ರೇಲ್ವೆ ಬಜೆಟ್ 2013 ಜನ ಏನಂತಾರೆ?
ಈ ಹಿಂದಿನ ರೈಲ್ವೆ ಸಚಿವರು ಸಣ್ಣಪುಟ್ಟ ಜನಪ್ರಿಯ ಯೋಜನೆಗಳನ್ನಾದರೂ ಬಜೆಟ್ನಲ್ಲಿ ಪ್ರಕಟಿಸುತ್ತಿದ್ದರು. ಕೇಂದ್ರ ರೈಲ್ವೆ ಸಚಿವ ಪಿ.ಕೆ. ಬನ್ಸಾಲ್ ಅವರು ಮಂಡಿಸಿದ ಬಜೆಟ್ನಲ್ಲಿ ಅಂತಹ ಯೋಜನೆಗಳು ಇಲ್ಲದ ಶೂನ್ಯ ಬಜೆಟ್.ಕೇಂದ್ರ ರೈಲ್ವೆ ಬಜೆಟ್ ಕುರಿತು ನೀಡಿರುವ ಪ್ರತಿಕ್ರಿಯೆಯಲ್ಲಿ ಕಳೆದ ಬಜೆಟ್ನಲ್ಲಿ ದಕ್ಷಿಣದ ರಾಜ್ಯಗಳಿಗೆ ಒಂದಷ್ಟು ಹೊಸ ರೈಲು ಲಭಿಸಿದ್ದವು. 17 ವರ್ಷಗಳ ನಂತರ ಕಾಂಗ್ರೆಸ್ ಸಚಿವರೊಬ್ಬರು ಮಂಡಿಸಿರುವ ಈ ಬಜೆಟ್ನಲ್ಲಿ ಹೊಸ ಚಿಂತನೆಗಳಿಲ್ಲ. ಹೊಸ ರೈಲು ಮಾರ್ಗ ಸಮೀಕ್ಷೆಯಲ್ಲಿ ಹುಬ್ಬಳ್ಳಿ-ಧಾರವಾಡ-ಕಿತ್ತೂರು-ಬೆಳಗಾವಿ ಮಾರ್ಗದ ಬಗ್ಗೆ ಉಲ್ಲೇಖವಿಲ್ಲ.
- ಪ್ರಹ್ಲಾದ್ ಜೋಶಿ, ಸಂಸದ
ಬೆಂಗಳೂರು, ತುಮಕೂರು, ಅರಸಿಕೆರೆ, ಹುಬ್ಬಳ್ಳಿಯಿಂದ ಮೀರಜ್ವರೆಗೆ ರೇಲ್ವೆ ಲೈನ್ ಡಬ್ಲಿಂಗ್ ಮತ್ತು ವಿದ್ಯುದ್ದೀಕರಣಕ್ಕೆ ಈ ಬಾರಿ ರೈಲ್ವೆ ಬಜೆಟ್ನಲ್ಲಿ ಅನುದಾನ ದೊರೆಯಬಹುದು ಎಂಬ ವಿಶ್ವಾಸ ಇತ್ತು. ಇದಕ್ಕೂ ಕೂಡ ಅನುದಾನ ದೊರೆತಿಲ್ಲ. ಹುಬ್ಬಳ್ಳಿ-ಮುಂಬೈಗೆ ನೇರ ರೈಲ್ವೆ ಸಂಪರ್ಕ ಕೇಳಿದ್ದೇವು ವಾರಕ್ಕೆ ಒಂದು ಬಾರಿ ಸಂಚರಿಸುವ ರೇಲು ನೀಡಲಾಗಿದ್ದು ಇದರಿಂದ ಪ್ರಯೋಜನವಂತೂ ಇಲ್ಲ. ಪ್ರಯಾಣ ದರ ಏರಿಕೆ ಮಾಡದಿರುವುದು. ಇಂಟರ್ನೆಟ್ ವೇಗ ಹೆಚ್ಚಳಗೊಳಿಸುವ ಇನ್ನಿತರ ಕ್ರಮಗಳು ಸ್ವಾಗತಾರ್ಹ
