ಪಾಲಿಕೆ ಮೇಲೆ ಲೋಕ ದಾಳಿ
ಹುಬ್ಬಳ್ಳಿ: ಇಲ್ಲಿನ ಉಣಕಲ್ನ ರಾಜೀವ ಗೃಹ ನಿರ್ಮಾಣ ಸಹಕಾರಿ ಸಂಘದ ಲೇ ಔಟ್ನಲ್ಲಿ ಸಾರ್ವಜನಿಕ ಉಪಯೋಗಕ್ಕೆ ಸೆಪ್ಟಿಕ್ ಟ್ಯಾಂಕ್ ನಿರ್ಮಾಣಕ್ಕೆ ಮೀಸಲಿಟ್ಟ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಖಾಸಗಿಯವರಿಗೆ ಪರವಾನಗಿ ನೀಡಿದ ಮಹಾನಗರ ಪಾಲಿಕೆ ನಗರ ಯೋಜನೆ ಉಪ ನಿರ್ದೇಶಕರ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಕಡತಗಳನ್ನು ಪರಿಶೀಲಿಸಿದರು.
ಹಿನ್ನ್ನಲೆ: ಇಲ್ಲಿನ ಉಣಕಲ್ ಗ್ರಾಮದ ಸರ್ವೆ ನಂ. 544/ಎ, 559/ಎ, 560 ರಲ್ಲಿ ರಾಜೀವ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಲೇಔಟ ನಿರ್ಮಾಣಕ್ಕೆ ಮಂಜೂರಾತಿ ದೊರಕಿತ್ತು. ಅನುಮತಿ ನೀಡುವಾಗ ಪ್ಲಾಟ್ನಂ 144, 145ರಲ್ಲಿ ಸಾರ್ವಜನಿಕ ಬಳಕೆ ಉದ್ದೇಶದ ಸೆಪ್ಟಿಕ್ ಟ್ಯಾಂಕ್ ಎಂದು ಅನುಮೋದಿಸಿ ಈ ನಿವೇಶನಗಳನ್ನ್ನು ಪಾಲಿಕೆಗೆ ನೀಡಲಾಗಿತ್ತು. ಒಳಚರಂಡಿ ಕಾಮಗಾರಿಗಳ ಬಳಿಕ ನಿವೇಶನ 144, 145ನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಗೃಹ ನಿರ್ಮಾಣದ ಸಂಘದ ಅಧ್ಯಕ್ಷರು ಮನವ್ನಿ ಸಲ್ಲಿಸಿದ್ದರು. ಹುಡಾ ನಿವೇಶಗಳನ್ನ್ನು ಗೃಹ ನಿರ್ಮಾಣ ಸಹಕಾರ ಸಂಘ ಅಧ್ಯಕ್ಷರ ಹೆಸರಿಗೆ ವರ್ಗಾಯಿಸಿತ್ತು.
ಜನ ಲೋಕಾಯುಕ್ತರಿಗೆ ಪಾಲಿಕೆ ನಗರ ಯೋಜನೆ ವಿಭಾಗದ ಹಿಂದಿನ ಉಪ ನಿರ್ದೇಶಕ ಎಲ್.ಎಸ್ ಪವಾರ, ಹಾಲಿ ಉಪನಿರ್ದೇಶಕ ಜೆ.ಕೆ. ಗಂಜಿಗಟ್ಟಿ, ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಯು.ಎ. ಸರಾಫ್, ನಗರ ಯೋಜಕ ವಿ.ಬಿ. ಡಂಬಳ, ಹಿಂದಿನ ತಹಸೀಲ್ದಾರ್ ಎಸ್.ಎಸ್. ಬಿರಾದಾರ, ಉಣಕಲ್ ಗ್ರಾಮ ಲೆಕ್ಕಾಧಿಕಾರಿ ಎಂ.ಸಿ. ಮಳ್ಳೆಪ್ಪಗೌಡ್ರ ವಿರುದ್ಧ ದೂರು ನೀಡಿದ್ದರು. ಜನರ ಬಳಕೆಗೆ ಸಂಬಂಧಿಸಿದ ಪಾಲಿಕೆಯ ಈ ನಿವೇಶನಗಳನ್ನು ಮಹಾನಗರ ಪಾಲಿಕೆ ಆಯುಕ್ತರ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯ ಅನುಮತಿ ಪಡೆಯದೆ ಗಣೇಶ ಕುಲಕರ್ಣಿ ಹಾಗೂ ರಂಜಿತಾ ಕುಲಕರ್ಣಿ ಎಂಬುವವರ ಹೆಸರಿಗೆ ವರ್ಗಾವಣೆ ಮಾಡಲಾಗಿತ್ತೆಂದು ಸಾರ್ವಜನಿಕರು ಲೋಕಾಯುಕ್ತರಿಗೆ ನೀಡಿದ್ದ ದೂರಿನಲ್ಲಿ ಆರೋಪಿಸಲಾಗಿತ್ತು.
ಈ ಕುರಿತು ಉಪ ಲೋಕಾಯುಕ್ತ ಸುಭಾಷ ಆದಿ ಈಚೆಗೆ ಹುಬ್ಬಳ್ಳಿಯಲ್ಲಿ ವಿಚಾರಣೆ ನಡೆಸಿ, ತನಿಖೆಗಾಗಿ ಲೋಕಾಯುಕ್ತ ಎಸ್ಪಿಗೆ ಸೂಚಿಸಿದ್ದರು. ಅಧಿಕಾರ್ನ ದುರುಪಯೋಗ ಪಡಿಸಿಕೊಂಡು ಕಾಯ್ದ್ನೆ ಉಲ್ಲಂಘಿಸಿ ಖಾತೆ ವರ್ಗಾವಣೆ ಮಾಡಿ ಪಾಲಿಕೆಗೆ ನಷ್ಟ ಉಂಟು ಮಾಡಿದ್ದಲ್ಲದೆ, ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಪಾಲಿಕೆ, ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಲಂಚ ನಿರೋಧ ಕಾಯ್ದೆಯಡಿ ಅಪರಾಧಿಕ ದುರ್ನಡತೆ ಕಂಡುಬಂದಿದ್ದರಿಂದ ಇವರ ವಿರುದ್ಧ ಏ.29 ರಂದು ಧಾರವಾಡ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಎಸ್ಪಿ ಪರಶುರಾಮ ಅವರು ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಲೋಕಾಯುಕ್ತ ಡಿಸಿಪಿ ಕೆ.ಸಿ. ಅಸುಂಡಿ, ಡಿವೈಎಸ್ಪಿ ಯು.ಎಸ್. ಶಿವಳ್ಳಿ ಮತ್ತಿತರ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

