ಧಾರವಾಡ

ಜನರ ಸಮಸ್ಯೆಗಳಿಗೆ ಸ್ಪಂದಿಸಿ

Published On :




ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜ. 31
ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರ ಪ್ರೀತಿ ಮತ್ತು ವಿಶ್ವಾಸ ಗಳಿಸಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಂಡಾಗ ಮಾತ್ರ ನಿಜವಾದ ಜನ ನಾಯಕರಾಗಿ ಬೆಳೆಯಲು ಸಾಧ್ಯ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಆನಂದ್ ಸಿಂಗ್ ಹೇಳಿದರು.
ಗುರುವಾರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜನಪ್ರತಿನಿಧಿಗಳು ತಮಗೆ ಸಿಕ್ಕ ಕಾಲಾವಕಾಶದಲ್ಲಿ ಉತ್ತಮ ಆಡಳಿತ ನೀಡಿ ಸಾಧನೆ ಮಾಡುವಂತಾಗಬೇಕು. ನಗರಸಭೆಯೊಂದಿಗೆ ನಗರಾಭಿವೃದ್ಧಿ ಪ್ರಾಧಿಕಾರವೂ ನಗರದ ಸುಂದರೀಕರಣಕ್ಕೆ ಮುಂದಾಗಬೇಕು. ರು. 7 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ಶೀಘ್ರದಲ್ಲೇ ನಿರ್ಮಿಸಲು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಭೂಮಿಪೂಜೆ ನೆರವೇರಿಸಲಿ. ಸರ್ಕಾರದಿಂದ ಕ್ರೀಡಾಂಗಣ ನಿರ್ಮಾಣಕ್ಕೆ ರು. 5 ಕೋಟಿ  ಬಿಡುಗಡೆಗಳಿಸುವುದಾಗಿ ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಎಸ್. ಚಂದ್ರಬಾಬು ಅಧಿಕಾರ ಸ್ವೀಕರಿಸಿ ಮಾತನಾಡಿ, ನಗರದಲ್ಲಿ ನಿವೇಶನ ರಹಿತ ಜನರಿಗೆ ಕಡಿಮೆ ಬೆಲೆಯಲ್ಲಿ ನಿವೇಶನಗಳನ್ನು ಒದಗಿಸಲು ಶ್ರಮಿಸಲಾಗುವುದು. ನಗರಾಭಿವೃದ್ಧಿ ಪ್ರಾಧಿಕಾರದಿಂದ 5 ಸಾವಿರ ನಿವೇಶನಗಳನ್ನು ಬಡವರ ಕೈಗೆ ನಿಲುಕವ ದರದಲ್ಲಿ ವಿತರಿಸುವ ಚಿಂತನೆ ಇದೆ. ಈಗಾಗಲೇ ನಗರದ ಹೊರ ವಲಯದ ಅಣ್ಣಿಕೆರೆ ಸಮೀಪ 54 ಎಕರೆ ಪ್ರದೇಶವನ್ನು ಖರೀದಿಸಿ ನಿವೇಶನ ಸಿದ್ಧಪಡಿಸುವ ನಿಟ್ಟಿನಲ್ಲಿ ಪ್ರಾಧಿಕಾರ ಮಂದಾಗಿದೆ. ಇಲಾಖೆಯ ಒಪ್ಪಿಗೆಯನ್ನೂ ಪಡೆದುಕೊಳ್ಳಲಾಗಿದೆ ಎಂದು ವಿವರಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್. ಕೊಟ್ರೇಶ್, ನಗರಸಭಾ ಅಧ್ಯಕ್ಷ ಎಂ. ಅಮ್ಜದ್, ಗಣಿ ಉದ್ಯಮಿ ಪಂತರ್ ಜಯಂತ್ ಮಾತನಾಡಿದರು. ಜಂಬಾನಹಳ್ಳಿ ವೆಂಕೋಬಣ್ಣ, ಅಭಿಮನ್ಯು, ಹುಲುಗಪ್ಪ, ಎನ್. ಕೆ. ಹನುಮಂತಪ್ಪ, ಶಿರಾಜುದ್ದೀನ್, ಶ್ರೀನಿವಾಸ, ನೀಲಕಂಠ ಶೆಟ್ಟಿ, ಜಂಬಣ್ಣ, ಸಿ. ನಾಗರಾಜ್, ಎಸ್. ಗಾಳೆಪ್ಪ, ಬ್ಯಾಲಾಳ್ ಪಂಪಾಪತಿ, ಪೃಥ್ವಿರಾಜ್ ಸಿಂಗ್, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಚಂದ್ರಕಾಂತ್ ಕಾಮಾತ್, ಹನುಮೇಶ್ ಗುಜ್ಜಲ್, ರಾಜಶೇಖರ್, ವಿಜಯಲಕ್ಷ್ಮಿ ಕುಲಕರ್ಣಿ ಇದ್ದರು.
ಅನುರಾಧ ಪತ್ತಾರ್ ಪ್ರಾರ್ಥಿಸಿದರು. ಪ್ರಾಧಿಕಾರದ ಆಯುಕ್ತ ಎಲ್. ಡಿ. ಜೋಷಿ ಸ್ವಾಗತಿಸಿದರು. ಪ್ರಾಧ್ಯಾಪಕ ಗುಜ್ಜಲ್ ಹುಲುಗಪ್ಪ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.