- ಮಹೇಂದ್ರ ಸಿಂಘಿ
ನೈಋತ್ಯ ರೇಲ್ವೆ ವಲಯ ಸಲಹಾ ಸಮಿತಿ ಸದಸ್ಯ
ವಾರಕ್ಕೊಂದು ಬಾರಿ ಹುಬ್ಬಳ್ಳಿ-ಮುಂಬೈ ರೇಲ್ವೆಯನ್ನು ಪ್ರಸಕ್ತ ಬಜೆಟ್ನಲ್ಲಿ ಪರಿಚಯಿಸುವ ಮೂಲಕ ಕೇಂದ್ರ ಸರ್ಕಾರ ಈ ಭಾಗದ ಅಭಿವೃದ್ಧಿಗೆ ನೆರವಾಗಿದೆ. ವಾರಕ್ಕೆ ಎರಡು ಬಾರಿ ಸಂಚರಿಸುತ್ತಿದ್ದ ಹುಬ್ಬಳ್ಳಿ ದೆಹಲಿ ರೇಲ್ವೆಯನ್ನು ವಾರದಲ್ಲಿ ನಾಲ್ಕು ಬಾರಿ ಸಂಚರಿಸುವುದಕ್ಕೆ ಅನುಕೂಲ ಮಾಡಿಕೊಟ್ಟಿರುವುದು ಉತ್ತಮ ಬೆಳವಣಿಗೆ. ಇನ್ನಷ್ಟು ರೇಲ್ವೆಗಳು ಸಂಚಾರ ಆರಂಭವಾಗುವಂತೆ ಮಾಡಬೇಕಾಗಿತ್ತು.
- ಪಿ. ಪಾಲಾ ಸಯೀದ್, ನೈಋತ್ಯ ರೇಲ್ವೆ ವಲಯ ಸಲಹಾ ಸಮಿತಿ ಸದಸ್ಯ
ಸಂಸದ ಪ್ರಹ್ಲಾದ್ ಜೋಶಿ ಅವರ ನೇತೃತ್ವದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿಉ-ಕದಲ್ಲಿ ವಾಣಿಜ್ಯೋದ್ಯಮಿಗಳ ಪರವಾಗಿ ನಮ್ಮ ಆಶಯ ವ್ಯಕ್ತಪಡಿಸಿದ್ದೆವು. ಆದರೆ, ಅದರ ಪೈಕಿ ಶೇ. 2ರಷ್ಟು ಕೂಡ ಈಡೇರಿಸಿಲ್ಲ.
- ವಿಶ್ವನಾಥ ಗಿಣಿಮಾವ್, ಹುಬ್ಬಳ್ಳಿ ಚೆಂಬರ್ ಆಫ್ ಕಾಮರ್ಸ್
ಹಲವಾರು ವರ್ಷಗಳಿಂದ ಬೇಡಿಕೆಗಳಾಗಿಯೇ ಉಳಿದ ನೈರುತ್ಯ ರೇಲ್ವೆ ವಿಭಾಗದ ಅನೇಕ ಯೋಜನೆಗಳಿಗೆ ಈ ಬಾರಿಯೂ ಅನುಮೋದನೆ ದೊರೆತಿಲ್ಲ. ಯಾವುದೇ ಹೊಸ ಮಾರ್ಗಗಳಿಲ್ಲ.
- ಪಿ.ಜಿ. ನರಸಾಪುರ (ರೇಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ) ಧಾರವಾಡ.
