ಉರ್ದು ಹಾಡುಗಳ ಮಾಧುರ್ಯ ವಿಶಿಷ್ಟ
ಕನ್ನಡಪ್ರಭ ವಾರ್ತೆ, ಧಾರವಾಡ, ಜ. 28
ಉರ್ದು ಭಾಷೆಯ ಶಬ್ದಗಳು ಸಂಗೀತಕ್ಕೆ ಮೇಳೈಸಿದಷ್ಟು ಹಿಂದಿ ಶಬ್ದಗಳು ಹೊಂದಿಕೆಯಾಗುವುದಿಲ್ಲ. ಉರ್ದು ಬಳಕೆಯ ಹಾಡುಗಳ ಮಾಧುರ್ಯವೇ ವಿಶಿಷ್ಟವಾದುದು. ಅದು ಉರ್ದು ಶಕ್ತಿ ಎಂದು ಜ್ಞಾನಪೀಠ ಪುರಸ್ಕೃತ ಡಾ. ಗಿರೀಶ ಕಾರ್ನಾಡ ಹೇಳಿದರು.
ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕಿಂಗ್ಸ್ ಕಾಯನಾತ ಎಂಟರಟೇನ್ಮೆಂಟ್ ಸಂಸ್ಥೆ ಸೋಮವಾರ ಆಯೋಜಿಸಿದ್ದ ಅನೀಸ್ ಬಾರೂದವಾಲೆ ಬರೆದ 'ಗಿರೀಶ ಕಾರ್ನಾಡ್' ಹಾಗೂ 'ಜ್ಞಾನಪೀಠ ಕೆ ಫಾತೆ' ಎಂಬ ಎರಡು ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಹಿಂದಿ ಚಿತ್ರಗಳಲ್ಲಿ ಉರ್ದು ಭಾಷೆ ಹೆಚ್ಚು ಬಳಕೆಯಾಗುವುದಲ್ಲದೆ ಕಿವಿಗಳಿಗೆ ಇಂಪು ನೀಡುತ್ತದೆ. ಹಿಂದಿ ಭಾಷೆ ಹೆಚ್ಚು ಜನಪ್ರಿಯವಾಗಲು ಉರ್ದು ಭಾಷೆಯ ಕೊಡುಗೆ ದೊಡ್ಡದು. ನನ್ನ ಕುರಿತು ವಿದೇಶದ ಖ್ಯಾತ ಲೇಖಕರು ಸಾಕಷ್ಟು ಕೃತಿಗಳನ್ನು ಬರೆದಿದ್ದಾರೆ. ಆದರೆ ನಮ್ಮೂರಿನ ಒಬ್ಬ ಯುವ ಉರ್ದು ಲೇಖಕ ಅನೀಸ ಬಾರೂದವಾಲೆ ನನ್ನ ಬಗ್ಗೆ ಮತ್ತು ನನ್ನ ನಾಟಕಗಳ ಕುರಿತು ಬರೆದಿರುವುದು ಅತೀವ ಸಂತೋಷ ತಂದಿದೆ ಎಂದರು.
ಕೃತಿಕಾರ ಅನೀಸ ಬಾರೂದವಾಲೆ ಮಾತನಾಡಿ, ಕಾರ್ನಾಡರು ಸಾಹಿತ್ಯ ಕ್ಷೇತ್ರದ ಆಲದ ಮರ. ತನ್ನ ನೆರಳಿನಲ್ಲಿ ಹಲವರಿಗೆ ಆಶ್ರಯ ಹಾಗೂ ಮಾರ್ಗದರ್ಶನ ನೀಡಿದ್ದಾರೆ. ಸಾಮಾನ್ಯವಾಗಿ ಲೇಖಕರು ತುಂಬಾ ತಡವಾಗಿ ಯಶಸ್ವಿಯಾಗುತ್ತಾರೆ. ಆದರೆ ಕಾರ್ನಾಡರು ಪ್ರಥಮ ಕೃತಿಯಿಂದಲೇ ಯಶಸ್ವಿ ಪಡೆದರು. ನಾಟಕಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ವಿಶ್ವ ಮನ್ನಣೆ ದೊರಕಿಸಿಕೊಟ್ಟ ಅಪರೂಪದ ಲೇಖಕರು ಎಂದರು.
ಅತಿಥಿ ಚೇತನಕುಮಾರ ನಾಯಕ ಮಾತನಾಡಿ, ಕಾರ್ನಾಡರ ಪ್ರತಿ ನಾಟಕಗಳಲ್ಲೂ ಒಂದು ಹೊಸತನ ಇರುತ್ತದೆ. ಸಮಾಜದ ವಿವಿಧ ಮಗ್ಗಲುಗಳನ್ನು ಮುಟ್ಟುವ, ಹೊಸ ಆಯಾಮ ದೊರಕಿಸಿಕೊಡುವ ಸಾಮರ್ಥ್ಯ ಅವರ ನಾಟಕಗಳಿಗಿದೆ. ಧಾರವಾಡದಲ್ಲಿದ್ದಾಗ ಕಾರ್ನಾಡರ ನಾಟಕಗಳಲ್ಲಿ ನಟಿಸಿ ನಿರ್ದೇಶಿಸಿರುವ ತೃಪ್ತಿ ನನಗಿದೆ ಎಂದರು. ಡಾ. ಇಕ್ಬಾಲ ಶೇಖ ಇದ್ದರು. ಮಹಮ್ಮದಲಿ ಗೂಡುಭಾಯಿ ಸ್ವಾಗತಿಸಿದರು. ಎಂ.ಎ. ಮೋಮಿನ ವಂದಿಸಿದರು. ಎನ್.ಜಿ. ಬಿಜಾಪೂರ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

