ. 4ರ ಮಧ್ಯಾಹ್ನ 3ರಿಂದ ರಕ್ತದಾನ ಶಿಬಿರ ಇರುತ್ತದೆ. ಸಂಜೆ 5.30ಕ್ಕೆ ಸಮಾರಂಭ ನಡೆಯಲಿದ್ದು, ಶಾಸಕ ಅರವಿಂದ ಬೆಲ್ಲದ ಹಾಗೂ ಮೇಯರ್ ಶಿವು ಹಿರೇಮಠ ಭಾಗವಹಿಸುತ್ತಿದ್ದಾರೆ. ಡಿಎಆರ್ ವಿಭಾಗದ ಡಿವೈಎಸ್ಪಿ ಎಸ್.ಐ. ಬುಯ್ಯಾರ, ಎಲ್ಐಸಿ ವಿಭಾಗೀಯ ಪ್ರಬಂಧಕ ಎಂ. ಜಗನ್ನಾಥ, ನಿವೃತ್ತ ಶಸ್ತ್ರಚಿಕಿತ್ಸಕ ಡಾ. ವಿ.ಡಿ. ಕರ್ಪೂರಮಠ, ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಕೇಂದ್ರದ ಅಧ್ಯಕ್ಷ ಎಸ್.ಆರ್. ರಾಣೋಜಿ, ಸದಸ್ಯ ನಾಗರಾಜ ತಿಗಡಿ ಹಾಗೂ ಕಾರ್ಯದರ್ಶಿ ವಿಜಯೇಂದ್ರ ಪಾಟೀಲ ಭಾಗವಹಿಸುತ್ತಾರೆ ಎಂದು ಕುರಡಿಕೇರಿ ಹೇಳಿದರು. ಹೆಚ್ಚಿನ ಮಾಹಿತಿಗೆ 87621 90514 ಸಂಪರ್ಕಿಸಬಹುದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

