ಧಾರವಾಡ

ಮಹಾಶಿವರಾತ್ರಿ ನಿಮಿತ್ತ ಕಾರ್ಯಕ್ರಮ

Published On :

ಧಾರವಾಡ: ಮಹಾಶಿವರಾತ್ರಿ ಅಂಗವಾಗಿ ಇಲ್ಲಿನ ಲೈನ್‌ಬಜಾರ್‌ನ ಶ್ರೀ ರಾಮಮಂದಿರದಲ್ಲಿ ಶಿವಪರಾಣ, ಪೂಜೆ ಕೈಂಕರ್ಯ, ನೃತ್ಯ, ಸಂಗೀತ ಕಾರ್ಯಕ್ರಮಗಳು ಮಾ. 6ರಿಂದ ಪ್ರತಿನಿತ್ಯ ಸಂಜೆ 7ಕ್ಕೆ ನಡೆಯಲಿವೆ. ಅದರಂತೆ ಮಾ. 10ರಂದು ಮಂಗಲೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಮದೇವ ಟ್ರಸ್ಟಿ ಮನೋಹರ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಚಿತ ಆರೋಗ್ಯ ತಪಸಾಣೆ ಶಿಬಿರ ಇಂದು
ಧಾರವಾಡ: ಶ್ರೀ ಬಸವೇಶ್ವರ ರೂರಲ್ ಎಜ್ಯುಕೇಶನ್ ಮತ್ತು ಡೆವಲೆಪ್‌ಮೆಂಟ್ ಟ್ರಸ್ಟ್ ಹಾಗೂ ಸತ್ಯ ಸಾಯಿ ಹೋಮಿಯೋಪಥಿಕ್ ಆಸ್ಪತ್ರೆ ವತಿಯಿಂದ ಮಾ. 6ರಂದು ಇಲ್ಲಿನ ಸತ್ತೂರಿನ ಸತ್ಯ ಸಾಯಿ ಆಸ್ಪತ್ರೆಯಲ್ಲಿ ಮಧುಮೇಹ ಹಾಗೂ ಮೂಲವ್ಯಾಧಿಯ ಸಮಸ್ಯೆಗಳಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಆಸ್ಪತ್ರೆ ಹೊರ ರೋಗಿಗಳ ವಿಭಾಗವನ್ನು ಸಂಪರ್ಕಿಸಬಹುದು ಎಂದು ಸತ್ಯ ಸಾಯಿ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಖಾಲಿ ಗಾಡಾ ಓಡಿಸುವ ಸ್ಪರ್ಧೆ
ಕುಂದಗೋಳ: ತಾಲೂಕಿನ ಗುಡಗೇರಿ ಗ್ರಾಮದ ಶ್ರೀ ಪರ್ವತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಥಮ ಬಾರಿ ರಾಜ್ಯಮಟ್ಟದ ಜೋಡೆತ್ತಿನ ಖಾಲಿ ಗಾಡಾ ಓಡಿಸುವ ಸ್ಪರ್ಧೆಯನ್ನು ಗ್ರಾಮದ ಸೊಸೈಟಿ ಹತ್ತಿರದ ಗುತ್ತಲವರ ಹೊಲದಲ್ಲಿ ಮಾ. 7ರಂದು ಏರ್ಪಡಿಸಲಾಗಿದೆ. ಸ್ಪರ್ಧೆ ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ನಡೆಯಲಿದ್ದು, ಪ್ರಥಮ ಬಹುಮಾನ ರು. 50100, ದ್ವಿತೀಯ ರು. 31000, ತೃತೀಯ ರು. 21000 ಬಹುಮಾನ ನೀಡಲಾಗುವುದು. ಗುಡಗೇರಿ ಗ್ರಾಮದ ಎತ್ತುಗಳಿಗೆ ವಿಶೇಷ ಬಹುಮಾನಗಳಿವೆ. ಪ್ರಥಮ ಒಂದು ಕಬ್ಬಿಣದ ಚಕ್ಕಡಿ, ದ್ವಿತೀಯ ರು. 11,000, ತೃತೀಯ ಬಹುಮಾನ ಎತ್ತಿನ ಕೂರಗಿ ಹಾಗೂ ಇನ್ನೂ ಅನೇಕ ಬಹುಮಾನ ನೀಡಲಾಗುವುದು ಎಂದು ಸಮಿತಿ ತಿಳಿಸಿದೆ.
ಸಹಾಯವಾಣಿ ಆರಂಭ
ಕಲಘಟಗಿ: ಕಲಘಟಗಿ ಪಪಂ ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಚುನಾವಣಾಧಿಕಾರಿಗಳು ಸಾರ್ವಜನಿಕರಿಗೆ ಸಹಾಯವಾಣಿ ಆರಂಭಿಸಿದ್ದಾರೆ. ಚುನಾವಣೆ ಸಂದರ್ಭ ಶಾಂತಿ ಮುಕ್ತ, ಸುಗಮವಾಗಿ, ನಿಷ್ಪಕ್ಷಪಾತವಾಗಿ ನಡೆಯುವ ದೃಷ್ಟಿಯಿಂದಾಗಿ ಈ ಸಹಾಯವಾಣಿ ತೆರೆದಿದ್ದು, ಸಾರ್ವಜನಿಕರು ನೀತಿ ಸಂಹಿತೆ ಉಲ್ಲಂಘನೆ ಕುರಿತು ಈ ಕೆಳಕಂಡ ದೂರವಾಣಿ 08370-284535, ಹಾಗೂ ಎಸ್.ಆರ್. ವೀರಕರ, ತಾಪಂ ಕಾರ್ಯನಿರ್ವಾಕಾಧಿಕಾರಿ-94808634110, ಎಂ.ಜಿ. ಮಾಳಗಿ, ಕ್ಷೇತ್ರ ಶಿಕ್ಷಣಾಧಿಕಾರಿ-94806995187 ಇಲ್ಲಿ ದೂರು ನೀಡಬಹುದಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.