ರಾಜ್ಯದಲ್ಲಿ ಹಲವು ರೇಲ್ವೆ ಯೋಜನೆಗಳು ಹಾಗೂ ಅನುದಾನ ಪಡೆಯಲು ಕೇಂದ್ರ ರೇಲ್ವೆ ಸಚಿವರ ಮೇಲೆ ರಾಜ್ಯದ ಸಂಸದರು ಒಗ್ಗಟ್ಟಿನಿಂದ ಕೇಂದ್ರದ ಮೇಲೆ ಒತ್ತಡ ತರುವಲ್ಲಿ ವಿಫಲರಾಗಿದ್ದಾರೆ. 50 ವರ್ಷಗಳಿಂದ ಯಾವೊಬ್ಬ ಸಂಸದರು ರಾಜ್ಯದ ಪರವಾಗಿ ಧ್ವನಿ ಎತ್ತಿ ಬೇಡಿಕೆ ಈಡೇರಿಸಿಕೊಂಡಿಲ್ಲ
- ಡಾ.ಎಂ.ಐ. ಸವದತ್ತಿ (ವಿಶ್ರಾಂತ ಕುಲಪತಿ)
ವಾರಕ್ಕೆ ಒಂದು ಬಾರಿ ಮಾತ್ರ ಮುಂಬೈಗೆ ಹುಬ್ಬಳ್ಳಿಯಿಂದ ಪ್ರಯಾಣಿಕರು ಹೋಗುತ್ತಾರೆಯೇ? ಬೆಂಗಳೂರಿಗೆ ಪ್ರತಿದಿನ ರೈಲು ಸೌಲಭ್ಯ ಇರುವಂತೆ ಮುಂಬೈಗೂ ನೇರ ರೇಲ್ವೆ ಸೌಲಭ್ಯ ಬೇಕು.
- ಜಬ್ಬಾರ್ಖಾನ್ ಹೊನ್ನಳ್ಳಿ
ಕೆಜೆಪಿ ಮುಖಂಡ
ಪ್ರಯಾಣಿಕರಿಗೆ ಹೊರೆಯಾಗದಂತಹ ಬಜೆಟ್ನ್ನು ರೇಲ್ವೆ ಸಚಿವ ಪಿ.ಕೆ.ಬನ್ಸಾಲ್ ಅವರು ನೀಡಿದ್ದಾರೆ. ಹುಬ್ಬಳ್ಳಿ-ಮುಂಬೈಗೆ ನೇರ ರೇಲ್ವೆ ಸೌಲಭ್ಯ ಕಲ್ಪಿಸುವುದಕ್ಕೆ ಇದೀಗ ವಾರಕ್ಕೆ ಒಂದು ಬಾರಿ ರೇಲ್ವೆ ಸಂಚಾರ ಆರಂಭಿಸಿರುವುದು ಸ್ವಾಗತಾರ್ಹ.
- ಎಚ್.ಕೆ. ಪಾಟೀಲ, ಮಾಜಿ ಸಚಿವ
ರಸ್ತೆ ಕಾಮಗಾರಿಗೆ ಭೂಮಿಪೂಜೆ
ಕಲಘಟಗಿ: ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದ ಮಣಬಸವೇಶ್ವರ ದೇವಸ್ಥಾನದ ಬಳಿಯಲ್ಲಿನ ರಸ್ತೆ ಕಾಮಗಾರಿಗೆ ತಾಪಂ ಅದ್ಯಕ್ಷ ಬಸವಣ್ಣಯ್ಯ ಹಿರೇಮಠ ಭೂಮಿಪೂಜೆ ನೆರವೇರಿಸಿದರು. ತಾಪಂ ವಿಶೇಷ ಅನುದಾನದಲ್ಲಿ ಈ ರಸ್ತೆ ಕಾಮಗಾರಿಯನ್ನು ಮಾಡಲಾಗುತ್ತಿದ್ದು, ಉತ್ತಮ ಗುಣಮಟ್ಟದ್ದಾಗುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಕೆಜೆಪಿ ಸಂಚಾಲಕ ಸಿ.ಎಂ. ನಿಂಬಣ್ಣವರ ಹೇಳಿದರು. ಮಾಜಿ ಜಿಪಂ ಸದಸ್ಯ ಸಿ.ಎಫ್. ಪಾಟೀಲ, ಎಪಿಎಂಸಿ ಸದಸ್ಯ ಎಸ್.ವಿ. ಗಾಯತೊಂಡೆ, ಗ್ರಾಪಂ ಅಧ್ಯಕ್ಷರಾದ ಜೀವಣ್ಣವರ, ಉಳವಪ್ಪ ಬಳಿಗೇರ, ಎಸ್.ವಿ. ಮಾದೇಗೌಡರ, ಭೀಮನಗೌಡ ಪಾಟೀಲ, ಬಸವರಾಜ ತಿಪ್ಪಣ್ಣವರ, ಕಲ್ಲಪ್ಪ ಹರಿಜನ, ಮುರುಘೇಂದ್ರ ಹಿರೇಮಠ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

