ಧಾರವಾಡ

ಬಾಲಕನ ಮೇಲೆ ಹಂದಿ ದಾಳಿ

Published On :

ಧಾರವಾಡ: ನಗರದಲ್ಲಿ ಮಕ್ಕಳ ಮೇಲೆ ಹಂದಿಗಳ ದಾಳಿ ನಿರಂತರವಾಗಿ ನಡೆಯುತ್ತಿದ್ದು, ಶುಕ್ರವಾರ ಮತ್ತೊಬ್ಬ ಬಾಲಕ ಹಂದಿಗಳ ದಾಳಿಗೆ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 15 ದಿನಗಳ ಹಿಂದೆ ಇಲ್ಲಿನ ಜನ್ನತನಗರದ ಬಾಲಕನ ಮೇಲೆ ಎರಗಿದ ಹಂದಿ ಆತನ ಮರ್ಮಾಂಗವನ್ನು ಗಾಯಗೊಳಿಸಿತ್ತು. ಈ ಘಟನೆ ಜನರ ಮನದಿಂದ ಮಾಸುವ ಮುನ್ನವೇ ತೇಜಸ್ವಿನಗರದ ಐದು ವರ್ಷದ ಪುರುಷೋತ್ತಮ ಬಸವರಾಜ ಪೂಜಾರ ಎಂಬ ಬಾಲಕನ ಮೇಲೆ ಶುಕ್ರವಾರ ಮೂರು ಹಂದಿಗಳು ದಾಳಿ ನಡೆಸಿವೆ. ಶಾಲೆಯಿಂದ ಮನೆಗೆ ಮರಳಿದ ಬಾಲಕ, ಊಟ ಮುಗಿಸಿ ಸಮೀಪದ ಕಿರಾಣಿ ಅಂಗಡಿಗೆ ಹೋದ ಸಂದರ್ಭದಲ್ಲಿ ಮೂರು ಹಂದಿಗಳು ಏಕಾಏಕಿ ದಾಳಿ ನಡೆಸಿವೆ. ಮನಸ್ಸಿಗೆ ಬಂದಂತೆ ಕಚ್ಚಿವೆ. ಹಂದಿಯಿಂದ ಪಾರಾಗಲು ಬಾಲಕ ಎಷ್ಟೇ ಪ್ರಯತ್ನಿಸಿದರೂ ಕಿವಿ, ಕೈ ಹಾಗೂ ಹೊಟ್ಟೆ ಕೆಳ ಭಾಗದಲ್ಲಿ ಕಚ್ಚಿ ತೀವ್ರವಾಗಿ ಗಾಯಗೊಳಿಸಿವೆ.  ಬಾಲಕನ ಚೀರಾಟ ಕೇಳಿ ಓಡಿ ಬಂದ ಪಕ್ಕದ ಮನೆಯವರು ಹಂದಿಗಳನ್ನು ಹೊಡೆದು ಓಡಿಸಿದ್ದಾರೆ. ಗಾಯಗೊಂಡಿದ್ದ ಬಾಲಕನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಭಯಭೀತನಾಗಿದ್ದಾನೆ. ನಗರದ ವಿವಿಧೆಡೆ ಮಕ್ಕಳ ಮೇಲೆ ಹಂದಿಗಳು ಎರಗುತ್ತಿವೆ. ಕೂಡಲೇ ಈ ಕುರಿತು ಪಾಲಿಕೆ ಕ್ರಮ ತೆಗೆದುಕೊಳ್ಳಬೇಕೆಂದು ಪಾಲಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.