ಧಾರವಾಡ

ಡಯಟ್‌ನಲ್ಲಿ ವಿಚಾರ ಸಂಕಿರಣ

Published On :


ಧಾರವಾಡ: ಪ್ರತಿಯೊಬ್ಬ ಭಾರತೀಯನು ಸಂವಿಧಾನ ಬದ್ಧವಾಗಿ ವ್ಯಾಸಂಗದ ಹಕ್ಕನ್ನು ಹೊಂದಿದ್ದಾನೆ. ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಶಿಕ್ಷಣ ಲಭಿಸಬೇಕೆಂಬುದು ನಮ್ಮ ಸರ್ಕಾರಗಳ ಸದಾಶಯ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಉಪಪ್ರಾಚಾರ್ಯ ಎಂ.ಎಫ್. ಕುಂದಗೋಳ ಹೇಳಿದರು.
ಮಂಗಳವಾರ ಇಲ್ಲಿಯ ಡಯಟ್‌ನ ಸಂಶೋಧನೆ, ಮೌಲ್ಯಮಾಪನ, ಉಸ್ತುವಾರಿ ಹಾಗೂ ಮೇಲ್ವಿಚಾರಣೆ ವಿಭಾಗ ವಿಶೇಷ ಅಗತ್ಯವುಳ್ಳ ಮಕ್ಕಳ ಶಿಕ್ಷಣ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿರಬಹುದಾದ ತೊಂದರೆಗಳನ್ನು ಪರಿಗಣಿಸಿದ ಸರ್ಕಾರ, ಗೃಹ ಆಧಾರಿತ ಶಿಕ್ಷಣ ಮತ್ತು ಶಾಲಾ ಆಧಾರಿತ ಶಿಕ್ಷಣ ಕೇಂದ್ರಗಳನ್ನು ಅನುಷ್ಠಾಗೊಳಿಸುವ ಮೂಲಕ ಎಲ್ಲರಿಗೂ ಶಿಕ್ಷಣ ಲಭಿಸುವಂತೆ ಕ್ರಮಕೈಕೊಂಡಿದೆ ಎಂದರು.
ಪ್ರಧಾನ ಉಪನ್ಯಾಸ ನೀಡಿದ ಕವಿವಿ ಶಿಕ್ಷಣ ಕಾಲೇಜಿನ ಪ್ರಾಧ್ಯಾಪಕ ನಾಗಪ್ಪ ಶಹಪುರ, ವಿವಿಧ ವಿಕಲತೆಗಳ ಅರ್ಥ, ವ್ಯಾಪ್ತಿ, ಕಾರಣಗಳು ಹಾಗೂ ಪರಿಹಾರದ ಅಂಶಗಳ ಕುರಿತಾಗಿ ವಿವರಿಸಿ, ಸರ್ವ ಶಿಕ್ಷಣ ಅಭಿಯಾನದ ಹಲವಾರು ಯೋಜನೆಗಳ ಮೂಲಕ ವಂಚಿತ ವಿಕಲಚೇತನ ಮಕ್ಕಳು ವಿದ್ಯಾರ್ಜನೆಯ ಮುಖ್ಯವಾಹಿನಿಗೆ ಸೇರುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ. ಬಿಂಗೇರಿ, ಗಿರೀಶ ಪದಕಿ, ಮೋಹನಕುಮಾರ ಹಂಚಾಟೆ, ಆರ್.ಎಸ್. ಮುಳ್ಳೂರು, ಎಂ.ಬಿ. ಮಾಳಗಿ, ಎಸ್.ಎಸ್. ಕೆಳದಿಮಠ ಮಾತನಾಡಿದರು. ವಿ.ಎನ್. ಕೀರ್ತಿವತಿ ಉಪನ್ಯಾಸ ನೀಡಿದರು. ನಿವೃತ್ತ ಡಿಡಿಪಿಐ ಬಸವರಾಜ ಬೆಟಗೇರಿ ಅಧ್ಯಕ್ಷತೆ ವಹಿಸಿದ್ದರು. ಡಯಟ್ ಹಿರಿಯ ಉಪನ್ಯಾಸಕರಾದ ಗುರುನಾಥ ಹೂಗಾರ, ಉಮಾದೇವಿ ಬಸಾಪುರ, ಅಕ್ಕಮಹಾದೇವಿ ಹೂಗಾರ, ಜಿಲ್ಲೆಯ ಎಲ್ಲ ತಾಲೂಕುಗಳ ಸರ್ವ ಶಿಕ್ಷಣ ಅಭಿಯಾನದ ಕ್ಷೇತ್ರ ಸಂಪನ್ಮೂಲ ಕೇಂದ್ರಗಳ ಸಮನ್ವಯಾಧಿಕಾರಿಗಳು, ಡಯಟ್ ಉಪನ್ಯಾಸಕರು ಮತ್ತಿತರರು ಇದ್ದರು.
ಧಾರವಾಡ: ಇಂದು ಸರ್ವಧರ್ಮ ಪ್ರಾರ್ಥನೆ
ಧಾರವಾಡ: ನಗರದ ಗಾಂಧೀ ಶಾಂತಿ ಪ್ರತಿಷ್ಠಾನ ಕೇಂದ್ರ ಜ. 30ರಂದು ಹುತಾತ್ಮರ ದಿನಾಚರಣೆ ನಿಮಿತ್ತ ಸಂಜೆ 5.30ಕ್ಕೆ ಕೇಂದ್ರದಲ್ಲಿ ಸರ್ವಧರ್ಮ ಪ್ರಾಥನಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರೊ.ಕೆ.ಎಸ್. ಭಸ್ಮೆ ಅಧ್ಯಕ್ಷತೆ ವಹಿಸುತ್ತಾರೆಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.